ಬಿಪರ್ ಜಾಯ್ 1977ರ ಬಳಿಕ ಉದ್ಭವಿಸಿದ ಅತೀ ದೀರ್ಘಾವಧಿಯ ಚಂಡಮಾರುತ!
ನವದೆಹಲಿ: ತಿಂಗಳ ಆರಂಭದಲ್ಲಿ ಅರಬ್ಬಿ ಸಮುದ್ರದಲ್ಲಿ ಅಬ್ಬರಿಸಿದ್ದ ‘ಬಿಪರ್‌ಜಾಯ್ ಚಂಡಮಾರುತ’ ಭಾರಿ ಅವಾಂತರಗಳನ್ನೇ ಸೃಷ್ಟಿಸಿತ್ತು. ಈ ಚಂಡಮಾರುತದಿಂದಾಗಿ ಸಾಕಷ್ಟು ಹಾನಿ ಸಂಭವಿಸಿತ್ತು. ಕಡಲ ತೀರದಲ್ಲಿ ವಾಸವಿದ್ದ ನೂರಾರು ಜನರನ್ನು ಸ್ಥಳಾಂತರಿಸಲಾಗಿತ್ತು. ಇದೀಗ ಬಿಪರ್‌ಜಾಯ್ ಚಂಡಮಾರುತದ ಜೀವಿತಾವಧಿ ಕುರಿತು ಮಹತ್ವದ ಮಾಹಿತಿಯೊಂದನ್ನು ಭಾರತೀಯ ಹವಾಮಾನ ಇಲಾಖೆ ಬಹಿರಂಗಪಡಿಸಿದೆ.
ಇದನ್ನೂ ಓದಿ: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ ಅವೈಜ್ಞಾನಿಕ ಕಾಮಗಾರಿ ಪತ್ತೆಗೆ ತಾಂತ್ರಿಕ ತಂಡ ರಚನೆ!
ಬಿಪರ್‌ಜಾಯ್ ಚಂಡಮಾರುತವು ಗುಜರಾತ್‌ನಲ್ಲಿ ಹಾಹಾಕಾರ ಸೃಷ್ಟಿಸಿತ್ತು. ಈ ಚಂಡಮಾರುತ ಜೂ. 6ರಂದು ರೂಪುಗೊಂಡು ಜೂ. 18ರ ವರೆಗೆ ಒಟ್ಟು 13 ದಿನ 3 ತಾಸುಗಳ ಕಾಲ ಅಸ್ತಿತ್ವದಲ್ಲಿತ್ತು. ಹಿಂದೂ ಮಹಾಸಾಗರದ ಉತ್ತರಭಾಗದಲ್ಲಿ 1977ರ ಬಳಿಕ ಉದ್ಭವಿಸಿದ ಅತೀ ದೀರ್ಘಾವಧಿಯ ಚಂಡಮಾರುತ ಇದಾಗಿದೆ. ಈ ಭಾಗದಲ್ಲಿ ಉದ್ಭವಿಸುವ ಚಂಡಮಾರುತಗಳ ಅಸ್ತಿತ್ವ ಅವಧಿಯಾದ 6 ದಿನ 3 ತಾಸುಗಳಿಗಿಂತ ದುಪ್ಪಟ್ಟು. ತಾನು ಕ್ರಮಿಸಿದ 2,525 ಕಿ.ಮೀ. ದೂರದ ದಾರಿಯಲ್ಲಿ 9 ಬಾರಿ ಪಥ ಬದಲಾಯಿಸಿದ್ದು ಕೂಡ ಬಿಪರ್‌ಜಾಯ್ ವಿಶೇಷ ಎಂದು ಎಂದು ಐಎಂಡಿ ತಿಳಿಸಿದೆ.
ಉತ್ತರ ಹಿಂದೂ ಮಹಾಸಾಗರದ ಮೇಲೆ ದೀರ್ಘಾವಧಿಯ ಚಂಡಮಾರುತವು ಬಂಗಾಳಕೊಲ್ಲಿಯಲ್ಲಿ ಅಭಿವೃದ್ಧಿ ಹೊಂದಿತ್ತು. ಅದನ್ನ ಬಿಟ್ಟರೆ ಅರಬ್ಬಿ ಸಮುದ್ರದ ಮೇಲೆ 1977 ರಲ್ಲಿ ನವೆಂಬರ್ 8-23 ಮಧ್ಯೆ ಒಟ್ಟು 14 ದಿನ, ಆರು ಗಂಟೆಗಳ ಜೀವಿತಾವಧಿಯ ಚಂಡು ಮಾರುತ ಸೃಷ್ಟಿಯಾಗಿತ್ತು. ಅದಾದ ನಂತರ ಬಿಪರ್‌ಜಾಯ್ ದೀರ್ಘಾವಧಿಯ ಚಂಡಮಾರುತವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.