ನಿಮ್ಮ ಪರ್ಸ್‌ನಲ್ಲಿ ಹಣ ನಿಲ್ಲೋದಿಲ್ವಾ – ದುಡ್ಡಿನ ನಿರ್ವಹಣೆ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ.?

ನಿಮ್ಮ ಪರ್ಸ್‌ನಲ್ಲಿ ಹಣ ನಿಲ್ಲೋದಿಲ್ವಾ –  ದುಡ್ಡಿನ ನಿರ್ವಹಣೆ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ.?

ಹಲವರ ಜೀವನದಲ್ಲಿ ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲೋದಿಲ್ಲ. ಹಾಗೇ ಬಂದು ಹೀಗೆ ಹೋಗುತ್ತೆ.. ಇದ್ದಕ್ಕೆ ಕಾರಣ ನಾವು ಮಾಡೋ ಕೆಲ ತಪ್ಪುಗಳು.   ಹಾಗಾದ್ರೆ ಹಣಕ್ಕೆ ಸಂಬಂಧಪಟ್ಟ ಯಾವ ತಪ್ಪುಗಳನ್ನು ಮಾಡಿದ್ರೆ ಲಕ್ಷ್ಮೀ ದೇವಿ ಕೊಪ್ಪಗೊಳ್ಳುತ್ತಾಳೆ..? ದುಡ್ಡಿನ ನಿರ್ವಹಣೆ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ..? ಅನ್ನೋದ್ದನ್ನ ತಿಳಿಯೋಣ.

ಹೌದು ಹಣವನ್ನು ಬಳಸುವಾಗ ಅಥವಾ ಎಣಿಸುವಾಗ ಮಾಡುವ ಕೆಲವು ಅಜಾಗರೂಕತೆಗಳು ಕೂಡ ಲಕ್ಷ್ಮಿ ದೇವಿಯ ಅಸಮಾಧಾನಕ್ಕೆ ಕಾರಣವಾಗಬಹುದು. ಹಲವಾರು ನೋಟುಗಳನ್ನು ಎಣಿಸುವಾಗ ಬೆರಳಿಗೆ ಉಗುಳನ್ನು ಹಚ್ಚಿಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರ ಪ್ರಕಾರ, ಇದು ತಪ್ಪಾದ ಕ್ರಮವಾಗಿದ್ದು, ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಅವಮಾನವಾಗುತ್ತದೆ ಎಂದು ಹೇಳಲಾಗುತ್ತದೆ. ಅಗತ್ಯವಿದ್ದರೆ, ಉಗುಳಿನ ಬದಲು ಸ್ವಲ್ಪ ನೀರನ್ನು ಬಳಸುವುದು ಉತ್ತಮ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಹಣವು ಅನೇಕ ಕೈಗಳಿಂದ ಹರಿದಾಡುವುದರಿಂದ, ಅದರಲ್ಲಿ ಸೋಂಕುಗಳು ಇರುವ ಸಾಧ್ಯತೆ ಹೆಚ್ಚಿರುತ್ತದೆ. ಉಗುಳನ್ನು ಬಳಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಪಾರ್ಸ್‌ನಲ್ಲಿ ತಿನ್ನೋ ವಸ್ತು ಇಡಬೇಡಿ

ಇನ್ನೊಂದು ಸಾಮಾನ್ಯ ಅಭ್ಯಾಸವೆಂದರೆ ಪರ್ಸ್‌ನಲ್ಲಿ ಆಹಾರ ಪದಾರ್ಥಗಳನ್ನು ಇಡುವುದು. ಆದರೆ ಪರ್ಸ್‌ನಲ್ಲಿ ಹಣದ ಜೊತೆಗೆ ಆಹಾರ ವಸ್ತುಗಳನ್ನು ಇಡಬಾರದು ಎಂಬ ನಂಬಿಕೆ ಇದೆ. ಹೀಗೆ ಮಾಡುವುದರಿಂದ ಸಂಪತ್ತಿಗೆ ಅಶುಭ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಹಣವನ್ನು ಇಡುವ ಪರ್ಸ್ ಅನ್ನು ಸದಾ ಸ್ವಚ್ಛವಾಗಿ ಇಟ್ಟುಕೊಂಡು, ಆಹಾರ ಪದಾರ್ಥಗಳಿಗೆ ಪ್ರತ್ಯೇಕ ಚೀಲವನ್ನು ಬಳಸುವುದು ಉತ್ತಮ.

ಹಾಸಿಗೆ ಬಳಿ ಹಣ ಇಡಬೇಡಿ

ಕೆಲವರು ಹಣವನ್ನು ತಲೆಯ ಕೆಳಗೆ ಅಥವಾ ಹಾಸಿಗೆಯ ಪಕ್ಕದಲ್ಲಿ ಇಡುವ ಅಭ್ಯಾಸ ಹೊಂದಿರುತ್ತಾರೆ. ನಂಬಿಕೆಗಳ ಪ್ರಕಾರ, ಇದು ಲಕ್ಷ್ಮಿ ದೇವಿಗೆ ಅಗೌರವ ತೋರಿಸಿದಂತೆ ಆಗುತ್ತದೆ. ಹಣವನ್ನು ಯಾವಾಗಲೂ ಸುರಕ್ಷಿತ ಮತ್ತು ಸ್ವಚ್ಛವಾದ ಸ್ಥಳದಲ್ಲಿ, ಉದಾಹರಣೆಗೆ ಬೀರು ಅಥವಾ ಲಾಕರ್‌ನಲ್ಲಿ ಇಡುವುದು ಉತ್ತಮ. ಇಚ್ಛೆಯಿದ್ದರೆ, ಹಣದ ಜೊತೆಗೆ ಗೋಮತಿ ಚಕ್ರವನ್ನು ಇಡುವುದರಿಂದ ಆರ್ಥಿಕ ಸ್ಥಿತಿಯಲ್ಲಿ ಒಳ್ಳೆಯ ಫಲ ದೊರೆಯುತ್ತದೆ ಎಂಬ ನಂಬಿಕೆಯೂ ಇದೆ.

ಹಾಗೆಯೇ, ಬಡವರಿಗೆ ಅಥವಾ ಯಾರಿಗಾದರೂ ಹಣವನ್ನು ನೀಡುವಾಗ, ಅದನ್ನು ಎಸೆಯುವ ರೀತಿಯಲ್ಲಿ ನೀಡಬಾರದು. ಹಣವನ್ನು ಗೌರವದಿಂದ ನೀಡುವುದು ಬಹಳ ಮುಖ್ಯ. ಏಕೆಂದರೆ ಹಣದೊಂದಿಗೆ ಲಕ್ಷ್ಮಿ ದೇವಿಯೂ ಸಂಬಂಧ ಹೊಂದಿದ್ದಾಳೆ ಎಂಬ ನಂಬಿಕೆ ಇದೆ. ಆದ್ದರಿಂದ ದಾನ ಮಾಡುವಾಗಲೂ ಗೌರವ ಮತ್ತು ವಿನಯವನ್ನು ಕಾಪಾಡಿಕೊಳ್ಳಬೇಕು.

Kishor KV