ಹೆಚ್ಚು ಓಡಿದವರಿಗೆ ಹೆಚ್ಚು ಬೋನಸ್‌ – ಉದ್ಯೋಗಿಗಳಿಗೆ ಬಂಪರ್‌ ಆಫರ್‌ ಘೋಷಿಸಿದ ಕಂಪನಿ!

ಹೆಚ್ಚು ಓಡಿದವರಿಗೆ ಹೆಚ್ಚು ಬೋನಸ್‌ – ಉದ್ಯೋಗಿಗಳಿಗೆ ಬಂಪರ್‌ ಆಫರ್‌ ಘೋಷಿಸಿದ ಕಂಪನಿ!

ಹೊಸ ವರ್ಷಕ್ಕೆ, ಹಬ್ಬದ ವೇಳೆ ಕೆಲ ಕಂಪನಿಗಳು ಬೋನಸ್ ನೀಡುತ್ತವೆ. ಇನ್ನು ಸಂಬಳದ ವಿಚಾರದಲ್ಲೂ ಅಷ್ಟೇ, ಉದ್ಯೋಗಿಯ ಕಾರ್ಯಕ್ಷಮತೆ, ಆತನ ಹೇಗೆ ಕೆಲಸ ಮಾಡುತ್ತಾನೆ, ಆತನ ನಡವಳಿಕೆಯ ಆಧಾರದ ಮೇಲೆ ಸಂಬಳ ಹೆಚ್ಚಳ ಮಾಡಲಾಗುತ್ತದೆ. ಇಲ್ಲೊಂದು ಕಂಪನಿ ಕೂಡ ತನ್ನ ಉದ್ಯೋಗಿಗಳಿಗೆ ವರ್ಷಾಂತ್ಯದ ಬೋನಸ್ ನೀಡಲು ಮುಂದಾಗಿದೆ. ಆದ್ರೆ ಕೆಲವೊಂದು ಷರತ್ತುಗಳನ್ನು ನೀಡಿದೆ. ಆ ಕಂಪನಿ ಉದ್ಯೋಗಿಗಳಿಗೆ ವಿಧಿಸಿರುವ ಷರತ್ತುಗಳು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ.

ಚೀನೀ ಕಂಪನಿಯೊಂದು ತನ್ನ ವರ್ಷಾಂತ್ಯದ ಬೋನಸ್ ಅನ್ನು ಉದ್ಯೋಗಿಗಳಿಗೆ ನೀಡಲು ಹೊಸ ರಿವಾರ್ಡ್ ಸಿಸ್ಟಮ್‌ನೊಂದಿಗೆ ಬದಲಿಸಿದೆ. ಕಂಪನಿ ನೀಡಿರುವ ಷರತ್ತು ಉದ್ಯೋಗಿಗಳನ್ನು ಫಿಟ್ ಆಗಿ ಮತ್ತು ಆರೋಗ್ಯಕರವಾಗಿ ಇರಿಸಿಕೊಳ್ಳಲು ಪ್ರೇರೇಪಿಸುತ್ತಿದೆ. ಈ ಕಂಪನಿಯ ವಿಚಿತ್ರ ಆಫರ್​ ಬಗ್ಗೆ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

ಇದನ್ನೂ ಓದಿ: ಮತ್ತೆ ಮತ್ತೆ ಕಾರ್ತಿಕ್‌ ಕೋಪಕ್ಕೆ ಗುರಿಯಾದ ಸಂಗೀತಾ! – ದ್ವೇಷ ಮರೆತು ಒಂದಾದ್ರಾ ವಿನಯ್‌, ಕಾರ್ತಿಕ್‌?

ಗುವಾಂಗ್‌ಡಾಂಗ್ ಪ್ರಾಂತ್ಯದ ಡಾಂಗ್‌ಪೋ ಪೇಪರ್ ಕಂಪನಿಯು ಇತ್ತೀಚೆಗೆ ತನ್ನ ಉದ್ಯೋಗಿಗಳಿಗೆ ಬೋನಸ್ ಪಡೆಯಲು ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಆದರೆ ಈ ಬೋನಸ್ ವ್ಯವಸ್ಥೆ ಪಡೆಯಲು ಉದ್ಯೋಗಿಗಳಿಗೂ ಷರತ್ತು ವಿಧಿಸಲಾಗಿದೆ. ನೌಕರರು ಮಾಡಿದ ವ್ಯಾಯಾಮವನ್ನು ಆಧರಿಸಿ ಬೋನಸ್ ನೀಡಲಾಗುತ್ತಿದೆ. ಅಂದರೆ, ಯಾವ ಉದ್ಯೋಗಿಗಳು ಹೆಚ್ಚು ವ್ಯಾಯಾಮ ಮಾಡುತ್ತಾರೆ, ಅವರು ಹೆಚ್ಚು ಬೋನಸ್ ಪಡೆಯುತ್ತಾರೆ.

