ಭೂಮಿಗೆ ಬಂದು ಅಪ್ಪಳಿಸುತ್ತಾ ಬೃಹತ್ ಬಂಡೆ? – ವಿಜ್ಞಾನಿಗಳು ಆತಂಕಗೊಂಡಿರೋದೇಕೆ?
ಭೂಮಿಯ ಕುರಿತಾದ ಹಲವು ರಹಸ್ಯಗಳನ್ನು ಕಂಡುಹಿಡಿಯಲು ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಭೂಮಿಯ ತಿರುಗುವಿಕೆ ವ್ಯತ್ಯಾಸವಿದೆಯೇ, ಭೂಮಿಯ ಬಳಿ ಕ್ಷುದ್ರಗ್ರಹ ಬರುತ್ತಿವೆಯೇ ಎಂಬುದರ ಕುರಿತು ಪ್ರತಿಯೊಂದನ್ನು ಪರಿಶೀಲಿಸುತ್ತಿದ್ದಾರೆ. ಇದೀಗ ಭೂಮಿಗೆ ದೊಡ್ಡ ಕಂಟಕ ಎದುರಾಗಲಿದ್ಯಾ ಅಂತ ವಿಜ್ಷಾನಿಗಳು ತಲೆಕೆಡಿಸಿಕೊಂಡಿದ್ದಾರೆ.
ಇದನ್ನೂ ಓದಿ: SSLV-D2 ರಾಕೆಟ್ ಉಡಾವಣೆ ಯಶಸ್ವಿ – ಕಕ್ಷೆ ಸೇರಿದ ಮೂರು ಉಪಗ್ರಹಗಳು
ಇದೀಗ ಭೂಮಿ ಮೇಲೆ ದೊಡ್ಡ ಗಾತ್ರದ ಬಂಡೆಯೊಂದು ಅಪ್ಪಳಿಸುವ ಸಾಧ್ಯತೆಯಿದೆ ಅಂತ ಖಗೋಳಶಾಸ್ತ್ರಜ್ಞರು ಅಂದಾಜಿಸುತ್ತಿದ್ದಾರೆ. ಹಾಗಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬೃಹತ್ ಬಂಡೆಯನ್ನು ಟ್ರ್ಯಾಕ್ ಮಾಡುತ್ತಿದೆ. ಈಗ ಈ ಬಂಡೆ ಭೂಮಿಯ ಕಕ್ಷೆ ಸೇರಬಹುದು ಅಲ್ಲದೇ ಭೂಮಿಗೆ ಬಹಳ ಹತ್ತಿರ ಬಂದು ಡಿಕ್ಕಿ ಹೊಡೆಯುವ ಸಾಧ್ಯತೆ ಇದೆ. ಈ ಬೃಹತ್ ಕ್ಷುದ್ರಗ್ರಹವನ್ನು 199145 (2005 YY128) ಎಂದು ಹೆಸರಿಸಲಾಗಿದೆ. ಈ ಕಲ್ಲು ಸುಮಾರು 1 ಕಿಮೀ ಅಗಲವಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಬಂಡೆಯು ಭೂಮಿಯ ಕಕ್ಷೆ ಮೂಲಕ ಹಾದು ಹೋಗಲಿದೆ. ಈ ಕ್ಷುದ್ರಗ್ರಹವು 1870 ರಿಂದ 4266 ಅಡಿಗಳಷ್ಟು ದೊಡ್ಡದಾಗಿದೆ. ಫೆಬ್ರವರಿ 16 ರಂದು ಈ ಬಂಡೆಯು ಭೂಮಿಯ 4.5 ಮಿಲಿಯನ್ ಕಿಲೋಮೀಟರ್ ಒಳಗೆ ಬರಲಿದೆ ಎಂದು ನಾಸಾ ಊಹಿಸಿದೆ. ಆದರೆ ಈ ಬಂಡೆಯು ಭೂಮಿಗೆ ಅಪ್ಪಳಿಸುತ್ತದೆ ಎಂದು ನಾಸಾ ಇನ್ನೂ ಸಂಪೂರ್ಣವಾಗಿ ಖಚಿತಪಡಿಸಿಲ್ಲ.
ಕೆಲವು ದಿನಗಳ ಹಿಂದೆ ಕ್ಷುದ್ರಗ್ರಹವೊಂದು ಭೂಮಿಗೆ ಅತೀ ಸಮೀಪದಲ್ಲಿ ಹಾದು ಹೋಗಿತ್ತು. ವರದಿಯ ಪ್ರಕಾರ 2023 BU – ಜನವರಿ 21 ರಂದು ಕಾಸ್ಮಿಕ್ ಕಲ್ಲು ಅಮೆರಿಕದ ಮೇಲೆ ರಾತ್ರಿ 12:30 ಕ್ಕೆ ಹಾದುಹೋಗಿದೆ.