ಮದ್ಯವ್ಯಸನಿ 300 ಪೊಲೀಸ್ ಸಿಬ್ಬಂದಿಗೆ ಶಾಕ್..! – ಕುಡಿತ ಬಿಡದಿದ್ದರೆ ಸೀದಾ ಮನೆಗೆ..!

ಮದ್ಯವ್ಯಸನಿ 300 ಪೊಲೀಸ್ ಸಿಬ್ಬಂದಿಗೆ ಶಾಕ್..! – ಕುಡಿತ ಬಿಡದಿದ್ದರೆ ಸೀದಾ ಮನೆಗೆ..!

ಪೊಲೀಸ್ ಕೆಲಸ ಅನ್ನೋದು ಗೌರವದ ಕೆಲಸ. ಈ ಸೇವೆಯಲ್ಲಿದ್ದುಕೊಂಡು ಮದ್ಯಪಾನ ಏನಾದರೂ ಮಾಡಿದರೆ ಮನೆಗೆ ಹೋಗುವುದು ಗ್ಯಾರಂಟಿ. ಹೀಗಂತಾ ಅಸ್ಸಾಂ ಸರ್ಕಾರ ತನ್ನ ಪೊಲೀಸ್ ಇಲಾಖೆ ಸಿಬ್ಬಂದಿಗೆ ಪದೇ ಪದೇ ಹೇಳುತ್ತಾ ಬಂದಿದೆ. ಆದರೂ ಕೂಡಾ ಅಲ್ಲಿನ ಕೆಲ ಪೊಲೀಸರು ಡೋಂಟ್ ಕೇರ್ ಅಂತಾ ತಮ್ಮ ಪಾಡಿಗೆ ಮದ್ಯಪಾನ ಮಾಡುತ್ತಿದ್ದರು. ಈಗ ಅವರಲ್ಲಿ ಕೆಲವರಿಗೆ ಅಸ್ಸಾಂ ಸರ್ಕಾರ ಶಾಕ್ ನೀಡಿದೆ. ಮದ್ಯವ್ಯಸನಿ ಖಾಕಿಗಳನ್ನು ಸೀದಾ ಮನೆಗೆ ಕಳುಹಿಸಲು ಸಿದ್ಧತೆ ನಡೆಸಿದೆ.

ಇದನ್ನೂ ಓದಿ: ಮದ್ಯಪಾನ ಮಾಡಿ ಸಿಕ್ಕಿ ಬಿದ್ದ ಚಾಲಕರು – ಪೊಲೀಸ್ ಠಾಣೆಯಲ್ಲಿ 1,000 ಬಾರಿ ಬರೆಯುವ ಶಿಕ್ಷೆ!

ಸುಮಾರು 300 ಪೊಲೀಸರಿಗೆ ಅಸ್ಸಾಂ ಸರ್ಕಾರ ಸ್ವಯಂ ನಿವೃತ್ತಿ ನೀಡಲು ಮುಂದಾಗಿದೆ. ಈ ಬಗ್ಗೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಮದ್ಯವ್ಯಸನಿ ಪೊಲೀಸ್ ಸಿಬ್ಬಂದಿಯಿಂದ ಸೇವೆಯಲ್ಲಿ ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರಿಂದ ಅನೇಕ ದೂರುಗಳು ಕೇಳಿಬಂದಿವೆ. ಅಂತವರಿಗೆ ವಿಆರ್‌ಎಸ್ ನೀಡಲು ಅಸ್ಸಾಂ ಸರ್ಕಾರ ಮುಂದಾಗಿದೆ. ಈಗಾಗಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಶೀಘ್ರದಲ್ಲೇ ಹೊಸ ನೇಮಕಾತಿ ನಡೆಯಲಿದೆ ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ. ಅಸ್ಸಾಂ ಪೊಲೀಸ್ ಇಲಾಖೆಯ ಸುಮಾರು 300 ಮದ್ಯವ್ಯಸನಿ ಪೊಲೀಸ್ ಸಿಬ್ಬಂದಿಯನ್ನು ಗುರುತಿಸಲಾಗಿದೆ. ಅವರಿಗೆ ಈಗಾಗಲೇ ವಿಆರ್‌ಎಸ್ ನೀಡಲು ಸರ್ಕಾರ ಮುಂದಾಗಿದೆ.

ಅತಿಯಾದ ಮದ್ಯ ವ್ಯಸನಿಗಳಿಗೆ ರಾಜ್ಯ ಸರ್ಕಾರವು ಸ್ವಯಂ ನಿವೃತ್ತಿ ಯೋಜನೆ ಅನ್ನು ಒದಗಿಸಿದೆ. ಇದು ಹಳೆಯ ನಿಯಮವಾಗಿದ್ದರೂ ಇದುವರೆಗೆ ಜಾರಿಯಾಗಿರಲಿಲ್ಲ. ಈಗ ಜಾರಿ ಮಾಡುತ್ತಿದ್ದೇವೆ ಎಂದು ಅಲ್ಲಿನ ಗೃಹ ಸಚಿವರೂ ಆಗಿರುವ ಹಿಮಂತ್ ಬಿಸ್ವಾಸ್ ಶರ್ಮಾ ತಿಳಿಸಿದ್ದಾರೆ. ಯಾವ್ಯಾವ ಪೊಲೀಸರು ಸ್ವಯಂ ನಿವೃತ್ತಿ ಘೋಷಿಸಿದ್ದಾರೋ ಅವರಿಗೆಲ್ಲಾ ಪೂರ್ತಿ ವೇತನ ದೊರೆಯುತ್ತದೆ. ಆದರೆ, ಅವರ ಜಾಗಕ್ಕೆ ಹೊಸ ಅಭ್ಯರ್ಥಿಗಳನ್ನು ನೇಮಕ ಮಾಡುತ್ತಿದ್ದೇವೆ ಎಂದು ಅಸ್ಸಾಂ ಸಿಎಂ ತಿಳಿಸಿದ್ದಾರೆ.

suddiyaana