ವಿಧಾನಸಭಾ ಚುನಾವಣೆ 2023 – ಗಣ್ಯರಿಂದ ಮತದಾನ

ವಿಧಾನಸಭಾ ಚುನಾವಣೆ 2023 – ಗಣ್ಯರಿಂದ ಮತದಾನ

ವಿಧಾನಸಭೆ ಚುನಾವಣೆಗೆ ಮತದಾನ ಭರದಿಂದ ಸಾಗುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತದಾನ ಮಾಡಿದ್ದಾರೆ. ಕುಟುಂಬ ಸಮೇತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮಂಜುನಾಥೇಶ್ವರ ಅನುಧಾನಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಮತದಾನ ಮಾಡಿದ್ದಾರೆ.

ವೋಟಿಂಗ್ ವೇಳೆ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಮಿಂಚಿದ್ದಾರೆ. ಬಿಳಿ ಪಂಚೆ, ಶರ್ಟ್ ಧರಿಸಿ ಬಂದ ಡಾಲಿ ಧನಂಜಯ್ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ್ದಾರೆ.  ಸಹೋದರಿ ಮತ್ತು ಕುಟುಂಬದ ಜೊತೆ ಬಂದು ಡಾಲಿ ಧನಂಜಯ್ ಮತದಾನ ಮಾಡಿದ್ದಾರೆ. ಧನಂಜಯ್ ತಮ್ಮ ಹುಟ್ಟೂರಾದ ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಮತದಾನ ಮಾಡಿದ್ದಾರೆ.

ನಟ ರಿಷಬ್ ಶೆಟ್ಟಿ ಅವರು ಬೈಂದೂರಿಗೆ ತೆರಳಿ ವೋಟ್ ಮಾಡಿದ್ದಾರೆ. ರಿಷಭ್ ಶೆಟ್ಟಿ ಅವರ ಹೊಸ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.

ರಾಜ್ಯ ವಿಧಾನಸಭಾ ಚುನಾವಣೆಯ ರಾಯಭಾರಿ ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ ಅವರು ಮತದಾನ ಮಾಡಿದರು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ತಮ್ಮ ಹಕ್ಕು ಚಲಾಯಿಸಿದ ಮಾತಾ ಮಂಜಮ್ಮ ಜೋಗತಿ, ಎಲ್ಲರೂ ಮತದಾನ ಮಾಡುವಂತೆ ವಿನಂತಿ ಮಾಡಿದರು.

suddiyaana