ಕಂಪನಿಯ ಆಡಳಿತವು ನಿಗದಿಪಡಿಸಿದ ನಿಯಮಗಳ ಪ್ರಕಾರ, ಉದ್ಯೋಗಿ ಪ್ರತಿ ತಿಂಗಳು 50 ಕಿಲೋಮೀಟರ್ ಓಡಿದರೆ.. ಅವನಿಗೆ ಸಂಪೂರ್ಣ ಮಾಸಿಕ ಬೋನಸ್ ಸಿಗುತ್ತದೆ. ಆದರೆ ಉದ್ಯೋಗಿ 40 ಕಿ.ಮೀ ಓಡಿದರೆ ಶೇ.60 ಬೋನಸ್ ಮತ್ತು 30 ಕಿ.ಮೀ ಓಡಿದರೆ ಶೇ.30 ಬೋನಸ್ ಮಾತ್ರ ಸಿಗುತ್ತದೆ. ಅದೇ ಸಮಯದಲ್ಲಿ, ಯಾವುದೇ ಉದ್ಯೋಗಿ ಪ್ರತಿ ತಿಂಗಳು 100 ಕಿಮೀ ಓಡಿದರೆ, ಕಂಪನಿಯು ಘೋಷಿಸಿದ ಬೋನಸ್‌ಗಿಂತ ಶೇಕಡಾ 30 ರಷ್ಟು ಹೆಚ್ಚಿನ ಬೋನಸ್ ಪಡೆಯಲು ಅರ್ಹರಾಗಿರುತ್ತಾರೆ.

ಇನ್ನು ಪ್ರತಿ ಉದ್ಯೋಗಿ ಪ್ರತಿ ದಿನ ಎಷ್ಟು ಕಿಲೋಮೀಟರ್ ಓಡುತ್ತಿದ್ದಾರೆ ಎಂದು ಕಂಪನಿಗೆ ಹೇಗೆ ಗೊತ್ತಾಗುತ್ತದೆ ಎಂದು ಪ್ರಶ್ನೆ ಮೂಡುವುದು ಸಹಜ. ಈ ಸಮಸ್ಯೆಯನ್ನು ಪರಿಹರಿಸಲು ಕಂಪನಿಯ ಸಿಬ್ಬಂದಿ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಅವರ ಕಂಪನಿಯು ಉದ್ಯೋಗಿಗಳ ಫೋನ್‌ಗಳಲ್ಲಿನ ಅಪ್ಲಿಕೇಶನ್‌ಗಳ ಇನ್‌ಸ್ಟಾಲ್‌ ಮಾಡಿದೆ. ಈ ಅಪ್ಲಿಕೇಷನ್‌ನಲ್ಲಿ ಉದ್ಯೋಗಿಗಳು ಎಷ್ಟು ದೂರ ಓಡಿದ್ದಾರೆ ಎಂದು ದಾಖಲಾಗುತ್ತದೆ. ಇದರ ಆಧಾರದ ಮೇಲೆ ಕಂಪನಿ ಬೋನಸ್ ನೀಡುತ್ತದೆ.

ಕಂಪನಿಯು ನಿರ್ಧಾರಕ್ಕೆ ಕಾರಣ ಏನು?

ಕಂಪನಿಯು ತನ್ನ ಉದ್ಯೋಗಿಗಳನ್ನು ಫಿಟ್ ಮತ್ತು ಆರೋಗ್ಯಕರವಾಗಿರುವಂತೆ ಉತ್ತೇಜಿಸುವುದು ತನ್ನ ಉದ್ದೇಶವಾಗಿದೆ ಎಂದು ಹೇಳುತ್ತದೆ. ಕಂಪನಿಯ ಮುಖ್ಯಸ್ಥ ಲಿನ್ ಜಿಯಾಂಗ್ ಮಾತನಾಡಿ, ಉದ್ಯೋಗಿಗಳು ಆರೋಗ್ಯವಾಗಿದ್ದರೆ ಮಾತ್ರ ಕಂಪನಿಯು ದೀರ್ಘಕಾಲ ಉಳಿಯುತ್ತದೆ. ಅವರು ಕಳೆದ ಮೂರು ವರ್ಷಗಳಿಂದ ತಮ್ಮ ಉದ್ಯೋಗಿಗಳಿಗೆ ಕ್ರೀಡೆ ಮತ್ತು ಫಿಟ್‌ನೆಸ್ ಅನ್ನು ಆನಂದಿಸಲು ಪ್ರೋತ್ಸಾಹಿಸುತ್ತಿದ್ದಾರೆ. ಅದಕ್ಕಾಗಿಯೇ ಕಂಪನಿಯು ಈ ವಿಶಿಷ್ಟ ನಿರ್ಧಾರವನ್ನು ತೆಗೆದುಕೊಂಡಿದೆ ಎಂದಿದ್ದಾರೆ.

Shwetha M