ಶನಿವಾರ ಆಂಜನೇಯನಿಗೆ ಈ ವಸ್ತುಗಳನ್ನ ಆರ್ಪಿಸುವುದರಿಂದ ಸಿಗಲಿದೆ ಶುಭ ಫಲ

ಶನಿವಾರ ಆಂಜನೇಯನಿಗೆ ಈ ವಸ್ತುಗಳನ್ನ ಆರ್ಪಿಸುವುದರಿಂದ ಸಿಗಲಿದೆ ಶುಭ ಫಲ

ಶನಿವಾರ ಅಂದ್ರೆ ಅದು  ಹನುಮಂತನ ವಾರ.  ಆಂಜನೇಯನ ಪೂಜೆ ಮಾಡಿದ್ರೆ  ಭಕ್ತರ ಎಲ್ಲಾ ತೊಂದರೆಗಳು ಮತ್ತು ಅಡೆತಡೆಗಳು ನಿಮಿಷಗಳಲ್ಲಿ ದೂರವಾಗುತ್ತವೆ.   ಶನಿವಾರ ದ ಶುಭ ದಿನವನ್ನು ಹನುಮಂತನಿಗೆ ಸಮರ್ಪಿಸಲಾಗಿದೆ . ಹೀಗಾಗಿನಿವಾರ ಕೆಲ ವಸ್ತುಗಳನ್ನು ಆಂಜನೇಯನಿಗೆ ಆರ್ಪಿಸುವುದರಿಂದ ಶುಭ ಫಲಗಳು ಸಿಗಲಿದ್ದು, ಆ ವಸ್ತುಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಎಲೆ ಮತ್ತು ಅಡಿಕೆ:
ಬಹಳ ಕಾಲದಿಂದ ನೀವು ಅಂದುಕೊಂಡಿದ ಕೆಲಸ ಕಾರ್ಯಗಳು ಪೂರ್ಣಗೊಳ್ಳದೇ ನೀವು ಸಮಸ್ಯೆ ಎದುರಿಸುತ್ತಿದ್ದರೆ ನೀವು ಶನಿವಾರ ಆಂಜನೇಯ ಸ್ವಾಮಿಗೆ ಎಲೆ ಮತ್ತು ಅಡಿಕೆ ಅರ್ಪಿಸಬಹುದು. ಹೌದು ನೀವು ಅಂದುಕೊಂಡ ಕೆಲಸ ಸರಿಯಾದ ಸಮಯಕ್ಕೆ ಪೂರ್ಣಗೊಳ್ಳದಿದ್ದರೆ, ನೀವು ಆ ಕೆಲಸಕ್ಕೆ ಹೋಗುವ ಮೊದಲು, ಶನಿವಾರ ಹನುಮಂತನಿಗೆ ವೀಳ್ಯದೆಲೆ ಅನ್ನು ಅರ್ಪಿಸಿ. ಇದರಿಂದ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆಯಿದೆ. ಇದು ನಿಮ್ಮ ಪ್ರಗತಿಗೆ ಪೂರಕವಾಗಿರುತ್ತದೆ.

ಮಲ್ಲಿಗೆ ಮತ್ತು ಎಣ್ಣೆ:
ಪ್ರತಿ ಶನಿವಾರ ಹನುಮಾನ್ ದೇವರಿಗೆ ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಿ, ಮಲ್ಲಿಗೆ ಹೂವುಗಳನ್ನು ಅರ್ಪಿಸಿದ್ದರೆ ನೀವು ಬಜರಂಗ ಬಲಿಯ ಕೃಪೆಗೆ ಪಾತ್ರರಾಗುತ್ತೀರಾ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಯೂ ನೆಲೆಸುತ್ತದೆ. ಇದು ನಿಮಗೆ ಹನುಮಂತನ ಅನುಗ್ರಹವನ್ನು ಪಡೆಯುವಲ್ಲಿ ಸಹಕರಿಸುತ್ತದೆ.

ಅರಳಿ ಎಲೆ:
ಶನಿವಾರ ಮುಂಜಾನೆ ಎದ್ದು, ನಿತ್ಯ ಕರ್ಮಗಳನ್ನು ಮುಗಿಸಿದ ಬಳಿಕ ಶುದ್ಧವಾಗಿ, ಮಡಿ ಬಟ್ಟೆ ಧರಿಸಿ. ನಂತರ 11 ಅರಳಿ ಎಲೆಗಳನ್ನು ಕಿತ್ತಿ, ಆ ಎಲೆಗಳನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿ. ಬಳಿಕ ಅದರ ಮೇಲ್ಬಾಗದಲ್ಲಿ ಕುಂಕುಮ ಅಥವಾ ಶ್ರೀಗಂಧದಿಂದ ಶ್ರೀರಾಮ ಎಂದು ಬರೆಯಿರಿ. ನಂತರ ಈ ಎಲೆಗಳಿಂದ ಮಾಲೆಯನ್ನು ಮಾಡಿ ಹನುಮಂತನಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಶೀಘ್ರದಲ್ಲಿ ಆರ್ಥಿಕ ಸಮಸ್ಯೆ ಪರಿಹರಗೊಳ್ಳುತ್ತದೆ.

Kishor KV