1 ವಾರ .. 90ಕ್ಕೂ ಹೆಚ್ಚು ಬಾಂಬ್ ಬೆದರಿಕೆ! – ನಷ್ಟದ ಸುಳಿಯಲ್ಲಿ ವಿಮಾನಯಾನ!
ನೀಚ ಕೃತ್ಯದ ಹಿಂದೆ ಕಾಣದ ಕೈ!  

1 ವಾರ .. 90ಕ್ಕೂ ಹೆಚ್ಚು ಬಾಂಬ್ ಬೆದರಿಕೆ! – ನಷ್ಟದ ಸುಳಿಯಲ್ಲಿ ವಿಮಾನಯಾನ!ನೀಚ ಕೃತ್ಯದ ಹಿಂದೆ ಕಾಣದ ಕೈ!  

ಈಗೀಗ ವಿಮಾನದಲ್ಲಿ ಹೋಗೋಕೆ ಭಯವಾಗುತ್ತಿದೆ.  ಎಲ್ಲಿ ಸ್ಟೋಟ ಆಗುತ್ತೆ ಅನ್ನೋ ಆತಂಕ ಹೆಚ್ಚಾಗುತ್ತಿದೆ. ಯಾಕಂದ್ರೆ ಅಷ್ಟರ ಮಟ್ಟಿಗೆ ವಿಮಾನ ಯಾನ ಸಂಸ್ಥೆಗಳಿಗೆ ಸಾಲು ಸಾಲು ಬೆದರಿಕೆ ಕರೆ ಬರುತ್ತಿದೆ. ಆಗಸದಲ್ಲಿ ಹಾರುತ್ತಿದ್ದಂತೆ ವಿಮಾನದಲ್ಲಿ ಬಾಂಬ್ ಇಟ್ಟಿದ್ದೇವೆ ಅನ್ನೋ ಸಂದೇಶ ವಿಮಾನ ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ. ಹಾಗಿದ್ರೆ ವಿಮಾನಗಳಿಗೆ ಹಾಗೂ ವಿಮಾನ ನಿಲ್ದಾಣಗಳನ್ನ ಸ್ಟೋಟಿಸುತ್ತೇವೆ ಅಂತಾ ಯಾಕೆ ಬೆದರಿಕೆ ಕರೆಗಳು ಬರ್ತಿವೆ..? ಈ ಬೆದರಿಕೆ ಕರೆಗಳಿಂದ ವಿಮಾನ ಯಾನ ಸಂಸ್ಥೆಗಳಿಗೆ ಎಷ್ಟು ಲಾಸ್ ಆಗುತ್ತಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ದೊಡ್ಮನೆಯಲ್ಲಿ ಮತ್ತೆ ದೊಡ್ಡ ಗಲಾಟೆ – ಟಾಸ್ಕ್‌ ವೇಳೆ ಬಡಿದಾಡಿಕೊಂಡ ಮಂಜು, ಶಿಶಿರ್‌!

