ಬುಮ್ರಾ ಕಂಬ್ಯಾಕ್, ವೈಭವ್ಗೆ ಚಾನ್ಸ್! ಏಷ್ಯನ್ ಗೇಮ್ಸ್‌ನಲ್ಲಿ ಗೆಲ್ಲುತ್ತಾ ಟೀಂ IND?
10 ಟೀಂನಲ್ಲಿ ಭಾರತಕ್ಕೆ ಕಂಟಕ ಯಾರು?

ಬುಮ್ರಾ ಕಂಬ್ಯಾಕ್, ವೈಭವ್ಗೆ ಚಾನ್ಸ್! ಏಷ್ಯನ್ ಗೇಮ್ಸ್‌ನಲ್ಲಿ ಗೆಲ್ಲುತ್ತಾ ಟೀಂ IND?10 ಟೀಂನಲ್ಲಿ ಭಾರತಕ್ಕೆ ಕಂಟಕ ಯಾರು?

ವಿಶ್ವದಲ್ಲಿ ಈಗ ಏಷ್ಯನ್ ಗೇಮ್ಸ್‌ ಕ್ರೇಜ್ ಶುರುವಾಗಿದ್ದು, ಚಿನ್ನದ ಬೇಟೆ 45 ದೇಶಗಲ್ಲಿ ರೆಡಿಯಾಗಿವೆ. ಇದ್ರಲ್ಲಿ 10 ದೇಶಗಳು ಕ್ರಿಕೆಟ್‌ ಆಡಲಿದ್ದು, ಭಾರತ ಕೂಡ ಚಿನ್ನದ ಬೇಟೆಯಾಡಲಿದೆ. ಹೀಗಾಗಿ ಏಷ್ಯನ್ ಗೇಮ್ಸ್‌ಗೆ ಬಿಸಿಸಿಐ ತಂಡವನ್ನ ಪ್ರಕಟ ಮಾಡಿದೆ. ಅನುಭವಿ ಮತ್ತು ಯುವ ಆಟಗಾರರ ಈ ಮಿಶ್ರಣದ ಟೀಂ ಇಂಡಿಯಾ ಕಳೆದ ಸಲ ಪಡೆದ ಚಿನ್ನದ ಪದಕವನ್ನ ತನ್ನಲ್ಲೇ ಉಳಿಸಿಕೊಳ್ಳುವುದ್ದಕ್ಕೆ ಹೋರಾಟ ನಡೆಸಲಿದೆ. ಐಪಿಎಲ್‌ನಲ್ಲಿ ಕಮಾಲ್ ಮಾಡಿದ ಆಟಗಾರರನ್ನೇ ಹೆಕ್ಕಿ, ಏಷ್ಯನ್ ಗೇಮ್ಸ್‌ಗೆ ಟೀಂ ಇಂಡಿಯಾ ಪ್ರಕಟ ಮಾಡಿದೆ. ಹಾಗಿದ್ರೆ 10 ಟೀಂ ನಲ್ಲಿ ಭಾರತಕ್ಕೆ ಪೈಪೋಟಿ ಕೋಡೋ ಟೀಂ ಯಾವುದು? ಬುಮ್ರಾ ಕಂಬ್ಯಾಕ್‌ನಿಂದ ಭಾರತಕ್ಕೆ ಲಾಭವೇನು?, ವೈಭವ್‌ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡೋಕೆ ಇರೋ ಚಾನ್ಸ್ ಏನು?  ಅನ್ನೋದ್ದನ್ನ ನೋಡೋಣ.

ಸಾಕಷ್ಟು ಹಲ್‌ಚಲ್ ಎಬ್ಬಿಸಿದ ಏಷ್ಯನ್ ಗೇಮ್ಸ್‌ ಹಬ್ಬ ಶುರುವಾಗ್ತಿದೆ. ಏಷ್ಯನ್ ಗೇಮ್ಸ್‌ನಲ್ಲಿ ಹೆಚ್ಚು ಗಮನ ಸಳೆಯುವುದು ಕ್ರಿಕೆಟ್..ಈಗ ಜಪಾನ್​ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಪಂದ್ಯಾವಳಿಗಳ ಅಧಿಕೃತ ವೇಳಾಪಟ್ಟಿ ಪ್ರಕಟವಾಗಿದೆ. ಈ ಟಿ20 ಟೂರ್ನಿಯು 2026ರ ಸೆಪ್ಟೆಂಬರ್ 17 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಅಕ್ಟೋಬರ್ 3 ರಂದು ನಡೆಯಲಿದೆ. ಕಳೆದ ಬಾರಿ ಚೀನಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಐತಿಹಾಸಿಕ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ಭಾರತದ ಪುರುಷರ ತಂಡ, ಈ ಸಲ ಕೂಡ ಚಿನ್ನದ ಪದಕ್ಕಾಗಿ ಹೋರಾಟ ನಡೆಸಿದೆ. ಹೀಗಾಗಿ ಬಿಸಿಸಿಐ ಬಲಿಷ್ಠ ಯಂಗ್ ತಂಡವನ್ನ ಪ್ರಕಟಿಸಿದೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ತಂಡ ಅನೌನ್ಸ್ ಆದ ಬೆನ್ನಲ್ಲೇ ಏಷ್ಯನ್ ಗೇಮ್ಸ್‌ಗ ಭಾರತ ತಂಡ ಅನೌನ್ಸ್ ಆಗಿದೆ. ಎರಡು ಟೀಂಗಳಲ್ಲಿ ಅವರೇ ಇದ್ದು, ಕೆಲವರು ಮಾತ್ರ ಆಕಡೆ ಈಕಡೆ ಆಗಿದ್ದಾರೆ.

