ಪಾಕ್ ಪಂಕ್ಚರ್.. ಭಾರತಕ್ಕೆ GOLD – ವೈಭವ್ ಔಟ್ ಗೆ ತೊಟ್ಟಿಲು ತೂಗಿದ ಸೈಮ್
ಏಷ್ಯನ್ ಗೇಮ್ಸ್ ನಲ್ಲೂ PAK ಗಾಂಚಾಲಿ

ಪಾಕಿಸ್ತಾನ ಪ್ಲೇಯರ್ಗಳಿಗೆ ಮೈದಾನದಲ್ಲಿ ಆಡ್ಬೇಕಾದ್ರೆ ಮ್ಯಾಚ್ ಗೆಲ್ಬೇಕು ಅನ್ನೋದಕ್ಕಿಂತ ಜಾಸ್ತಿ ಗಾಂಚಾಲಿನೇ ತುಂಬಿರುತ್ತೆ. ಏಷ್ಯನ್ ಗೇಮ್ಸ್ ಫೈನಲ್ ಪಂದ್ಯದಲ್ಲೂ ಅದೇ ರಿಪೀಟ್ ಆಗಿದೆ. ಭಾರತ ಮತ್ತು ಪಾಕ್ ನಡುವಿನ ಗೋಲ್ಡನ್ ಮೆಡಲ್ ಗೇಮ್ನಲ್ಲಿ ನಮ್ಮ ಸೆನ್ಸೇಷನಲ್ ಸ್ಟಾರ್ ವೈಭವ್ ಸೂರ್ಯವಂಶಿಯನ್ನೇ ಅಣಕ ಮಾಡಿದ್ದಾರೆ.
ಇದನ್ನೂ ಓದಿ : ಭಾರತಕ್ಕೆ AUSನೇ ಫಸ್ಟ್ ವಿಲನ್! – ಅ.10ಕ್ಕೆ ಇಂಡೋ-ಪಾಕ್ ಫೈಟ್
ಕ್ರಿಕೆಟ್ ಅಂದ್ರೇನೆ ಭಾರತ ಬಾಸ್.. ಅದ್ರಲ್ಲೂ ಪಾಕಿಸ್ತಾನ ವಿರುದ್ಧದ ಮ್ಯಾಚ್ ಅಂದ್ರೆ ಟೀಂ ಇಂಡಿಯಾ ಪ್ಲೇಯರ್ಸ್ ವಾರಿಯರ್ಸ್ ಆಗಿಬಿಡ್ತಾರೆ. ಜಪಾನ್ನಲ್ಲಿ ನಡೆದ ಏಷ್ಯನ್ ಗೇಮ್ಸ್ ಮೆನ್ಸ್ ಕ್ರಿಕೆಟ್ ಫೈನಲ್ ಪಂದ್ಯದಲ್ಲೂ ಅದೇ ಆಗಿದ್ದು. ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ಭಾರತದ ನಾಯಕ ಶ್ರೇಯಸ್ ಅಯ್ಯರ್ ನಮ್ಮ ಬ್ಯಾಟಿಂಗ್ ಯುನಿಟ್ ಬೊಂಬಾಟ್ ಆಗಿದೆ. ಸೋ ನಾವು ಫಸ್ಟ್ ಬ್ಯಾಟಿಂಗ್ನೇ ಮಾಡ್ತೀವಿ ಅಂತಾ ಬ್ಯಾಟಿಂಗ್ ಸೆಲೆಕ್ಟ್ ಮಾಡಿಕೊಳ್ತಾರೆ. ಶ್ರೇಯಸ್ ನಿರ್ಧಾರ ಎಷ್ಟು ಕರೆಕ್ಟ್ ಇತ್ತು ಅನ್ನೋದನ್ನ ಟಾರ್ಗೆಟ್ ನೋಡಿದ್ರೇನೇ ಗೊತ್ತಾಗ್ತಿತ್ತು. ಹೊಡುದ್ರು ಹೊಡುದ್ರು ನಾಯಿಗ್ ಹೊಡ್ದಂಗ್ ಹೊಡುದ್ರು ಅಂತಾರಲ್ಲ ಹಾಗೇ ಫಸ್ಟ್ ಓವರ್ನಿಂದ ಹಿಡ್ದು ಕೊನೇ ಓವರ್ವರೆಗೂ ಪಾಕ್ ಬೌಲರ್ಗಳನ್ನ ಚೆಂಡಾಡಿದ್ರು.
ಪಾಕ್ ಬೆವರಿಳಿಸಿದ ಅಭಿಷೇಕ್, ತಿಲಕ್ & ದುಬೆ!
