ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆ.ಎಲ್ ರಾಹುಲ್,  ಅಥಿಯಾ ಶೆಟ್ಟಿ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆ.ಎಲ್ ರಾಹುಲ್,  ಅಥಿಯಾ ಶೆಟ್ಟಿ

ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಟೀಮ್ ಕ್ಯಾಪ್ಟನ್ ಕೆ.ಎಲ್ ರಾಹುಲ್ ಡಬಲ್ ಖುಷಿಯಲ್ಲಿದ್ದಾರೆ. ಇಂಜುರಿ ಅಗ್ನಿಪರೀಕ್ಷೆಯಿಂದ ಗೆದ್ದುಬಂದು ಐಪಿಎಲ್‌ನಲ್ಲಿ ಎಲ್ಎಸ್‌ಜಿ  ಟೀಮ್ ಲೀಡ್ ಮಾಡ್ತಿರುವ ಕೆ.ಎಲ್ ರಾಹುಲ್ ತಂದೆಯಾಗ್ತಿದ್ದಾರಾ. ಹೀಗೊಂದು ಸುದ್ದಿ ಈಗ ಭಾರಿ ಸದ್ದು ಮಾಡ್ತಿದೆ. ಈ ಗುಡ್ ನ್ಯೂಸ್ ರಿವೀಲ್ ಮಾಡಿದ್ಯಾರು ಗೊತ್ತಾ?

ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಗೆ ಏನಾಗಿದೆ? – ಆತಂಕದಲ್ಲಿ ಫ್ಯಾನ್ಸ್‌

ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್ ಕೆ.ಎಲ್ ರಾಹುಲ್. ಈಗ ಐಪಿಎಲ್ನಲ್ಲೂ ಕನ್ನಡಿಗ ಕ್ರಿಕೆಟಿಗನದ್ದೇ ಹವಾ. ಲಕ್ನೋ ಸೂಪರ್ ಜೈಂಟ್ಸ್ ಟೀಮ್ ಕ್ಯಾಪ್ಟನ್ ಕೆ.ಎಲ್ ರಾಹುಲ್ ತಂದೆಯಾಗ್ತಿದ್ದಾರೆ. ಈ ಸುದ್ದಿಯನ್ನು ರಿವೀಲ್ ಮಾಡಿದ್ದು, ಮತ್ಯಾರು ಅಲ್ಲ, ಕೆ.ಎಲ್ ರಾಹುಲ್ ಮಾವ ಸುನೀಲ್ ಶೆಟ್ಟಿ. ಬಾಲಿವುಡ್ ನಟ, ದಿಗ್ಗಜ ಸುನಿಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟರ್ ಕೆಎಲ್ ರಾಹುಲ್ ಅವರದ್ದು ಲವ್ ಮ್ಯಾರೇಜ್. ಕಳೆದ ವರ್ಷ ಇವರಿಬ್ಬರ ಮದುವೆ ಅದ್ದೂರಿಯಾಗಿ ನಡೆದಿತ್ತು. ಇದೀಗ ರಾಹುಲ್ ಮತ್ತು ಅಥಿಯಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.