ಹೊಸ ಟಿ20 ನಾಯಕ ಶ್ರೇಯಸ್ ಅಯ್ಯರ್ ಅವರೇ ಏಷ್ಯನ್ ಗೇಮ್ಸ್ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ. ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.  ರವಿ ಬಿಷ್ಣೋಯ್  , ಅಭಿಷೇಕ್ ಶರ್ಮಾ,   ನಿತೀಶ್ ಕುಮಾರ್ ರೆಡ್ಡಿ  ಜಸ್ಪ್ರೀತ್ ಬುಮ್ರಾಸಂಜು ಸ್ಯಾಮ್ಸನ್ , ಅಕ್ಷರ್ ಪಟೇಲ್  , ಹರ್ಷಿತ್ ರಾಣಾ  ,ಇಶಾನ್ ಕಿಶನ್  ,ವಾಷಿಂಗ್ಟನ್ ಸುಂದರ್ಅರ್ಷದೀಪ್ ಸಿಂಗ್ ,  ಶಿವಂ ದುಬೆ   ,ವರುಣ್ ಚಕ್ರವರ್ತಿಯಂತಿ ಐಪಿಎಲ್‌ ಮೂಲಕ ಮನೆ ಮತಾಗಿರೋ ವೈಭವ್ ಸೂರ್ಯವಂಶಿಯಂತ ಆಟಗಾರರೂ ಇದ್ದಾರೆ. ಅನುಭವಿ ಮತ್ತು ಯುವ ಆಟಗಾರರ ಈ ಮಿಶ್ರಣವು ಭಾರತವನ್ನು ಪಂದ್ಯಾವಳಿಗೆ ಪ್ರಬಲ ಸ್ಪರ್ಧಿಯನ್ನಾಗಿ ಮಾಡಿದೆ. )

 ಏಷ್ಯನ್ ಗೇಮ್ಸ್‌ಗೆ ಬುಮ್ರಾ ಕಂಬ್ಯಾಕ್

ಇನ್ನು ಇಲ್ಲಿ ಗಮನಿಸಬೇಕಾದ ಮೈನ್ ಆಟಗಾರ ಅಂದ್ರೆ ಅದು ಜಸ್ಪ್ರೀತ್ ಬುಮ್ರಾ.. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ಜಸ್ಪ್ರೀತ್ ಬುಮ್ರಾ ಅವರನ್ನು ಏಷ್ಯನ್ ಗೇಮ್ಸ್‌ನಲ್ಲಿ ಚಾನ್ಸ್ ನೀಡಲಾಗಿದೆ. ಬಿಸಿಸಿಐ ತುಂಬಾ ಗಂಭೀರವಾಗಿ ಪರಿಗಣಿಸಿ ಇಲ್ಲಿ ಇವರಿಗೆ ಚಾನ್ಸ್ ನೀಡಲಾಗಿದೆ.  ಬುಮ್ರಾ ತಂಡಲ್ಲಿದ್ರೆ ಎದುರಾಳಿಗೆ ಭಯ ಶುರುವಾಗುತ್ತೆ.. ವಿಶ್ವದ ನಂಬರ್ 1 ಬೌಲರ್ ಮುಂದೆ ಹೇಗೆ ಆಡೋ ಅನ್ನೋ ಆತಂಕ ಎದುರಾಳಿ ಬ್ಯಾಟರ್‌ಗೆ ಕಾಡುತ್ತೆ.. ಬುಮ್ರಾ ಏಷ್ಯನ್ ಗೇಮ್ಸ್‌ಗೆ ಚಾನ್ಸ್‌ ಪಡೆದಿದ್ರಿಂದ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ತಂಡಕ್ಕೆ ಚಾನ್ಸ್ ಪಡೆದಿದ್ದ ಮೊಹಮ್ಮದ್ ಸಿರಾಜ್ ಹೊರಬೀಳಲಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ವೈಭವ್‌ ಕಮಾಲ್

