ಪ್ರಿಯಕರನ ಜೊತೆ ಓಡಿಹೋಗುತ್ತಿದ್ದ ಹೆಂಡತಿಗೆ ಡಿವೋರ್ಸ್- 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿದ ಪತಿರಾಯ

ಪ್ರಿಯಕರನ ಜೊತೆ ಓಡಿಹೋಗುತ್ತಿದ್ದ ಹೆಂಡತಿಗೆ ಡಿವೋರ್ಸ್-  40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿದ ಪತಿರಾಯ

 ಅಸ್ಸಾಂನ ವ್ಯಕ್ತಿಯೊಬ್ಬ ಹೆಂಡತಿದೆ ಡಿವೋರ್ಸ್ ಕೊಟ್ಟ ನಂತ್ರ 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡುವ ಮೂಲಕ ‘ಇಂದಿನಿಂದ ನಾನು ಸ್ವತಂತ್ರ’ ಎಂದು ಘೋಷಿಸಿದ್ದಾನೆ. ಅಸ್ಸಾಂನ ನಲ್ಬರಿ ಜಿಲ್ಲೆಯ ಮುಕಲ್ಮುವಾ ಪೊಲೀಸ್ ಠಾಣೆ ವ್ಯಾಪ್ತಿಯ ಬರಲಿಯಾಪರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾಣಿಕ್ ಅಲಿ  ಎಂಬಾತ ತನ್ನ ಹೆಂಡತಿಯಿಂದ ಡಿವೋರ್ಸ್ ಪಡೆದ ನಂತ್ರ ಹಾಲಿನ ಸ್ನಾನ ಮಾಡಿದ್ದಾನೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮಾಣಿಕ್, ತಮ್ಮ ಅಸಾಂಪ್ರದಾಯಿಕ ಆಚರಣೆಯ ಹಿಂದಿನ ಕಾರಣ ತಿಳಿಸಿದ್ದಾನೆ.   ‘ನನ್ನ ಹೆಂಡತಿ ತನ್ನ ಪ್ರಿಯಕರನೊಂದಿಗೆ ಎರಡು ಬಾರಿ ಓಡಿಹೋದಳು. ನಾನು ಎರಡೂ ಬಾರಿ ಅವಳನ್ನು ಕ್ಷಮಿಸಿದೆ, ನಮ್ಮ ಮಗಳ ಬಗ್ಗೆ ಯೋಚಿಸಿದೆ. ಆದರೆ ಅವಳು ಅದೇ ತಪ್ಪನ್ನು ಪುನರಾವರ್ತಿಸುತ್ತಲೇ ಇದ್ದಳು. ನನಗೆ ಅದನ್ನು ಇನ್ನು ಸಹಿಸಲು ಸಾಧ್ಯವಾಗಲಿಲ್ಲ, ಮತ್ತು ಅಂತಿಮವಾಗಿ ಕಾನೂನುಬದ್ಧ ವಿಚ್ಛೇದನವನ್ನು ಆರಿಸಿಕೊಂಡೆ’ ಎಂದು ಹೇಳಿದ್ದಾನೆ.

ಕಾನೂನು ಪ್ರಕ್ರಿಯೆಗಳು ಮುಗಿದ ನಂತರ, ಮಾಣಿಕ್ ಕ್ಯಾಮೆರಾಗಳ ಮುಂದೆ ನಾಲ್ಕು ಪೂರ್ಣ ಬಕೆಟ್  ಅಂದ್ರೆ 40 ಲೀಟರ್‌ ಹಾಲನ್ನು ತನ್ನ ಮೇಲೆ ಸುರಿದುಕೊಳ್ಳುವ ಮೂಲಕ ಆ ಸಂದರ್ಭವನ್ನು ಸ್ಮರಣೀಯವಾಗಿಸಲು ನಿರ್ಧರಿಸಿದರು.  ಇಂದಿನಿಂದ, ನಾನು ಸ್ವತಂತ್ರನಾಗಿದ್ದೇನೆ… ನನಗೆ ಹೊರೆಯಾಗಿತ್ತು. ಈಗ ನಾನು ಅದನ್ನೆಲ್ಲಾ ತೊಳೆದುಕೊಂಡಿದ್ದೇನೆ ಎಂದು ಕೂಗಿ ಹೇಳಿದ್ದಾನೆ.

 

Kishor KV