ದೇಶದಲ್ಲಿ ವಿವಿಧ ವಿಮಾನಯಾನ ಸಂಸ್ಥೆಗಳ ವಿಮಾನಗಳಿಗೆ ಹಾಗೂ ವಿಮಾನ ನಿಲ್ದಾಣಗಳಿಗೆ ಸಾಕಷ್ಟು ದಿನಗಳಿಂದ ಬಾಂಬ್‌ ಬೆದರಿಕೆ ಕರೆಗಳು ಬರ್ತಿವೆ. ಇದ್ರಲ್ಲಿ ಶೇ. 80ರಷ್ಟು ಕರೆಗಳು ವಿದೇಶಗಳಿಂದ ಬರುತ್ತಿವೆ ಎನ್ನುವುದು ತನಿಖಾ ಸಂಸ್ಥೆಗಳಿಗೂ ತಲೆ ನೋವಾಗಿದೆ. ಬೆದರಿಕೆ ಕರೆಗಳು ಬಂದಾಗ  ನಾಗರಿಕ ವಿಮಾನಯಾನ ನಿರ್ದೇಶನಾಲಯ  , ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ವಿಮಾನಯಾನ ಸಂಸ್ಥೆಗಳು ಕೇರ್‌ಲೆಸ್ ಮಾಡಲ್ಲ. ಯಾರೋ ಬೇಕಂತ ಬೆದರಿ ಹಾಕಿದ್ದಾರೆಂದು ನಿರ್ಲಕ್ಷ್ಯ ಮಾಡಲ್ಲ..ವಿಮಾವನ್ನ ತುರ್ತು ಭೂ ಸ್ವರ್ಶ ಮಾಡಿ ಲ್ಯಾಂಡಿಂಗ್ ಮಾಡಲಾಗುತ್ತೆ. ಇದ್ರಿಂದ ವಿಮಾನ ಹಾರಾಟದಲ್ಲಿ ತಡವಾಗುತ್ತೆ, ಪ್ರಯಾಣಿಕರಿಗೆ ಮಾನಸಿಕ ಕಿರಿಕಿರಿ ಆಗುತ್ತೆ..ವಿಮಾನಗಳ ಹಾರಾಟ ಸಮಯದಲ್ಲಿನ ಏರುಪೇರಿನಿಂದ ವಿಮಾನಯಾನ ಸಂಸ್ಥೆಗಳೂ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿವೆ.

 ಭಾರತೀಯ ವಿಮಾನಗಳಿಗೆ ಬೆದರಿಕೆ

ಕಳೆದ ಶನಿವಾರ ಒಂದೇ ದಿನ ಇಂಡಿಗೋ, ವಿಸ್ತಾರ, ಆಕಾಸ, ಏರ್‌ ಇಂಡಿಯಾದ 32 ವಿಮಾನಗಳಿಗೆ ಬಾಂಬ್‌ ಬೆದರಿಕೆ ಕರೆಗಳು ಬಂದಿವೆ. ಇದರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ  ಕಮಾಂಡ್‌ ಸೆಂಟರ್‌ಗೆ ಹಾಗೂ ಇಂಡಿಗೊ ವಿಮಾನಯಾನ ಸಂಸ್ಥೆಯ ಆರು ವಿಮಾನಗಳಿಗೆ ಮಧ್ಯಾಹ್ನ ಅನಾಮಧೇಯ ‘ಎಕ್ಸ್‌’ ಖಾತೆಯಿಂದ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ.  6 ವಿಮಾನಗಳಲ್ಲಿ  ತಲಾ ಇಬ್ಬರಂತೆ 12 ಬಾಂಬರ್‌ಗಳಿದ್ದಾರೆಂದು ಬೆದರಿಕೆ ಹಾಕಲಾಗಿತ್ತು. ಹೀದೆ  ಕಳೆದ  ಸೋಮವಾರದಿಂದ ಇಲ್ಲಿಯವರೆಗೂ, ಕನಿಷ್ಠ 70 ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಬೆದರಿಕೆಗಳು ಬಂದಿವೆ. ದೇಶದ ವಿಮಾನ ನಿಲ್ದಾಣಗಳಿಗೆ ನಿರಂತರವಾಗಿ ಬಾಂಬ್‌ ಬೆದರಿಕೆಯ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭಾರೀ ಭದ್ರತೆ ತೆಗೆದುಕೊಳ್ಳಲಾಗಿದ್ದು. ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ .

ಒಂದು ಬೆದರಿಕೆ ಕರೆಯಿಂದ 3 ಕೋಟಿ ರೂ. ನಷ್ಟ !

