ಕೋಕಾ – ಕೋಲಾ ಪ್ರಿಯರೇ ಎಚ್ಚರ.. – ನಾಲಗೆಗೆ ರುಚಿಕೊಡುವ ಪಾನೀಯದಿಂದ ಬರಬಹುದು ಕ್ಯಾನ್ಸರ್‌!

ಕೋಕಾ – ಕೋಲಾ ಪ್ರಿಯರೇ ಎಚ್ಚರ.. – ನಾಲಗೆಗೆ ರುಚಿಕೊಡುವ ಪಾನೀಯದಿಂದ ಬರಬಹುದು ಕ್ಯಾನ್ಸರ್‌!

ಕೋಕಾ-ಕೋಲಾ.. ಸಣ್ಣ ಮಕ್ಕಳಿಂದ ಹಿರಿಯರವರೆಗೂ ಬಲು ಪ್ರಿಯವಾದ ಪಾನೀಯ. ಒಮ್ಮೆ ಕುಡಿದರೆ ಮತ್ತೆ ಮತ್ತೆ ಕುಡಿಯಬೇಕು ಅನ್ನಿಸಿಬಿಡುತ್ತದೆ. ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲೂ ಕೋಕಾ-ಕೋಲಾಕ್ಕೆ ಮೊದಲ ಆದ್ಯತೆ. ಫುಡ್‌ ಆರ್ಡರ್‌ ಮಾಡುವ ವೇಳೆ ಜೊತೆಗೊಂದು ಕೋಕಾ-ಕೋಲಾ ಕೂಡ ಇರಲಿ ಎಂದು ಹೇಳುತ್ತೇವೆ. ಕೋಕಾ-ಕೋಲಾ ಪ್ರಿಯರೇ.. ನಿಮಗೆ ಶಾಕಿಂಗ್‌ ಸುದ್ದಿಯೊಂದಿದೆ. ನಾಲಗೆಗೆ ರುಚಿ ಕೊಡುವ ಈ ಪಾನೀಯ ನಿಮ್ಮ ಜೀವಕ್ಕೆ ಕುತ್ತು ತರಬಹುದು. ಕೋಕಾ-ಕೋಲಾದಿಂದ ಕ್ಯಾನ್ಸರ್‌ ಬರುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದ ಭದ್ರತೆಗೆ ವಾರ್ಷಿಕ ವೆಚ್ಚ 38 ಕೋಟಿ ರೂಪಾಯಿ!

ಹೌದು, ನಾಲಗೆಗೆ ರುಚಿ ಕೊಡುವ ಕೋಕಾ-ಕೋಲಾದಲ್ಲಿ ಕ್ಯಾನ್ಸರ್‌ ಉಂಟುಮಾಡುವ ಅಂಶಗಳು ಇವೆ ಎಂದು ಡಬ್ಲ್ಯುಎಚ್‌ಓ ಹೇಳಿದೆ. ಕೋಕಾ-ಕೋಲಾದಲ್ಲಿ ವಿಶ್ವದ ಅತ್ಯಂತ ಪ್ರಸಿದ್ಧ ಹಾಗೂ ಸಾಮಾನ್ಯವಾದ ಕೃತಕ ಸಿಹಿಕಾರಕ ವಸ್ತುವಾಗಿರುವ ಆಸ್ಪರ್ಟೇಮ್(ಕೃತಕ ಸಿಹಿ ಪದಾರ್ಥ) ಅನ್ನು ಬಳಸಲಾಗುತ್ತದೆ. ಕೋಕಾ-ಕೋಲಾದಲ್ಲಿ ಸಂಭವನೀಯ ಕಾರ್ಸಿನೋಜೆನ್ (ಕ್ಯಾನ್ಸರ್‌ ಕಾರಕ ಅಂಶ)  ಎಂದು ಘೋಷಿಸಲು ಜಾಗತಿಕ ಆರೋಗ್ಯ ಸಂಸ್ಥೆಯಾಗಿರುವ ವಿಶ್ವ ಆರೋಗ್ಯ ಸಂಸ್ಥೆ ಸಿದ್ಧತೆ ನಡೆಸಿದೆ.

ಕಾರ್ಸಿನೋಜೆನ್ ಎನ್ನುವುದು ಜೀವಂತ ಅಂಗಾಂಶಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಸಾಮರ್ಥ್ಯವಿರುವ ವಸ್ತುವಾಗಿದೆ. ಆಸ್ಪರ್ಟೇಮ್ ಅನ್ನು ಸಂಭವನೀಯ ಕಾರ್ಸಿನೋಜೆನ್ ಎಂದು ಘೋಷಣೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಸಿದ್ಧತೆ ನಡೆಸಿದೆ.

ಆಸ್ಪರ್ಟೇಮ್ ಅನ್ನು ಕೋಕಾ-ಕೋಲಾ, ಚೂಯಿಂಗ್ ಗಮ್ ಮತ್ತು ಕೆಲವು ಸ್ನ್ಯಾಪಲ್ ಪಾನೀಯಗಳಲ್ಲಿ ಬಳಸಲಾಗುತ್ತಿದೆ. ಆಸ್ಪರ್ಟೇಮ್ ಅನ್ನು ಜುಲೈನಲ್ಲಿ “ಮನುಷ್ಯರಿಗೆ ಕ್ಯಾನ್ಸರ್ ಜನಕ” ಎಂದು ಮೊದಲ ಬಾರಿಗೆ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಮಾಡಲಿದೆ. ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಕ್ಯಾನ್ಸರ್ ಸಂಶೋಧನಾ ವಿಭಾಗ ಎಂದು ಮೂಲಗಳು ತಿಳಿಸಿವೆ.

ಆಸ್ಪರ್ಟೇಮ್ ಅನ್ನು ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಿ ಅನೇಕ ಜನರು ಸಕ್ಕರೆಯನ್ನು ಸೇವಿಸುವುದನ್ನು ತಪ್ಪಿಸುತ್ತಾರೆ. ಆದರೆ ಕೇವಲ ರುಚಿಗೆ, ಇದು ಅಪಾಯವಲ್ಲ ಎಂದು ಭಾವಿಸಿ ಕೃತಕ ಸಿಹಿಯನ್ನು ಬಳಸುತ್ತಾರೆ. WHO (ವಿಶ್ವ ಆರೋಗ್ಯ ಸಂಸ್ಥೆ) ನಡೆಸಿದ ಸಂಶೋಧನೆಯಲ್ಲಿ ಕೃತಕ ಸಿಹಿಕಾರಕಗಳ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಆಸ್ಪರ್ಟೇಮ್ ಹೊಂದಿರುವ ಉತ್ಪನ್ನವನ್ನು ಒಬ್ಬ ವ್ಯಕ್ತಿಯು ಎಷ್ಟು ಸುರಕ್ಷಿತವಾಗಿ ಬಳಸಬಹುದು ಎಂಬುದು ಇನ್ನೂ ತಿಳಿದಿಲ್ಲ. ಒಬ್ಬ ವ್ಯಕ್ತಿಯು ಎಷ್ಟು ಹಾನಿಕಾರಕ ವಸ್ತುವನ್ನು ಸೇವಿಸಬಹುದು ಎಂಬುದರ ಕುರಿತು ಶಿಫಾರಸುಗಳನ್ನು ರಾಷ್ಟ್ರೀಯ ನಿಯಂತ್ರಕರ ನಿರ್ಣಯದ ಜೊತೆಗೆ ಆಹಾರ ಸೇರ್ಪಡೆಗಳ ಮೇಲೆ ಪ್ರತ್ಯೇಕ ಡಬ್ಲ್ಯುಎಚ್‌ಓ ತಜ್ಞರ ಸಮಿತಿಯಿಂದ ಮಾಡಲಾಗುತ್ತದೆ. ಇದನ್ನು JECFA (ಜಂಟಿ WHO ಮತ್ತು ಆಹಾರ ಮತ್ತು ಕೃಷಿ ಸಂಸ್ಥೆಯ ಆಹಾರ ಸೇರ್ಪಡೆಗಳ ತಜ್ಞರ ಸಮಿತಿ) ನೀಡುತ್ತದೆ. ಡಬ್ಲ್ಯುಎಚ್‌ಓನ ಸೇರ್ಪಡೆಗಳ ಸಮಿತಿ JECFA ಈ ವರ್ಷ ಆಸ್ಪರ್ಟೇಮ್ ಬಳಕೆಯನ್ನು ಪರಿಶೀಲಿಸುತ್ತಿದೆ. 1981 ರಲ್ಲಿ JECFA ಆಸ್ಪರ್ಟೇಮ್ ಅನ್ನು ಮಿತಿಯೊಳಗೆ ಪ್ರತಿದಿನ ಸೇವಿಸಿದರೆ ಸುರಕ್ಷಿತವಾಗಿದೆ ಎಂದು ಹೇಳಿದೆ.

suddiyaana