ಇನ್ನೂ ಈಗ ಎಲ್ಲರ ಕಣ್ಣು ಬಿದ್ದಿರೋದು ವೈಭವ್ ಮೇಲೆ.. ವೈಭವ್‌ಗೆ ಟಿ20I ತಂಡಕ್ಕೆ ಚಾನ್ಸ್ ಸಿಕ್ಕಿದ್ದು, ಐಪಿಎಲ್‌ನಲ್ಲಿ ಆಡಿದ್ದಂತೆ ಟೀಂ ಇಂಡಿಯಾದಲ್ಲೂ ಆಡ್ತಾರಾ ಅನ್ನೋ ಕುತೂಹಲ ಫ್ಯಾನ್ಸ್‌ಗೆ ಮನೆ ಮಾಡಿದೆ. ಅದರಲ್ಲೂ ಏಷ್ಯನ್ ಗೇಮ್ಸ್‌ನಲ್ಲಿ ಚಾನ್ಸ್ ಸಿಕ್ಕಿರುವುದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ವೈಭವ್ ಹೆಸರು ಮಾಡಬಹುದು.. ವೈಭವ್ ಐಪಿಎಲ್ 2026 ರಲ್ಲಿ 776 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಜಸ್ಟ್ 15 ವರ್ಷ ವಯಸ್ಸಿನಲ್ಲಿ 72 ಸಿಕ್ಸರ್‌ಗಳನ್ನು ಬಾರಿಸಿ ವಿಶ್ವದಾಖಲೆ ಬರೆದಿದ್ದಾರೆ. ಭಾರತೀಯ ಕ್ರಿಕೆಟ್‌ನ ಮುಂದಿನ ದೊಡ್ಡ ಸೂಪರ್‌ಸ್ಟಾರ್ ಆಗಿ ತಮ್ಮನ್ನು ತಾವು ಸರ್ಮಥಿಸಿಕೊಳ್ಳುವುದ್ದಕ್ಕೆ ದೊಡ್ಡ ವೇದಿಕೆ ಸಿಕ್ಕಿದೆ. ಅಳೆದು ತೂಗಿಯೇ ಏಷ್ಯನ್ ಗೇಮ್ಸ್‌ನಲ್ಲಿ BCCI ಚಾನ್ಸ್ ಕೊಟ್ಟಿದೆ.

 10 ತಂಡಗಳ ಫೈಟ್, ಭಾರತಕ್ಕೆ ಯಾರು ಸ್ಟ್ರಾಂಗ್‌?

ಈ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಸೇರಿ 10 ತಂಡಗಳು ಫೈಟ್ ನಡೆಸಲಿವೆ. ಇಲ್ಲಿ ಭಾರತಕ್ಕೆ ಯಾರು ಪ್ರಭಲ ಎದುರಾಳಿ ಅಂತ ಹುಡುಕಿದ್ರೆ ಯಾರು ಸಿಗಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ, ನೇಪಾಳ, ಜಪಾನ್, ಮಲೇಷ್ಯಾ, ಹಾಂಗ್ ಕಾಂಗ್ ಮತ್ತು ಓಮನ್ ದೇಶಗಳು ಚಿನ್ನದ ಪದಕಕ್ಕಾಗಿ ಪೈಪೋಟಿ ನಡೆಸಲಿವೆ. ಕ್ರಿಕೆಟ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಬಿಟ್ರೆ ಏಷ್ಯಾದಲ್ಲಿ ಯಾವುದೇ ಬಲಿಷ್ಠಿ ಪೈಪೋಟಿ ನೀಡುವ ತಂಡ ಇಲ್ಲ. ಇಲ್ಲಿ ಭಾರತ ಚಿನ್ನ ಗೆಲ್ಲ ಸಾಧ್ಯತೆ 70 ರಿಂದ 80 ಪರ್ಸೆಂಟ್ ಇದೆ. ಪಾಕಿಸ್ತಾನ್, ಶ್ರೀಲಂಕಾ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್ ಮುಂತಾದ ತಂಡಗಳು ಭಾರತಕ್ಕೆ ಪ್ರತಿಸ್ಪರ್ಧಿಗಳು. ಆದ್ರೆ ಭಾರತ ತಂಡದಲ್ಲಿ ಟಾಪ್ T20 ಆಟಗಾರರು ಇದ್ದಾರೆ. ಬ್ಯಾಟಿಂಗ್‌ ಮತ್ತು ಬೌಲರ್‌ಗಳು ಎದುರಾಳಿಯನ್ನ ಈಸಿಯಾಗಿ ಕಟ್ಟಿಹಾಕಲಿದ್ದಾರೆ. ಏಷ್ಯನ್ ಗೇಮ್ಸ್ ತಂಡವನ್ನ ನೋಡಿದ್ರೆ ಈ ಸಲ ಕೂಡ ಚಿನ್ನದ ಪದಕ ನಮಗೆ..

Kishor KV