ಸೋಮವಾರದ ದಿನ ಶಿವನ ಆರಾಧನೆಯನ್ನು ಹೇಗೆ ಮಾಡಬೇಕು – ಪರಶಿವನನ್ನ ಹೇಗೆ ಮೆಚ್ಚಿಸಬೇಕು ಗೊತ್ತಾ?

ಶಿವ ಸರ್ವ ಮಾನ್ಯ ಮತ್ತು ಸರ್ವ ವೇದ್ಯ. ಶಿವ ಭಕ್ತರ ಸಂಖ್ಯೆಯೂ ಅಗಣಿತ. ಹಾಗಾಗಿ ಶಿವನನ್ನು ಭಕ್ತಪ್ರಿಯನೆಂದೂ ಕರೆಯಲಾಗುತ್ತದೆ. ಸೋಮವಾರದ ದಿನ ಶಿವನ ಆರಾಧನೆಯನ್ನು ಹೇಗೆ ಮಾಡಬೇಕು ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಈ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಸೋಮವಾರ ಮುಂಜಾನೆ ಎದ್ದು ನಿತ್ಯ ಕರ್ಮಾದಿಗಳನ್ನು ಮುಗಿಸಿ ಶುಚಿಯಾಗಿ ಸ್ನಾನವನ್ನು ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿದ ಬಳಿಕ ಶಿವ ದೇವರ ಪ್ರತಿಮೆ ಅಥವಾ ಫೊಟೋದ ಮುಂದೆ ದೀಪವನ್ನು ಬೆಳಗಿ ಬಳಿಕ ಉಪವಾಸದ ಸಂಕಲ್ಪವನ್ನು ಮಾಡಬೇಕು. ಉಪವಾಸದ ಸಂಕಲ್ಪ ಕೈಗೊಂಡ ಬಳಿಕ ಆ ದಿನ ಒಪ್ಪೊತ್ತಿನ ಊಟವನ್ನು ಮಾಡಬೇಕು. ಸಾಯಂಕಾಲ ಪೂಜೆಯ ಬಳಿಕ ಉಪವಾಸವನ್ನು ಮುರಿದು ಆಹಾರ ಸೇವನೆಯನ್ನು ಮಾಡಬಹುದು.
ಇದನ್ನೂ ಓದಿ: ಹಣಕಾಸಿನ ಸಮಸ್ಯೆಯಿಂದ ಒದ್ದಾಡುತ್ತಿದ್ದೀರಾ ? – ಶನಿವಾರ ಈ ಕೆಲಸವನ್ನ ಮಾಡಿ, ಅಪ್ಪಿತಪ್ಪಿ ಹಣದ ಸಮಸ್ಯೆ ಬರಲ್ಲ
ಬಳಿಕ, ಶಿವಲಿಂಗ ಸೇರಿದಂತೆ ಎಲ್ಲಾ ದೇವರ ವಿಗ್ರಹಗಳಿಗೆ ಶುದ್ಧ ಜಲಾಭಿಷೇಕವನ್ನು ಮಾಡಿ. ಒಂದು ವೇಳೆ ನಿಮ್ಮ ಮನೆಯಲ್ಲಿ ಶಿವಲಿಂಗವಿಲ್ಲದಿದ್ದರೆ ನೀವು ಹತ್ತಿರದ ಶಿವ ದೇವಾಲಯಕ್ಕೆ ಹೋಗಿ ಅಲ್ಲಿ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿಸಬಹುದು. ಶಿವಲಿಂಗಕ್ಕೆ ಅಭಿಷೇಕ ಮಾಡಿದ ನಂತರ ಸಕ್ಕರೆ ಹಾಲು, ಮೊಸರು, ಜೇನುತುಪ್ಪ, ಬಿಲ್ವಪತ್ರೆ, ಮಲ್ಲಿಗೆ ಅಥವಾ ಎಕ್ಕದ ಹೂವುಗಳನ್ನು ಶಿವಲಿಂಗಕ್ಕೆ ಅರ್ಪಿಸಿ. ಮಂತ್ರಗಳ ಪಠಣದೊಂದಿಗೆ ಶಿವನಿಗೆ ವೀಳ್ಯದೆಲೆ, ಪಂಚಾಮೃತ, ತೆಂಗಿನಕಾಯಿ ಮತ್ತು ಬಿಲ್ವ ಪತ್ರೆಯನ್ನು ಸಮರ್ಪಿಸಿ.
ಆಮೇಲೆ ಶಿವಲಿಂಗದ ಮೇಲೆ ಕುಂಕುಮ ಮತ್ತು ಶ್ರೀಗಂಧವನ್ನು ಅರ್ಪಿಸಿ, ಆ ಬಳಿಕ ಧೂಪ, ದೀಪ ಮತ್ತು ಆರತಿಯನ್ನು ಪರಶಿವನಿಗೆ ಬೆಳಗಿಸಬೇಕು. ಪೂಜೆ ಎಲ್ಲಾ ಆದ ಬಳಿಕ ಶಿವಲಿಂಗಕ್ಕೆ ಅರ್ಧ ಪ್ರದಕ್ಷಿಣೆಯನ್ನು ಹಾಕಿ. ಶಿವನಿಗೆ ಪ್ರದಕ್ಷಿಣೆ ಹಾಕುವಾಗ ಶಿವನನ್ನು ಭಕ್ತಿಯಿಂದ ಧ್ಯಾನಿಸಿ. ಅರೆ ಪ್ರದಕ್ಷಿಣೆ ಎಂದರೆ ಶಿವಲಿಂಗಕ್ಕೆ ಅರ್ಪಿಸಿದ ಅಭಿಷೇಕದ ನೀರು ಹರಿದು ಹೋಗುವ ಸ್ಥಳದವರೆಗೆ ಮಾತ್ರ ಪ್ರದಕ್ಷಿಣೆಯನ್ನು ಹಾಕಿ ಹಿಂದಿರುಗಿ. ಇದರ ನಂತರ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿ.
ಸೋಮವಾರ ಉಪವಾಸ ವ್ರತವನ್ನು ಮಾಡುವಾಗ ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ. ಶಿವ ಪೂಜೆಯನ್ನು ಮಾಡಿದ ನಂತರ ಶಿವ ಚಾಲೀಸಾವನ್ನು ಮತ್ತು ಶಿವ ಆರತಿಯನ್ನು ಪಠಿಸುವುದನ್ನು ಮರೆಯದಿರಿ. ಶಿವ ಪೂಜೆ ಮುಗಿದ ಬಳಿಕ ಪ್ರಸಾದವನ್ನು ವಿತರಿಸಿ. ಶಿವಪೂಜೆಯ ನಂತರ ಸೋಮವಾರ ಉಪವಾಸದ ಕಥೆಯನ್ನು ಕೇಳುವುದು ಅವಶ್ಯಕ.

ನೋಡಿರಿ

