ಮಂಗಳವಾರ ಯಾವೆಲ್ಲಾ ಕೆಲಸಗಳನ್ನ ಮಾಡಬಾರದು ಗೊತ್ತಾ?

ಮಂಗಳವಾರ  ಯಾವೆಲ್ಲಾ ಕೆಲಸಗಳನ್ನ ಮಾಡಬಾರದು ಗೊತ್ತಾ?

ಪೂಜೆ-ಆರಾಧನೆಯ ಜೊತೆ ಕೆಲವೊಂದು ಕೆಲಸಗಳನ್ನು ಮಂಗಳವಾರ ಮಾಡುವುದು ಅಮಂಗಳಕರ ಅಥವಾ ಅಶುಭವೆಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತೆ.  ಹಾಗಿದ್ರೆ ಮಂಗಳವಾರ ಮಾಡಬಾರದಾದ  ಕೆಲಸಗಳಾವುವು..? ಯಾವ ಕೆಲಸ ಮಾಡಿದರೆ ಸಮಸ್ಯೆಗಳು ಎದುರಾಗುತ್ತದೆ..? ಎಂಬ ಮಾಹಿತಿ ಇಲ್ಲಿದೆ.

ಅಲಂಕಾರ ವಸ್ತುಗಳನ್ನು ಖರೀದಿಸಬೇಡಿ
ಸೌಂದರ್ಯ ವರ್ಧಕಗಳನ್ನು ಮಂಗಳವಾರ ಖರೀದಿಸಬಾರದು ಸೌಂದರ್ಯ ಮತ್ತು ಮೇಕ್ಅಪ್ಗೆ ಸಂಬಂಧಿಸಿದ ಉತ್ಪನ್ನಗಳನ್ನು ಮಂಗಳವಾರ ಖರೀದಿಸಬಾರದು. ಇದು ವೈವಾಹಿಕ ಜೀವನದಲ್ಲಿ ಅಶಾಂತಿಯನ್ನು ಮೂಡಿಸುತ್ತದೆ. ನೀವು ಸೌಂದರ್ಯ ಉತ್ಪನ್ನಗಳನ್ನು ಖರೀದಿಸಲು ಬಯಸಿದರೆ, ಸೋಮವಾರ ಮತ್ತು ಶುಕ್ರವಾರ ಇದಕ್ಕೆ ಉತ್ತಮ ದಿನಗಳು.

ಹೆಣ್ಣುಮಕ್ಕಳು ಗಂಡನ ಮನೆ/ ತವರು ಮನೆ ಬಿಟ್ಟು ಹೋಗಬಾರದು
ಶಾಸ್ತ್ರಗಳ ಪ್ರಕಾರ, ಹೆಣ್ಣುಮಕ್ಕಳು ಮಂಗಳವಾರ ತವರಿನಿಂದ – ಗಂಡನ ಮನೆಗೆ, ಹಾಗೇ ಗಂಡನ ಮನೆಯಿಂದ ತವರು ಮನೆಗೆ ಹೋಗುವುದನ್ನು ನಿಷೇಧಿಸಲಾಗಿದ್ದು, ಹೆಂಗಸರು ಅಂದು ಮನೆ ಬಿಟ್ಟು ಹೊರಡುವುದರಿಂದ ಅನೇಕ ರೀತಿಯ ಸಮಸ್ಯೆಗಳನ್ನು ಅಥವಾ ಹಾನಿಯನ್ನು ಎದುರಿಸಬೇಕಾಗುತ್ತದೆ ಎಂದು ಶಾಸ್ತ್ರವು ಹೇಳುತ್ತದೆ. ಅಲ್ಲದೇ ಈ ನಿಯಮವನ್ನು ಪಾಲಿಸದೇ ಮುಂದುವರೆದ್ದರೆ ಕೌಟುಂಬಿಕವಾಗಿಯೂ ಅಡೆತಡೆಗಳನ್ನು ಬರಲಿವೆ.

ಕಪ್ಪು ಬಟ್ಟೆ ಧರಿಸಬೇಡಿ
ಮಂಗಳವಾರದಂದು ಕೆಂಪು ವಸ್ತ್ರಗಳನ್ನು ಧರಿಸಬೇಕು ಮತ್ತು ಕೆಂಪು ವಸ್ತ್ರಗಳನ್ನು ದಾನ ಮಾಡಬೇಕು ಎಂಬ ನಿಯಮ ಇದೆ. ಹಾಗೇ ಮಂಗಳವಾರ ಕಪ್ಪು ಬಟ್ಟೆಯನ್ನು ಧರಿಸಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿದ್ದು, ಹೀಗೆ ಮಾಡುವುದರಿಂದ ಶನಿಯ ಪ್ರಭಾವ ಹೆಚ್ಚಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಮತ್ತು ಶನಿ ಗ್ರಹಗಳ ನಡುವೆ ಪ್ರತಿಕೂಲ ಸಂಬಂಧವಿದೆ. ಶನಿ ಮತ್ತು ಮಂಗಳನ ಸಂಯೋಗವನ್ನು ಯಾವಾಗಲೂ ತೊಂದರೆ ಎಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಸಂಕಟ ಹೆಚ್ಚುತ್ತದೆ.

ಕೂದಲು ಕತ್ತರಿಸಬಾರದು
ಹೆಣ್ಣುಮಕ್ಕಳಿಗೆ ಕೂದಲು ಶೋಭೆ ಎನ್ನುತ್ತಾರೆ. ಹಾಗಾಗಿ ಹೆಣ್ಣುಮಕ್ಕಳ ಕೂದಲಿಗೆ ಕತ್ತರಿ ಹಾಕುವಾಗ ಶುಭಕರವಲ್ಲ ಎಂಬ ನಂಬಿಕೆ ಇದೆ. ಈ ಕಾರಣದಿಂದ ಮಂಗಳವಾರ ಕೂದಲು ಅಥವಾ ಉಗುರುಗಳನ್ನು ಕತ್ತರಿಸದಿರುವುದು ಉತ್ತಮ.

Kishor KV