ಕೌರ್ GOLDEN ಗುಡ್ ಬೈ? – ಸ್ಮೃತಿ ಮಂದಾನಗೆ ಒಲಿಯುತ್ತಾ ಕ್ಯಾಪ್ಟನ್ಸಿ?
10 ವರ್ಷ.. ಹರ್ಮನ್ ಗ್ರೇಟ್ ಜರ್ನಿ!

ಜಪಾನ್ ನಲ್ಲಿ ನಡೆಯುತ್ತಿರೋ ಏಷ್ಯನ್ ಗೇಮ್ಸ್ ಟೂರ್ನಮೆಂಟ್ನಲ್ಲಿ ಭಾರತಕ್ಕೆ ಮೊದಲ ಗೋಲ್ಡನ್ ಮೆಡಲ್ ತಂದುಕೊಟ್ಟಿದ್ದೇ ಭಾರತ ಮಹಿಳಾ ಕ್ರಿಕೆಟ್ ತಂಡ. ಹರ್ಮನ್ ಪ್ರೀತ್ ಕೌರ್ ಕ್ಯಾಪ್ಟನ್ಸಿಯ ಟೀಂ ಇಂಡಿಯಾ ಶ್ರೀಲಂಕಾವನ್ನ ಸೋಲಿಸಿ ಮತ್ತೊಮ್ಮೆ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. 15 ದಿನಗಳ ಹಿಂದಷ್ಟೇ ಏಷ್ಯಾಕಪ್ ಟ್ರೋಫಿ ಈಗ ಏಷ್ಯನ್ ಗೇಮ್ಸ್ ಗೆದ್ದಿರೋ ಕೌರ್ ಕ್ಯಾಪ್ಟನ್ಸಿ ಬಗ್ಗೆ ತುಂಬಾನೇ ಅಪ್ರಿಸಿಯೇಷನ್ ಸಿಗ್ತಿದೆ. ಅಟ್ ದಿ ಸೇಮ್ ಟೈಂ ಕೌರ್ ತಮ್ಮ ಯಕತ್ವವನ್ನು ಸ್ಮೃತಿ ಮಂದಾನಗೆ ಬಿಟ್ಟು ಕೊಡೋಕೆ ಇದೇ ಬೆಸ್ಟ್ ಟೈಂ ಅನ್ನೋ ಚರ್ಚೆಯೂ ಶುರುವಾಗಿದೆ.
ಇದನ್ನೂ ಓದಿ : ಅಭಿಷೇಕ್ ಶರ್ಮಾ ಮತ್ತೊಂದು ದಾಖಲೆ – ಸೆಂಚುರಿ ಸರದಾರನಿಗೆ ಇದು ಬೇಕಿತ್ತಾ?
ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಭವಿಷ್ಯದ ದೃಷ್ಟಿಯಿಂದ ತಂಡದಲ್ಲಿ ನಾಯಕತ್ವ ಬದಲಾವಣೆಗೆ ಇದೇ ಬೆಸ್ಟ್ ಸಿಚುಯೇಷನ್ ಅಂತಾ ಮಾಜಿ ಕ್ರಿಕೆಟರ್ಸ್ ಮತ್ತು ಎಕ್ಸ್ಪರ್ಟ್ಸ್ ಸ್ಮೃತಿ ಮಂದಾನ ಪರ ಬ್ಯಾಟಿಂಗ್ ಮಾಡಿದ್ದಾರೆ. ಪ್ರಸ್ತುತ ಹರ್ಮನ್‌ಪ್ರೀತ್ ಕೌರ್ ಅವರಿಗೆ 37 ವರ್ಷ ವಯಸ್ಸಾಗುತ್ತಿದ್ದು, ಮುಂದಿನ ಐಸಿಸಿ ವಿಶ್ವಕಪ್ ವೇಳೆಗೆ 40ರ ಹತ್ತಿರ ಇರ್ತಾರೆ. ಭಾರತ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಅವರೂ ಸಹ, ಮುಂದಿನ ದೊಡ್ಡ ಟೂರ್ನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಮೃತಿ ಮಂದಾನ ನಾಯಕತ್ವದ ಜವಾಬ್ದಾರಿ ನೀಡಲು ಇದು ಗೋಲ್ಡನ್ ಟೈಂ ಎಂದಿದ್ದಾರೆ. ಹಾಗೇ ಜೆಮಿಮಾ ರೋಡ್ರಿಗ್ಸ್ ಅಥವಾ ಶಫಾಲಿ ವರ್ಮಾರನ್ನು ವೈಸ್ ಕ್ಯಾಪ್ಟನ್ಸಿಗೆ ಪಿಕ್ ಮಾಡಬಹುದು ಅನ್ನೋ ಸಲಹೆಯನ್ನೂ ನೀಡಿದ್ದಾರೆ.
