ಭಾರತಕ್ಕೆ ನ್ಯೂಕ್ಲಿಯರ್ ಹಾಕುತ್ತಂತೆ ಪಾಕ್ – PAK ಸೇನಾಧ್ಯಕ್ಷನ ಬಿಟ್ಟಿ ಬಿಲ್ಡಪ್

ಸುಮ್ ಸುಮ್ನೆ ಮಾತ್ ಆಡೋಕೆ, ಬಿಟ್ಟಿ ಬಿಲ್ಡಪ್ ಕೊಡೋಕೆ ದುಡ್ಡು ಕೊಡಬೇಕಿಲ್ಲ.. ನಾಲಿಗೆ ಒಂದ್ ಇದ್ರೆ ಸಾಕು.. ಪಾಕಿಸ್ತಾನದ ಕಥೆ ಕೂಡ ಹಾಗೇ.. ಕೈಯಲ್ಲಿ ಆಗದಿದ್ರೂ, ತನ್ನೋಕೆ ಅನ್ನ ಇಲ್ಲದಿದ್ರೂ ನಾನೇ ಇಡೀ ಪ್ರಪಂಚಕ್ಕೆ ರಾಜ ಅನ್ನೋ ರೀತಿಯಲ್ಲಿ ಭ್ರಮೆಯಲ್ಲಿ ಕಾಲ ಕಳೆಯುತ್ತಿದೆ. ಭಾರತದ ಒಂದು ಹಳ್ಳಿಯನ್ನೂ ಕೂಡ ಪಾಕಿಸ್ತಾನದ ಕೈಯಲ್ಲಿ ಅಲ್ಲಾಡಿಸೋಕೆ ಆಗಲ್ಲ. ಹೀಗಿದ್ರೂ ಬಿಲ್ಡಪ್‌ಗೆ ಏನೂ ಕ ಮ್ಮಿ ಇಲ್ಲ..
ಇದನ್ನೂ ಓದಿ: ಕಿಚ್ಚ ಬೈದ್ರೂ ಅಶ್ವಿನಿ, ಜಾಹ್ನವಿಗೆ ನಾಚಿಕೆ ಇಲ್ವಾ? – ಕಿಚ್ಚನಿಗೆ ಬಿಗ್ ಬಾಸ್ ಸರ್‌ಪ್ರೈಸ್!
ಪರಮಾಣು ಯುದ್ಧವೆಂದರೆ ಮಕ್ಕಳಾಟ ಎಂದುಕೊಂಡಿರುವ ಪಾಕಿಸ್ತಾನದ ಸೇನಾಧ್ಯಕ್ಷ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಭಾರತಕ್ಕೆ ಪದೇ ಪದೇ ಪರಮಾಣು ಬೆದರಿಕೆ ಹಾಕುತ್ತಿದ್ದಾರೆ. ಅಫ್ಘಾನಿಸ್ತಾನದೊಂದಿಗೆ ಕಾದಾಡಿ, ಸೋತು ಸುಸ್ತಾಗಿರುವ ಅಸಿಮ್ ಮುನೀರ್, ತಮ್ಮ ಸೇನೆ ಎಷ್ಟು ಕಳಪೆ ಅನ್ನೋದ್ದನ್ನ ಇಡೀ ಜಗತ್ತಿಗೆ ತೋರಿಸುತ್ತಿದೆ. ಪಾಕ್ ಮಾನ ಜಾಗತಿಕ ಮಟ್ಟದಲ್ಲಿ ಹರಾಜ್ ಆಗ್ತಿದೆ. ಹೀಗಾಗಿ ಜಗತ್ತಿನ ಗಮನವನ್ನು ಬೇರೆಡೆ ಸೆಳೆಯಲು ಈಗ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ದಕ್ಷಿಣ ಏಷ್ಯಾದಲ್ಲಿ ಅಶಾಂತಿಗೆ ಕಾರಣವಾಗಿರುವ ಪಾಕಿಸ್ತಾನ ಸೇನೆಯ ಮುಖ್ಯಸ್ಥ ಮುನೀರ್ ಪರಮಾಣು ಯುದ್ಧದ ಕನವರಿಕೆ ಇನ್ನೂ ನಿಂತಿಲ್ಲ. ಇತ್ತೀಚಿಗಷ್ಟೇ ಅಸಿಮ್ ಮುನೀರ್ ಅವರು ಅಮೆರಿಕದ ನೆಲದಲ್ಲಿ ನಿಂತು, “ನಾವು ನಾಶವಾಗುವ ಮೊದಲು ಅರ್ಧ ಜಗತ್ತನ್ನು ನಾಶ ಮಾಡುತ್ತೇವೆ” ಎಂದು ಹೇಳುವ ಮೂಲಕ ತಮ್ಮ ಬೇಜವಾಬ್ದಾರಿತನವನ್ನು ಪ್ರದರ್ಶಿಸಿದ್ದರು. ಇದೀಗ ಪಾಕ್ ಸೇನಾಧ್ಯಕ್ಷ ಮತ್ತೆ ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕಿದ್ದಾರೆ.ಪಾಕಿಸ್ತಾನ ಮಿಲಿಟರಿ ಅಕಾಡೆಮಿ ಯಲ್ಲಿ ಮಾತನಾಡಿರುವ ಭೂಸೇನಾ ಅಧ್ಯಕ್ಷ, ವಿರುದ್ಧದ ಭಾರತದ ಪ್ರತ್ಯಕ್ಷ ಮತ್ತು ಪರೋಕ್ಷ ಯುದ್ಧಗಳಿಗೆ ಪರಮಾಣು ಅಸ್ತ್ರಗಳು ಉತ್ತರವಾಗಲಿವೆ ಎಂದು ಅಂತ ಹೇಳಿದ್ದಾರೆ.
ಇಸ್ಲಾಮಾಬಾದ್‌ನ ವಿಸ್ತರಿಸುತ್ತಿರುವ ಮಿಲಿಟರಿ ಸಾಮರ್ಥ್ಯಗಳು ಭಾರತದ ಭೌಗೋಳಿಕ ಯುದ್ಧಭೂಮಿಯ ತಪ್ಪು ಕಪ್ಲನೆಯನ್ನು ಛಿದ್ರಗೊಳಿಸಲಿದೆ. ಪರಮಾಣು ರಹಿತ ವಾತಾವರಣದಲ್ಲಿ ಯುದ್ಧಕ್ಕೆ ಸ್ಥಳವಿಲ್ಲ. ಹೀಗಾಗಿ ಭಾರತದ ಒಂದು ಸಣ್ಣ ಪ್ರಚೋದನೆ ಮಾಡಿದ್ರೂ ಕೂಡ ಪಾಕಿಸ್ತಾನ ಪರಮಾಣು ಬಾಂಬ್ ಹಾಗುತ್ತೆ ಅಂತ ಹೇಳಿದ್ದಾರೆ. ಪಾಕ್ ಸೇನಾ ಮುಖ್ಯಸ್ಥನ ಮಾತಿಗೆ ಭಾರತ ತಲೆ ಕೆಡಿಸಿಕೊಂಡಿಲ್ಲ. ಯಾಕಂದ್ರೆ ಪಾಕ್ ಕೈಯಲ್ಲಿ ಬಿಟ್ಟ ಬಿಲ್ಡಪ್ ಕೊಡುವುದು ಬಿಟ್ಟು ಬೇರೆ ಏನೂ ಆಗಲ್ಲ ಅನ್ನೋದು ಇಡೀ ಜಗತ್ತಿಗೆ ಗೊತ್ತು. ಒಂದು ವೇಳೆ ಭಾರತ ಮನಸ್ಸು ಮಾಡಿದ್ರೆ ಪಾಕಿಸ್ತಾನ ಈ ಭೂಮಿ ಮೇಲೆ ಇತ್ತು ಅನ್ನೋದ್ದನ್ನ ಕೂಡ ಅಳಿಸಿ ಹಾಕಬಹುದು.. ಅಷ್ಟು ಪವರ್ ಫುಲ್ ದೇಶವಾಗಿ ಭಾರತ ಬೆಳೆದಿದೆ.. ಬೆಳೆಯುತ್ತಿದೆ. ತನ್ನ ಕೈಯಲ್ಲಿ ಅಫ್ಘಾನ್ ಅನ್ನೋ ಚಿಕ್ಕ ದೇಶವನ್ನ ಎದುರಿಸೋಕೆ ಆಗದ ಪಾಕ್ ಭಾರತದಲ್ಲಿ ಒಂದು ಹುಲ್ಲು ಕಡ್ಡಿಯನ್ನೂ ಕೂಡ ಕೀಳುವುದ್ದಕ್ಕೆ ಆಗಲ್ಲ ಅನ್ನೋದು ಸತ್ಯ .

ನೋಡಿರಿ