ಹಾರಾಟದ ಮಾರ್ಗಮಧ್ಯೆ ವಿಮಾನಗಳಿಗೆ ಬರುವ ಒಂದು ಬಾಂಬ್‌ ಬೆದರಿಕೆ ಕರೆಯು ವಿಮಾನಯಾನ ಸಂಸ್ಥೆಗೆ ಸಾಕಷ್ಟು ನಷ್ಟವಾಗುತ್ತೆ.

ಬೆದರಿಕೆಯಿಂದ ಕೋಟಿ ಕೋಟಿ ಲಾಸ್

ಒಂದು ಬೆದರಿಕೆ ಕೆರೆಯಿಂದ 3 ಕೋಟಿ ರೂ. ನಷ್ಟ ಉಂಟಾಗುತ್ತೆ. ಇಂಧನ ಭರ್ತಿ, ಬ್ಯಾಗೇಜ್‌, ಪ್ರಯಾಣಿಕರಿರುವಾಗ ವಿಮಾನದ ತೂಕ ಹೆಚ್ಚಿರುತ್ತದೆ. ಇಂಥ ಸಂದರ್ಭದಲ್ಲಿ ಟೇಕಾಫ್‌ ಕೆಲವೇ ನಿಮಿಷಗಳಲ್ಲಿ ಬಾಂಬ್‌ ಬೆದರಿಕೆ ಕರೆಯಿಂದ ತುರ್ತು ಲ್ಯಾಂಡಿಂಗ್‌ ಮಾಡಬೇಕೆಂದರೆ ವಿಮಾನದ ತೂಕ ಕಡಿಮೆ ಮಾಡಬೇಕಾಗುತ್ತದೆ. ಅನಿವಾರ್ಯವಾಗಿ ವಿಮಾನವನ್ನು ಆಕಾಶದಲ್ಲೇ ಒಂದಷ್ಟು ಸುತ್ತು ಹೊಡಿಸಿ ಇಂಧನ ಖಾಲಿ ಮಾಡಬೇಕಾಗುತ್ತೆ. ಲ್ಯಾಂಡಿಂಗ್‌ ನಂತರ ಪ್ರಯಾಣಿಕರಿಗೆ ಹೋಟೆಲ್‌ ವ್ಯವಸ್ಥೆ, ಬದಲಿ ವಿಮಾನ ವ್ಯವಸ್ಥೆ, ಟಿಕೆಟ್‌ ಮರು ಹೊಂದಾಣಿಕೆ ವೆಚ್ಚ, ತಪಾಸಣೆ ವೆಚ್ಚ ಇತ್ಯಾದಿಗಳಿಂದ ಸರಿಸುಮಾರು 3 ಕೋಟಿ ರೂ. ನಷ್ಟವಾಗುತ್ತದೆ ಎಂದು ವಿಮಾನಯಾನ ಸಂಸ್ಥೆಯೊಂದರ ಮೂಲಗಳು ಹೇಳಿವೆ.

ನ.1ರಿಂದ19 ತನಕ ಏರ್​ ಇಂಡಿಯಾದಲ್ಲಿ ಪ್ರಯಾಣಿಸದಂತೆ ಬೆದರಿಕೆ

ಹೌದು ಏರ್ ಇಂಡಿಯಾದಲ್ಲಿ ನವೆಂಬರ್ 1ರಿಂದ 19ರವರೆಗೆ ಪ್ರಯಾಣಿಸಬೇಡಿ ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಬೆದರಿಕೆ ಹಾಕಿದ್ದಾನೆ. ಸಿಖ್ ನರಮೇಧದ 40 ನೇ ವಾರ್ಷಿಕೋತ್ಸವದ ಕಾರಣ, ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ಸಂಭವಿಸಬಹುದು ಎಂದು ಹೇಳಿದ್ದಾನೆ. ಈತ ಸಾಕಷ್ಟು ಬಾರಿ ಭಾರತಕ್ಕೆ ಬೆದರಿಕೆ ಹಾಕಿದ್ದಾನೆ.

Shwetha M

Leave a Reply

Your email address will not be published. Required fields are marked *