ಅಥಿಯಾ ಶೆಟ್ಟಿ ಲೆಹಂಗಾ ತಯಾರಿಕೆಗೆ ಬೇಕಾಯ್ತು ಒಂದು ವರ್ಷ..! – ಅಚ್ಚರಿ ವಿಚಾರ ಹೇಳಿದ ಡಿಸೈನರ್
ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಸೋಮವಾರ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಸಂತಸ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮದುವೆಯಲ್ಲಿ ಅಥಿಯಾ ಪಿಂಕ್ ಬಣ್ಣದ ಗ್ರ್ಯಾಂಡ್ ಡ್ರೆಸ್‌ನಲ್ಲಿ ಮಿಂಚಿದ್ರೆ, ರಾಹುಲ್ ಬಿಳಿ ಬಣ್ಣದ ಶೆರ್ವಾನಿಯಲ್ಲಿ ಕಂಗೊಳಿಸಿದ್ದರು. ಇದೀಗ ಅಥಿಯಾ ಶೆಟ್ಟಿ ಧರಿಸಿದ್ದ ಲೆಹೆಂಗಾದ ಬಗ್ಗೆ ಕುತೂಹಲಕಾರಿ ಸಂಗತಿ ರಿವೀಲ್ ಆಗಿದೆ.
ಇದನ್ನೂ ಓದಿ: ಥಿಯೇಟರ್ ಗಳನ್ನು “ಕಬ್ಜ” ಮಾಡಲು ಮುಹೂರ್ತ ಫಿಕ್ಸ್ – ಅಪ್ಪು ಬರ್ತಡೇಯಂದೇ ಪರಾಕ್!
ಕೆ.ಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಇಬ್ಬರೂ ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇನ್ನೂ ಮದುವೆಯಲ್ಲಿ ಅಥಿಯಾ ಧರಿಸಿದ್ದ ಲೆಹೆಂಗಾ ಎಲ್ಲರ ಗಮನ ಸೆಳೆದಿದೆ. ಈ ಲೆಹೆಂಗಾವನ್ನು ಅವರ ಕಾಸ್ಟ್ಯೂಮ್ ಡಿಸೈನರ್ ಅನಾಮಿಕಾ ಖನ್ನಾ ವಿನ್ಯಾಸ ಮಾಡಿದ್ದಾರೆ. ಅಥಿಯಾ ಧರಿಸಿದ್ದ ಲೆಹಂಗಾ ಮೇಲೆ ವಿಶೇಷವಾಗಿ ಹ್ಯಾಂಡ್ ಮೇಡ್ ವರ್ಕ್ ಮಾಡಲಾಗಿದೆ. ಈ ವಿನ್ಯಾಸವನ್ನು ಕೈಯಿಂದ ನೇಯ್ಗೆ ಮಾಡಲಾಗಿದ್ದು ಜರ್ದೋಜಿ ಮಚ್ಚು ಜಾಲಿ ವರ್ಕ್ ಅನ್ನು ರೇಶ್ಮೆಯಿಂದ ಮಾಡಿಸಲಾಗಿದೆ. ರೇಶ್ಮೆ ಆರ್ಗನ್ಜಾದಿಂದ ಮಾಡಿದ ದುಪಟ್ಟಾವನ್ನು ಧರಿಸಿದ್ದರು. ಈ ಬಟ್ಟೆಯನ್ನು ವಿನ್ಯಾಸ ಮಾಡಲು ಬರೋಬ್ಬರಿ 10 ಸಾವಿರ ಗಂಟೆ ಸಮಯ ತೆಗೆದುಕೊಂಡಿದೆಯಂತೆ.
ಈ ಬಗ್ಗೆ ಅನಾಮಿಕಾ ಖನ್ನಾ ಮಾತನಾಡಿದ್ದು, ಅಥಿಯಾ ಧರಿಸಿದ್ದ ಲೆಹೆಂಗಾವನ್ನು ತಯಾರಿಸಲು ಬರೋಬ್ಬರಿ 10 ಸಾವಿರ ಗಂಟೆಗಳು ಬೇಕಾಯಿತು. ಅಂದರೆ 1 ವರ್ಷ 51 ದಿನಗಳು ಬೇಕಾಯಿತು. ಇಷ್ಟು ಸುಂದರವಾಗಿ ಲೆಹಂಗಾ ತಯಾರಿಸಲು ಸ್ಫೂರ್ತಿಯೇ ಆಥಿಯಾ ಶೆಟ್ಟಿ. ಹಾಗಾಗಿ ಅವರಿಗೋಸ್ಕರ ಸ್ಪೆಷಲ್ ಲೆಹಾಂಗಾ ತಯಾರಿಸಲಾಗಿದೆ ಎಂದು ಹೇಳಿದ್ದಾರೆ.
View this post on Instagram