ವಿಧಾನಸೌಧಕ್ಕೆ 10.5 ಲಕ್ಷ ರೂಪಾಯಿ ನಗದು ಸಾಗಾಟ – ಇಷ್ಟೊಂದು ಹಣ ತಂದಿದ್ಯಾಕೆ?

ವಿಧಾನಸೌಧಕ್ಕೆ 10.5 ಲಕ್ಷ ರೂಪಾಯಿ ನಗದು ಸಾಗಾಟ – ಇಷ್ಟೊಂದು ಹಣ ತಂದಿದ್ಯಾಕೆ?

ಬೆಂಗಳೂರು: ವಿಧಾನಸೌಧಕ್ಕೆ 10.5 ಲಕ್ಷ ರೂಪಾಯಿ ನಗದು ಸಾಗಿಸುತ್ತಿದ್ದಾಗ ಸಹಾಯಕ ಇಂಜಿನಿಯರ್ ಸಿಕ್ಕಿಬಿದ್ದಿದ್ದಾರೆ. ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬುಧವಾರ ಸಂಜೆ 7 ಗಂಟೆಗೆ ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಜಗದೀಶ್ ಎಂಬುವವರು ಅನಧಿಕೃತವಾಗಿ ಹಣ ಸಾಗಾಟ ಮಾಡುತ್ತಿದ್ದರು. ಗೇಟ್‌ನಲ್ಲಿ ಪೊಲೀಸರು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ದುಡ್ಡು ಪತ್ತೆಯಾಗಿದೆ.

ಮಂಡ್ಯದ ಪಿಡಬ್ಲ್ಯುಡಿ ಇಲಾಖೆಯ ಸಹಾಯಕ ಇಂಜಿನಿಯರ್ ಜಗದೀಶ್ ವಿಧಾನಸೌಧಕ್ಕೆ ಬ್ಯಾಗ್‌ನಲ್ಲಿ ಹಣ ತಂದಿದ್ದರು. ಯಾವ ಕಾರಣಕ್ಕೆ ಹಣ ತಂದಿದ್ದು ಎಂದು ಪ್ರಶ್ನಿಸಿದಾಗ ಜಗದೀಶ್ ಉತ್ತರ ನೀಡಲು ತಡಬಡಾಯಿಸಿದ್ದಾರೆ. ಹಣ ವಿಥ್ ಡ್ರಾ ಮಾಡಿಕೊಂಡು ಮಂಡ್ಯಕ್ಕೆ ಹೋಗ್ತಿದ್ದೆ. ನಡುವೆ ವಿಧಾನಸೌಧದಲ್ಲಿ ಕೆಲಸವಿದ್ದ ಕಾರಣ ಇಲ್ಲಿಗೆ ಬಂದಿದ್ದೇನೆ ಎಂದು ಸಬೂಬು ನೀಡಲು ಮುಂದಾಗಿದ್ದಾನೆ. ಆದರೆ ಜಗದೀಶ್ ಉತ್ತರದಿಂದ ಅನುಮಾನಗೊಂಡ ವಿಧಾನಸೌಧದ ಭದ್ರತಾ ಸಿಬ್ಬಂದಿ ವಿಧಾನಸೌಧ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:  ಕಲ್ಯಾಣ ಕರ್ನಾಟಕದಲ್ಲಿ ಜೆಡಿಎಸ್ ಹವಾ – ಬೀದರ್‌ನಲ್ಲಿ ಎರಡನೇ ಹಂತದ ಪಂಚರತ್ನ ರಥಯಾತ್ರೆ

ಘಟನೆಗೆ ಸಂಬಂಧಿಸಿದಂತೆ ಮೊದಲು ಎನ್‌ಸಿಆರ್ ದಾಖಲಿಸಿಕೊಂಡಿದ್ದ ಪೊಲೀಸರು ನಂತರ ಕೋರ್ಟ್‌ನ ಅನುಮತಿ ಪಡೆದು ಜಗದೀಶ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧನದ ಅವಶ್ಯಕತೆ ಇಲ್ಲದೇ ಇದ್ದುದರಿಂದ ಜಗದೀಶ್ ಅವರನ್ನು ಬಿಟ್ಟು ಕಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಹಾಗಿದ್ದರೂ ವಿಚಾರಣೆಗೆ ಕರೆದಾಗ ಬಂದು ಮಾಹಿತಿ ನೀಡುವಂತೆ ಪೊಲೀಸರು ಜಗದೀಶ್‌ಗೆ ಹೇಳಿದ್ದಾರೆ. ಜಗದೀಶ್ ಬಳಿಯಿಂದ ಸೀಜ್ ಮಾಡಿದ ಹಣವನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅಗತ್ಯ ದಾಖಲೆಗಳನ್ನು ನೀಡಿ ಹಣವನ್ನು ವಾಪಸ್ಸು ಪಡೆಯುವ ಅವಕಾಶ ಜಗದೀಶ್‌ ಗಿದೆ. ಲಕ್ಷ ಹಣ ಪತ್ತೆ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ದಾವಣಗೆರೆ ಮೂಲದ ಮಂಜು ಅಲಿಯಾಸ್ ಸಿದ್ದು ಎಂಬಾತನನ್ನು ಎಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಆಪ್ತ ಸಹಾಯಕರಾಗಿ ಮಂಜು ಕೆಲಸ ಮಾಡುತ್ತಿದ್ದರು. ಈ ಘಟನೆಯ ಬಳಿಕ ವಿಧಾನಸೌಧದಲ್ಲಿ ಹೆಚ್ಚಿನ ತಪಾಸಣೆಗಳನ್ನು ನಡೆಸಲಾಗುತ್ತಿದೆ.

suddiyaana