ತಂಡ ಉತ್ತುಂಗದಲ್ಲಿ ಇರುವಾಗಲೇ ನಿರ್ಧಾರ ಕೈಗೊಳ್ಳುವುದು ಸೇಫ್!
ಏಷ್ಯನ್ ಗೇಮ್ಸ್ 2026 ರ ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು 147 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿ ಭಾರತ ಚಿನ್ನ ಗೆದ್ದಿದೆ. ತಂಡವು ಗೆಲುವಿನ ಉತ್ತುಂಗದಲ್ಲಿರುವಾಗಲೇ, ಹರ್ಮನ್‌ಪ್ರೀತ್ ಅವರು ಸ್ವಯಂಪ್ರೇರಿತರಾಗಿ ನಾಯಕತ್ವ ಬಿಟ್ಟುಕೊಟ್ಟು ಹೊಸ ಪೀಳಿಗೆಗೆ ದಾರಿಕಲ್ಪಿಸಿಕೊಡಬೆಕು. ನಾಯಕತ್ವದ ಒತ್ತಡವಿಲ್ಲದೆ ಕೇವಲ ಬ್ಯಾಟರ್ ಆಗಿ ಮುಂದುವರಿದರೆ ತಂಡಕ್ಕೆ ಮತ್ತಷ್ಟು ನೆರವಾಗಬಹುದು ಅಂತಾ ಕ್ರಿಕೆಟ್ ಎಕ್ಸ್ಪರ್ಟ್ಸ್ ಸಜೇಷನ್ ನೀಡಿದ್ದಾರೆ. ಇದಕ್ಕಿಂತಲೂ ಮುಖ್ಯವಾಗಿ ನಾಯಕತ್ವ ವಹಿಸಿಕೊಳ್ಳೋಕೆ ಸ್ಮೃತಿ ಮಂದಾನ ಹೆಚ್ಚು ಕೇಪೆಬಲ್ ಇದ್ದಾರೆ. ಪ್ರಸ್ತುತ ವೈಸ್ ಕ್ಯಾಪ್ಟನ್ ಆಗಿರುವ ಸ್ಮೃತಿ, ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11,000 ರನ್ ಪೂರೈಸಿದ ಜಗತ್ತಿನ ಮೊದಲ ಮಹಿಳಾ ಆಟಗಾರ್ತಿ ಎಂಬ ವಿಶ್ವದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲದೆ ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿ 2 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲೂ ಮಂದಾನ ಅವರು, ನಾನು ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಲು ಸಂಪೂರ್ಣ ಸಿದ್ಧಳಾಗಿದ್ದೇನೆ ಎಂದು ಓಪನ್ ಸ್ಟೇಟ್ಮೆಂಟ್ ಕೊಟ್ಟಿದ್ರು. ಹೀಗಾಗಿ ಮುಂಬರುವ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಭಾರತ ಮೆನ್ಸ್ ಮತ್ತು ವುಮೆನ್ಸ್ ಎರಡೂ ತಂಡಗಳು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ. ಟಿ-20ಐ, ಓಡಿಐ ಹಾಗೇ ಟೆಸ್ಟ್ ಸರಣಿಗಳನ್ನ ಆಡ್ಬೇಕಿದೆ. ಸೋ ಈ ಸುದೀರ್ಘ ಸರಣಿ ಮೂಲಕವೇ ಅಲ್ಲಿಂದಲೇ ಮಂದಾನ ಯುಗಕ್ಕೆ ಚಾಲನೆ ನೀಡಿದರೆ ಹೊಸ ತಂಡವನ್ನು ಕಟ್ಟುವುದು ಸುಲಭವಾಗುತ್ತದೆ.