ಅಥಿಯಾ ತಂದೆ ಸುನೀಲ್ ಶೆಟ್ಟಿ ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ. ‘ಡ್ಯಾನ್ಸ್ ದೀವಾನೆ’ ರಿಯಾಲಿಟಿ ಶೋಗೆ ಅವರು ಜಡ್ಜ್ ಆಗಿದ್ದಾರೆ. ಇತ್ತೀಚೆಗೆ ನಡೆದ ಈ ರಿಯಾಲಿಟಿ ಶೋನ ಎಪಿಸೋಡ್ಗೆ ‘ಗ್ರ್ಯಾಂಡ್ ಮಸ್ತಿ ವಿತ್ ಗ್ರ್ಯಾಂಡ್ ಪೇರೆಂಟ್ಸ್’ ಎಂದು ಟೈಟಲ್ ಇಡಲಾಗಿತ್ತು. ಈ ವೇಳೆ ಭಾರತಿ ಸಿಂಗ್ ‘ತಾತ ಆದರೆ ಹೇಗೆ ನಡೆದುಕೊಳ್ಳುತ್ತೀರಿ? ನೀವು ಯಾವಾಗಲೂ ಕೂಲ್ ಆಗಿ ಇರುತ್ತೀರಲ್ಲ’ ಎಂದು ಕೇಳಿದರು. ಇದಕ್ಕೆ ಸುನೀಲ್ ಶೆಟ್ಟಿ ಉತ್ತರ ನೀಡಿದ್ದಾರೆ. ‘ಈ ರಿಯಾಲಿಟಿ ಶೋನ ಮುಂದಿನ ಸೀಸನ್‌ ಗೆ ಬರುವಾಗ ನಾನು ತಾತನ ರೀತಿ ನಡೆದುಕೊಂಡು ಬರುತ್ತೇನೆ’ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.

ಈ ಹೇಳಿಕೆಯಿಂದ ಕೆ.ಎಲ್ ರಾಹುಲ್ ತಂದೆಯಾಗ್ತಿದ್ದಾರೆ ಎಂಬ ಅರ್ಥ ಕಲ್ಪಿಸಿಕೊಳ್ಳಲಾಗಿದೆ. ಸುನಿಲ್ ಶೆಟ್ಟಿ ಹೀಗೆ ಹೇಳ್ತಿದ್ದಾರೆ ಅಂದ್ರೆ ಅವರು ಶೀಘ್ರವೇ ಅವರು ತಾತ ಆಗುವ ಸೂಚನೆ ಕೊಟ್ಟಿದ್ದಾರಂತಾನೇ ಅರ್ಥ ಅಂತಿದ್ದಾರೆ ಫ್ಯಾನ್ಸ್. ಇದರಿಂದ ಆಥಿಯಾ ಹಾಗೂ ರಾಹುಲ್ ಅಭಿಮಾನಿಗಳು ಕೂಡಾ ಖುಷಿಪಟ್ಟಿದ್ದಾರೆ.

ಈ ಹೇಳಿಕೆಗೆ ನಾನಾ ರೀತಿಯ ಕಮೆಂಟ್‌ ಗಳು ಬರುತ್ತಿವೆ. ಕೆ.ಎಲ್ ರಾಹುಲ್ಗೆ ಆರ್ಸಿಬಿಯಲ್ಲಿ ಆಡಲು ಅವಕಾಶ ಸಿಕ್ಕಿಲ್ಲ. ಸ್ಟಾರ್ ಕ್ರಿಕೆಟಿಗ ಕನ್ನಡಿಗನಾದ್ರೂ ಬೆಂಗಳೂರು ಟೀಮ್ ನಲ್ಲಿ ಐಪಿಎಲ್ ಆಡಿಲ್ಲ. ಜ್ಯೂನಿಯರ್ ರಾಹುಲ್ ಕೂಡಾ ಕ್ರಿಕೆಟರ್ ಆಗ್ಲಿ. ಜ್ಯೂನಿಯರ್ ರಾಹುಲ್ ಆರ್ಸಿಬಿ ಟೀಮ್‌ ನಲ್ಲಿ ಆಡ್ಲಿ ಎಂದು ಫ್ಯಾನ್ಸ್ ಕಾಮೆಂಟ್ಸ್ ಹಾಕುವ ಮೂಲಕ ಸಂಭ್ರಮಿಸುತ್ತಿದ್ದಾರೆ.  ಅದೇನೇ ಇದ್ದರೂ, ಪ್ರೆಗ್ನಿನ್ಸಿ ವಿಚಾರವನ್ನು ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಅಧಿಕೃತ ಘೋಷಣೆ ಮಾಡಬೇಕಷ್ಟೇ.

Shwetha M