ಭಾರತಕ್ಕೆ ಈ ಪಂದ್ಯ ಫೈನಲ್ ಮ್ಯಾಚ್, ಗೋಲ್ಡ್ ಮೆಡಲ್ ಅನ್ನೋದಕ್ಕಿಂತ ಜಾಸ್ತಿ ಪಾಕಿಸ್ತಾನ ವಿರುದ್ಧ ಗೆಲ್ಬೇಕು ಅನ್ನೋ ಪ್ರತಿಷ್ಠೆ ಇತ್ತು. ಹೀಗಾಗೇ ಈ ಮ್ಯಾಚಲ್ಲೂ ಟಾಸ್ ಟೈಮಲ್ಲಿ ಪಾಕ್ ನಾಯಕನಿಗೆ ಶ್ರೇಯಸ್ ಅಯ್ಯರ್ ಶೇಕ್ ಹ್ಯಾಂಡ್ ಮಾಡ್ಲಿಲ್ಲ. ಸೋ ಮೊದಲ ಇನ್ನಿಂಗ್ಸ್ನಲ್ಲಿ ಭಾರತದ ಪರ ಬ್ಯಾಟಿಂಗ್ ತುಂಬಾನೇ ಚೆನ್ನಾಗಿತ್ತು. ಫಸ್ಟ್ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ಭಾರತ ದಾಖಲೆಯ ಟಾರ್ಗೆಟ್ ಸೆಟ್ ಮಾಡಿದ್ರು.
ಅಭಿಷೇಕ್ ಅಬ್ಬರ.. ತಿಲಕ್ ತೂಫಾನ್!
ಭಾರತದ ಪರ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಓಪನರ್ಸ್
ಸೂರ್ಯವಂಶಿ 15(9) ರನ್ಸ್ ಗೆ ಔಟ್.. ಚೆಂಡಾಡಿದ ಅಭಿಷೇಕ್ 61(28)
ಸಂಜು 2(4) ನಿರಾಸೆ.. ಶ್ರೇಯಸ್ 21(24), ಕಿಶನ್ 20(18) ರನ್ಸ್
ತಿಲಕ್ 51*(22) & ದುಬೆ 27(15) ರನ್ಸ್ ಮೂಲಕ ಪವರ್ ಶೋ
6 ವಿಕೆಟ್ ಕಳ್ಕೊಂಡು 212 ರನ್ ಗಳ ಟಾರ್ಗೆಟ್ ಸೆಟ್ ಮಾಡಿದ ಇಂಡಿಯಾ
ಅದ್ರಲ್ಲೂ ಪವರ್ ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಭಾರತದ ಬ್ಯಾಟಿಂಗ್ ಬೊಂಬಾಟ್ ಆಗಿತ್ತು. ಪವರ್‌ಪ್ಲೇನಲ್ಲಿ ಭಾರತ ತಂಡವು 2 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿ ದಾಖಲೆಯ ಆರಂಭ ಪಡೆಯಿತು. ಇನಿಂಗ್ಸ್‌ನ ಕೊನೆಯ 4 ಓವರ್‌ಗಳಲ್ಲಿ ತಿಲಕ್ ವರ್ಮಾ ಮತ್ತು ಶಿವಂ ದುಬೆ ಜೋಡಿ ಬರೋಬ್ಬರಿ 69 ರನ್‌ಗಳನ್ನು ಬಾರಿಸಿದ್ರು. ಈ ಜೋಡಿಯು 6ನೇ ವಿಕೆಟ್‌ಗೆ ಕೇವಲ 25 ಎಸೆತಗಳಲ್ಲಿ 50 ರನ್‌ಗಳ ಜೊತೆಯಾಟವಾಡಿದ್ರು. ಹೀಗೆ ಬ್ಯಾಟಿಂಗ್ನಲ್ಲಿ ಲೆಫ್ಟ್ ರೈಟ್ ಅಂತಾ ಚಾರ್ಜ್ ಮಾಡ್ತಿದ್ರೆ ಅತ್ತ ಪಾಕ್ ಆಟಗಾರರ ಅಹಂಕಾರ ಮಾತ್ರ ಕಮ್ಮಿ ಆಗಿರ್ಲಿಲ್ಲ.
ಸೂರ್ಯವಂಶಿ ಔಟ್ ಮಾಡಿ ತೊಟ್ಟಿಲು ತೂಗಿದ ಸೈಮ್ ಅಯೂಬ್!
