ಹೊಟ್ಟೆ ಬೆಳೆಸಿಕೊಂಡಿರುವ ಪೊಲೀಸರೇ ಎಚ್ಚರ.. – ಸರ್ಕಾರದಿಂದ ಹೊಸ ರೂಲ್ಸ್!

ಪೊಲೀಸ್ ಇಲಾಖೆಗೆ ಸೇರಿದ ಮೇಲೆ ದೈಹಿಕ ಕಸರತ್ತು ಕಡಿಮೆ ಮಾಡಿ ದಢೂತಿ ದೇಹ, ಹೊಟ್ಟೆ ಬೆಳೆಸಿಕೊಂಡವರೇ ಹೆಚ್ಚು. ಇದೀಗ ಅಂತಹ ಪೊಲೀಸ್ ಸಿಬ್ಬಂದಿಗಳಿಗೆ ಅಸ್ಸಾಂ ಪೊಲೀಸ್ ಇಲಾಖೆ ಹೊಟ್ಟೆ ಕರಗಿಸುವ ಟಾಸ್ಕ್ ನೀಡಿದೆ.
ಅಸ್ಸಾಂ ಪೊಲೀಸ್ ಇಲಾಖೆ ಹೊಟ್ಟೆ ಬೆಳೆಸಿಕೊಂಡವರಿಗೆ ಹೊಸ ಟಾಸ್ಕ್ ನೀಡಿದೆ. ಈ ವರ್ಷದ ನವೆಂಬರ್ ತಿಂಗಳ ಅಂತ್ಯದೊಳಗೆ ಬೊಜ್ಜು ಕರಗಿಸದಿದ್ದರೆ ಸ್ವಯಂ ನಿವೃತ್ತಿ ನೀಡುವುದಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ನಿರ್ದೇಶನದ ಮೇರೆಗೆ ಹೀಗೊಂದು ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಸೆಖೆ ಎಂದು ಮನೆಯ ಹೊರಗೆ ಮಲಗುವವರೇ ಎಚ್ಚರ.. – ನಿಮ್ಮ ಜೀವಕ್ಕೆ ಎದುರಾಗಬಹುದು ಕಂಟಕ!
ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಗ್ಯಾನೇಂದ್ರ ಪ್ರತಾಪ್ ಸಿಂಗ್ ಮಾಹಿತಿ ನೀಡಿದ್ದಾರೆ. ʼಪೊಲೀಸ್ ಸಿಬ್ಬಂದಿಗಳ ಬಾಡಿ ಮಸ್ ಇಂಡೆಕ್ಸ್ ಅನ್ನು ದಾಖಲಿಸಲು ಅಸ್ಸಾಂ ಪೊಲೀಸ್ ನಿರ್ಧರಿಸಿದೆ. ಇದು ಐಪಿಎಸ್, ಎಪಿಎಸ್ ಅಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.
ʼಐಪಿಎಸ್ ಹಾಗೂ ಅಸ್ಸಾಂ ಪೊಲೀಸ್ ಅಧಿಕಾರಿಗಳಿಗೆ ಮೂರು ತಿಂಗಳ ಕಾಲ ಅವಕಾಶ ನೀಡಲಾಗಿದೆ. ಆಗಸ್ಟ್ 15 ರಿಂದ ಬಿಎಂಐ ಮೌಲ್ಯ ಮಾಪನ ಶುರುವಾಗಲಿದೆ. ಈ ಪರೀಕ್ಷೆಗೆ ಒಳಪಡುವ ಮೊದಲ ವ್ಯಕ್ತಿ ನಾನಾಗಲಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.