‘ಬ್ರಿಜ್ ಭೂಷಣ್ ರನ್ನ ಬಂಧಿಸಿ.. ಒಕ್ಕೂಟಕ್ಕೆ ಮಹಿಳಾ ಅಧ್ಯಕ್ಷರನ್ನ ನೇಮಿಸಿ’ – ಕ್ರೀಡಾ ಸಚಿವರ ಮುಂದೆ ಕುಸ್ತಿಪಟುಗಳ ಬೇಡಿಕೆ!

‘ಬ್ರಿಜ್ ಭೂಷಣ್ ರನ್ನ ಬಂಧಿಸಿ.. ಒಕ್ಕೂಟಕ್ಕೆ ಮಹಿಳಾ ಅಧ್ಯಕ್ಷರನ್ನ ನೇಮಿಸಿ’ – ಕ್ರೀಡಾ ಸಚಿವರ ಮುಂದೆ ಕುಸ್ತಿಪಟುಗಳ ಬೇಡಿಕೆ!

ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್​ ಬಂಧನಕ್ಕೆ ಒತ್ತಾಯಿಸಿ ಕುಸ್ತಿಪಟುಗಳು ಹೋರಾಟ ಮುಂದುವರಿಸಿದ್ದಾರೆ. ಇದೀಗ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕುಸ್ತಿಪಟುಗಳ ಸಭೆ ನಡೆಸಿದ್ದಾರೆ. ಈ ವೇಳೆ ಸಚಿವರ ಮುಂದೆ ಕುಸ್ತಿಪಟುಗಳು 5 ಬೇಡಿಕೆಗಳನ್ನ ಇಟ್ಟಿದ್ದಾರೆ.

ಇದನ್ನೂ ಓದಿ : ಒಡಿಶಾ ರೈಲು ದುರಂತದ ಬಗ್ಗೆ ಸಿಬಿಐ ತನಿಖೆ – 40 ಮೃತದೇಹಗಳ ಮೇಲೆ ಸಣ್ಣ ಗಾಯವೂ ಆಗಿಲ್ಲ!

ಒಂದೂವರೆ ತಿಂಗಳಿಂದಲೂ ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಜೊತೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸಭೆ ನಡೆಸಿದ್ದಾರೆ. ಸಚಿವರ ಮುಂದೆ ಕುಸ್ತಿಪಟುಗಳು 5 ಬೇಡಿಕೆಗಳನ್ನು ಇಟ್ಟಿದ್ದಾರೆ. ಅದರಲ್ಲಿ ಒಂದು ಮಹಿಳಾ ಫೆಡರೇಷನ್ ಮುಖ್ಯಸ್ಥರು ಬೇಕು ಎಂದು ಹೇಳಿದ್ದಾರೆ. ಕ್ರೀಡಾ ಸಚಿವ ಅನುರಾಗ್ ಸಭೆಗೆ ಆಹ್ವಾನ ನೀಡಿದ್ದು, ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಮತ್ತು ಸಾಕ್ಷಿ ಮಲಿಕ್ ಅವರು ಕ್ರೀಡಾ ಸಚಿವರ ಮನೆಯಲ್ಲಿ ಮಾತುಕತೆ ನಡೆಸಿದರು.ಭಾರತ ಕುಸ್ತಿ ಒಕ್ಕೂಟಕ್ಕೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಹಾಗೂ ಮಹಿಳಾ ಮುಖ್ಯಸ್ಥರ ನೇಮಕ ಸೇರಿದಂತೆ ಐದು ಬೇಡಿಕೆಗಳನ್ನು ಕುಸ್ತಿಪಟುಗಳು ಸಚಿವರಿಗೆ ಸಲ್ಲಿಸಿದರು. ಬ್ರಿಜ್ ಭೂಷಣ್ ಸಿಂಗ್ ಅಥವಾ ಅವರ ಕುಟುಂಬ ಸದಸ್ಯರು ಡಬ್ಲ್ಯುಎಫ್‌ಐ ಭಾಗವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಬ್ರಿಜ್ ಭೂಷಣ್ ಸಿಂಗ್ ಬಂಧನ ಮಾಡಬೇಕು ಎಂದು ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.

ಐದು ದಿನಗಳಲ್ಲಿ ಕುಸ್ತಿಪಟುಗಳು ಮತ್ತು ಸರ್ಕಾರದ ನಡುವೆ  ನಡೆದ ಎರಡನೇ ಸಭೆ ಇದಾಗಿದೆ. ಏಳು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕೈಗೊಳ್ಳಲು ಕುಸ್ತಿಪಟುಗಳು ಶನಿವಾರ ತಡರಾತ್ರಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು.

suddiyaana