15 ವರ್ಷದ ವೈಭವ್ ಸೂರ್ಯವಂಶಿಯನ್ನ ಇಡೀ ಕ್ರಿಕೆಟ್ ಜಗತ್ತೇ ಅಪ್ರಿಶಿಯೇಟ್ ಮಾಡ್ತಿದೆ. ಲೆಜೆಂಡರಿ ಕ್ರಿಕೆಟರ್ಗಳೂ ಕೂಡ ಅನ್ಬಿಲೀವಬಲ್ ಟ್ಯಾಲೆಂಟ್ ಅಂತಾ ಹೇಳಿದ್ದಾರೆ. ಆದ್ರೆ ಪಾಕಿಸ್ತಾನಿಯರಿಗೆ ಇದನ್ನ ಡೈಜೆಸ್ಟ್ ಮಾಡಿಕೊಳ್ಳೋದೇ ಕಷ್ಟ. ಹೀಗಾಗೇ ವೈಭವ್ ಬ್ಯಾಟ್ನಲ್ಲಿ ಚಿಪ್ ಇದೆ, ಏಜ್ ಫ್ರಾಡ್ ಮಾಡ್ತಿದ್ದಾರೆ ಅಂತೆಲ್ಲಾ ಬಾಯಿ ಬಡ್ಕೊಳ್ತಿದ್ರು. ಈಗ ಅವ್ರ ತಂಡದ ವಿರುದ್ಧವೇ ಆಡ್ತಿದ್ದಾರೆ ಅನ್ನೋದನ್ನ ಅರಗಿಸಿಕೊಳ್ಳೋಕೆ ಆಗ್ಲಿಲ್ಲ ಅನ್ಸುತ್ತೆ. ಹೀಗಾಗಿ 9 ಬಾಲಲ್ಲಿ 2 ಸಿಕ್ಸ್ ಹೊಡೆದು ಡೇಂಜರಸ್ ಆಗ್ತಿದ್ದ ವೈಭವ್ನ ಪಾಕ್ ಆಲ್ರೌಂಡರ್ ಸೈಮ್ ಅಯೂಬ್ ಔಟ್ ಮಾಡ್ತಾರೆ. ಆದ್ರೆ ಪಂದ್ಯವನ್ನೇ ಗೆದ್ದೆ ಅನ್ನೋ ಥರ ಆಡಿದ್ದಾನೆ. ಕೈಯಲ್ಲಿ ಮಗುವನ್ನು ತೂಗೋ ಥರ ವೈಭವ್ ಚೈಲ್ಡ್ ಔಟ್ ಮಾಡಿದೆ ಅಂತಾ ಬೇಬಿ ಕ್ರಾಡಲ್ ಸೆಂಡ್ ಆಫ್ ಕೊಟ್ಟಿದ್ದಾರೆ. ಬಟ್ ಅದೇ ಓವರ್ನಲ್ಲೇ ಅಭಿಷೇಕ್ ಶರ್ಮಾ ಸಿಕ್ಸ್, ಫೋರ್ ಹೊಡೆದು ಟಾಂಟ್ ಕೊಟ್ರು. ಹಾಗೇ 212 ರನ್ಗಳನ್ನ ಸೆಟ್ ಮಾಡಿದ ಭಾರತ ನೆಕ್ಸ್ಟ್ ಬೌಲಿಂಗ್ಗಾಗಿ ಫೀಲ್ಡ್ಗೆ ಇಳಿರುವಾಗ ರವಿ ಬಿಷ್ಣೋಯ್ ಕೂಡ ತೊಟ್ಟಿಲು ತೂಗ್ತೀವಿ ಅನ್ನೋ ರೀತಿಯಲ್ಲಿ ಅವ್ರೂ ಕೌಂಟರ್ ಕೊಡುತ್ತಲೇ ಫೀಲ್ಡಿಗಿಳಿದ್ರು. ಪಾಕಿಸ್ತಾನದ ಬ್ಯಾಟಿಂಗ್ ಶುರುವಾದ್ಮೇಲೆ ಅದನ್ನ ಪ್ರೂವ್ ಕೂಡ ಮಾಡಿದ್ರು.
ಸುಂದರ್ ಬ್ರೇಕ್ ಥ್ರ್ಯೂ.. ಅಕ್ಷರ್ ಮ್ಯಾಜಿಕ್ ಗೆ ಪಾಕ್ ಥಂಡಾ!
