ಬ್ಯಾಂಕಿಂಗ್ ಸೇವೆಗಳಲ್ಲಿ ಮಹತ್ತರ ಬದಲಾವಣೆ – ಮೇ 1ರಿಂದ  ATM ಕ್ಯಾಷ್ ವಿತ್​ಡ್ರಾ ಶುಲ್ಕ ಹೆಚ್ಚಳ

ಬ್ಯಾಂಕಿಂಗ್ ಸೇವೆಗಳಲ್ಲಿ ಮಹತ್ತರ ಬದಲಾವಣೆ – ಮೇ 1ರಿಂದ  ATM ಕ್ಯಾಷ್ ವಿತ್​ಡ್ರಾ ಶುಲ್ಕ ಹೆಚ್ಚಳ

ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಆರ್‌ಬಿಐ ಮತ್ತೆ ಶಾಕ್‌ ನೀಡಿದೆ. ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡುವುದರ ಮೇಲೆ ವಿಧಿಸಲಾಗುವ ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಮೇ.1 ರಿಂದ ಹಣ ವಿತ್ ಡ್ರಾ ಮಾಡುವುದರ ಮೇಲಿನ ಶುಲ್ಕ 2 ರೂ. ಹೆಚ್ಚಳವಾಗಲಿದೆ.

ಇದನ್ನೂ ಓದಿ: ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡ್ತಿದ್ದಾರೆ! – ಹೊಸ ಬಾಂಬ್‌ ಸಿಡಿಸಿದ ಯತ್ನಾಳ್‌

ಒಂದು ತಿಂಗಳಿಗೆ ಎಟಿಎಂನಿಂದ 5 ಬಾರಿ ಉಚಿತವಾಗಿ ಹಣವನ್ನು ಡ್ರಾ ಮಾಡಬಹುದು. ಅದಕ್ಕಿಂತ ಹೆಚ್ಚು ಬಾರಿ ಹಣ ವಿತ್ ಡ್ರಾ ಮಾಡಲು ಹೋದರೆ 31 ರೂ.ಗಳನ್ನು ಕಡಿತಗೊಳಿಸುತ್ತಿತ್ತು. ಆದರೆ ಇದೀಗ ಈ ಶುಲ್ಕವನ್ನು 2ರೂ.ಗೆ ಏರಿಕೆ ಮಾಡಿದ್ದು, ಗರಿಷ್ಠ ಮಿತಿ ಮೀರಿ ಡ್ರಾ ಮಾಡಿದ್ರೆ 23 ರೂ. ಕಡಿತಗೊಳ್ಳಲಿವೆ. ಈ ಮೂಲಕ 21 ರೂ.ಯಿಂದ 23 ರೂ.ಗೆ ಏರಿಕೆಯಾಗಿದೆ.

ಪ್ರಸ್ತುತ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಮತ್ತು ನವದೆಹಲಿಯಲ್ಲಿ ಖಾತೆ ಹೊಂದಿರುವವರು ತಮ್ಮ ಬ್ಯಾಂಕಿನ ಎಟಿಎಂಗಳಲ್ಲಿ ಮಾಸಿಕ ಐದು ಮತ್ತು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಮೂರು ಉಚಿತ ವಿತ್ ಡ್ರಾ ಮಾಡಿಕೊಳ್ಳಬಹುದು. ಇದರ ಪ್ರಮಾಣದಲ್ಲಿ ಹೆಚ್ಚಳವಾದಾಗ ಆಗ ಈ 2ರೂ. ಏರಿಕೆಯ ಇಂಟರ್‌ಚೇಂಜ್ ಶುಲ್ಕವು  ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ.

ಇತ್ತೀಚಿನ ದಿನಗಳಲ್ಲಿ ಎಟಿಎಂ ಬಳಕೆ ಸ್ಥಿರವಾಗಿ ಕುಸಿತ ಕಂಡಿದೆ. ಆರ್‌ಬಿಐ ಅಂಕಿಅಂಶಗಳ ಪ್ರಕಾರ, 2023ರ ಜನವರಿಯಲ್ಲಿ 57 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆದಿತ್ತು. ಇನ್ನೂ 2024ರ ಜನವರಿಯಲ್ಲಿ 52.72 ಕೋಟಿ ರೂ.ಗೆ ಇಳಿಕೆ ಕಂಡುಬಂದಿತ್ತು. ಈ ವರ್ಷ ಜನವರಿಯಲ್ಲಿ ಇದು 48.83 ಕೋಟಿ ರೂ.ಗೆ ಇಳಿಕೆಯಾಗಿದೆ.

Shwetha M

Leave a Reply

Your email address will not be published. Required fields are marked *