2016ರಿಂದಲೂ ಮೂರೂ ಮಾದರಿ ಕ್ಯಾಪ್ಟನ್ ಆಗಿರುವ ಕೌರ್!
ಅಷ್ಟಕ್ಕೂ ಹರ್ಮನ್ ಪ್ರೀತ್ ಕೌರ್ ಕಳೆದ 10 ವರ್ಷಗಳಿಂದ ಭಾರತ ಮಹಿಳಾ ತಂಡದ ಕ್ಯಾಪ್ಟನ್ ಆಗಿದ್ದಾರೆ. 2016ರಲ್ಲಿ ಹರ್ಮನ್‌ಪ್ರೀತ್ ಕೌರ್ ಭಾರತ ಮಹಿಳಾ ತಂಡದ ಎಲ್ಲಾ ಮೂರು ಮಾದರಿಗಳ ನಾಯಕಿಯಾಗಿ ನೇಮಕಗೊಂಡರು. 2016ರಿಂದ 2026ರವರೆಗೆ ಸುಮಾರು 10 ವರ್ಷ ಭಾರತ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕೌರ್ ನಾಯಕತ್ವದಲ್ಲಿ ಭಾರತ 2025ರ ICC ಮಹಿಳಾ ODI ವಿಶ್ವಕಪ್ ಗೆದ್ದಿತು. ಇದು ಭಾರತ ಮಹಿಳಾ ಕ್ರಿಕೆಟ್ ಇತಿಹಾಸದ ಮೊದಲ ICC ವಿಶ್ವಕಪ್ ಪ್ರಶಸ್ತಿಯಾಗಿದೆ. ಇನ್ನು ಏಷ್ಯನ್ ಗೇಮ್ಸ್ ಮತ್ತು ಏಷ್ಯಾಕಪ್ನಲ್ಲೂ ಮೆಡಲ್ಸ್ ಗೆದ್ದಿದ್ದಾರೆ. ಅಷ್ಟಕ್ಕೂ ಇಲ್ಲಿ ಭಾರತ ಮಹಿಳಾ ತಂಡದಲ್ಲಿ ಕೇವಲ ನಾಯಕಿಯನ್ನು ಬದಲಾವಣೆ ಮಾಡೋ ಪ್ರಶ್ನೆಯಲ್ಲ. ಮುಂದಿನ T20 ವಿಶ್ವಕಪ್ ಸೇರಿದಂತೆ ಭವಿಷ್ಯದ ಟೂರ್ನಿಗಳಿಗೆ ಕರೆಕ್ಟ್ ಪ್ಲ್ಯಾನಿಂಗ್ ರೂಪಿಸಬಹುದು. ಕೌರ್ ತಂಡದಲ್ಲಿ ಇರುವಾಗಲೇ ಸ್ಮೃತಿಯ ನಾಯಕತ್ವದ ಸಿದ್ಧತೆ ಮತ್ತು ಹರ್ಮನ್‌ಪ್ರೀತ್ ಅವರ ಅನುಭವವನ್ನು ಬಳಕೆ ಮಾಡಿಕೊಳ್ಳಬಹುದು. ಈಗಾಗ್ಲೇ ಮಂದಾನಗೆ 30 ವರ್ಷವಾಗಿದ್ದು ನಾಯಕತ್ವದ ಜವಾಬ್ದಾರಿ ನಿರ್ವಹಿಸೋಕೆ ಸರ್ವಸಮರ್ಥರು ಆಗಿದ್ದಾರೆ. ಹಾಗೇ ಅದ್ಭುತವಾದ ಫಾರ್ಮ್ನಲ್ಲಿ ಕೂಡ ಇರೋದ್ರಿಂದ ಭಾರತದ ಭವಿಷ್ಯಕ್ಕೆ ಅತಿದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ.

ನೋಡಿರಿ