ಭಾರತದ ವಿರುದ್ಧ ಪಾಕಿಸ್ತಾನ ಪಂದ್ಯಗಳನ್ನ ಗೆಲ್ಲೋದೇ ಹೆಚ್ಚು. ಅಂಥಾದ್ರಲ್ಲಿ 212 ರನ್‌ಗಳ ಟಾರ್ಗೆಟ್ ಅಂದಾದ್ಲೇ ಭಾರತ ಗೆದ್ದಾಗಿತ್ತು. ಚೇಸಿಂಗ್ ಸ್ಟಾರ್ಟ್ ಮಾಡಿದ ಪಾಕಿಸ್ತಾನಿ ಪ್ಲೇಯರ್ಗಳು ಮೊದಲ ಓವರ್ನಲ್ಲಿ ಜಸ್ಪ್ರೀತ್ ಬುಮ್ರಾಗೆ 11 ರನ್ಸ್ ಹೊಡೆದು ಚೇಸಿಂಗ್ಗೆ ನಾವೂ ರೆಡಿ ಅನ್ನೋ ಥರ ಇದ್ರು. ಆದ್ರೆ ನಂತ್ರದಲ್ಲಿ ಭಾರತದ ಬೌಲರ್ಸ್ ಜಾದೂ ಶುರುವಾಯ್ತು. ವಾಷಿಂಗ್ಟನ್ ಸುಂದರ್ ಫಸ್ಟ್ ಬ್ರೇಕ್ ಥ್ರ್ಯೂ ತಂದುಕೊಡ್ತಾರೆ.
ಕ್ಯಾಚ್ ಮಿಸ್ ದುಬಾರಿ!
10 ರನ್ ಗಳಿಸಿದ್ದ ನಾಯಕ ಫರ್ಹಾನ್ ವಿಕೆಟ್ ತೆಗೆದ ಸುಂದರ್
3 ರನ್ ಗೆ ಉಸ್ಮಾನ್, 23 ರನ್ ಗಳಿಸಿದ್ದ ಮಾಜ್ ವಿಕೆಟ್ ಮಾಡಿದ ಅಕ್ಷರ್
39ಕ್ಕೆ 3 ವಿಕೆಟ್.. 4ನೇ ವಿಕೆಟ್ ಗೆ ಹಸನ್ ನವಾಜ್ ಮತ್ತೆ ಸೈಮ್ ಅಯೂಬ್
ಹಸನ್ ನವಾಜ್ 10 ರನ್ ಗಳಿಸಿದ್ದಾಗ ವೈಭವ್ & ಬಿಷ್ಣೋಯ್ ಕ್ಯಾಚ್ ಮಿಸ್
29 ಬಾಲಲ್ಲೇ ಅರ್ಧಶತಕ, ಪಾಕಿಸ್ತಾನಕ್ಕೆ ಗೆಲುವಿನ ಆಸೆ ಮೂಡಿಸಿದ್ದ ಹಸನ್
ಶಿವಂ ದುಬೆ ಫಸ್ಟ್ ಬಾಲಲ್ಲೇ 29 ರನ್ಸ್ ಗಳಿಸಿದ್ದ ಸೈಮ್ ಅಯೂಬ್ ವಿಕೆಟ್
5 ಓವರ್ ಗಳಲ್ಲಿ ಪಾಕಿಸ್ತಾನದ ಗೆಲುವಿಗೆ 82 ರನ್ ಗಳ ಅಗತ್ಯ
20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 192ಕ್ಕೆ ಅಂತ್ಯ.. 19 ರನ್ಸ್ ಗೆಲುವು
ಅಷ್ಟಕ್ಕೂ ಇಲ್ಲಿ ಭಾರತ ಬಿಗ್ ಸ್ಕೋರ್ ಸೆಟ್ ಮಾಡಿದ್ದೇ ಗೆಲುವಿಗೆ ಕಾರಣವಾಯ್ತು. ಇಲ್ದಿದ್ರೆ ಮ್ಯಾಚ್ ಇನ್ನಷ್ಟು ಕ್ಲೋಸ್ ಆಗಿಬಿಡ್ತಿತ್ತು. ಒಟ್ನಲ್ಲಿ ಭಾರತಕ್ಕೆ ಏಷ್ಯನ್ ಗೇಮ್ಸ್ನಲ್ಲಿ ಮತ್ತೊಂದು ಗೋಲ್ಡ್ ಸಿಕ್ತು ಅನ್ನೋದ್ರ ಜೊತೆಗೆ ಪಾಕಿಸ್ತಾನ ವಿರುದ್ಧ ಗೆದ್ದಿದ್ದು ಮತ್ತಷ್ಟು ಖುಷಿ ತಂದಿರುತ್ತೆ. ನಾಯಕನಾಗಿ ಶ್ರೇಯಸ್ ಅಯ್ಯರ್ ಕೂಡ ತಮ್ಮ ಮೊದಲ ಮಲ್ಟಿ ನೇಷನ್ಸ್ ಟೂರ್ನಮೆಂಟ್ನಲ್ಲಿ ಭಾರತವನ್ನ ಚಾಂಪಿಯನ್ಸ್ ಮಾಡಿದ್ದಾರೆ.

ನೋಡಿರಿ

