ಮೊನ್ನೆ 204.. ಇಂದು 40 ರನ್ಸ್! – ಸೂರ್ಯವಂಶಿಗೆ ಲಂಕನ್ನರ ಬ್ರೇಕ್
ಭಾರತಕ್ಕೆ ಅಭಿ-ವೈಭವ್ POWER

ಭಾರತ ಮತ್ತು ಶ್ರೀಲಂಕಾ ಎ ತಂಡಗಳ ನಡುವಿನ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಸೆಮಿಫೈನಲ್ ಪಂದ್ಯ ಬಾರೀ ಕುತೂಹಲ ಮೂಡಿಸಿತ್ತು. ಆಲ್ಮೋಸ್ಟ್ ಎಲ್ಲರ ಕಣ್ಣು ಇದ್ದದ್ದು ಬಾಸ್ ಬೇಬಿ ವೈಭವ್ ಸೂರ್ಯವಂಶಿ ಬಗ್ಗೆ. ಯಾಕಂದ್ರೆ ಯುಎಇ ವಿರುದ್ಧ 200+ ರನ್ಸ್ ಹೊಡೆದಿದ್ದ ವೈಭವ್ ಸೂರ್ಯವಂಶಿ ಲಂಕನ್ನರ ವಿರುದ್ಧವೂ ಸಿಡಿಯುತ್ತಾರಾ ಅನ್ನೋ ಪ್ರಶ್ನೆಗಳಿದ್ವು. ಬಟ್ ಲಂಕನ್ನರ ವಿರುದ್ಧ ಬಿಗ್ ಸ್ಕೋರ್ ಬರದೇ ಇದ್ರೂ ಪ್ಲ್ಯಾಪ್ ಅಂತೂ ಆಗಿಲ್ಲ. ಹೀಗಿದ್ರೂ ಒಂದಷ್ಟು ಪ್ರಶ್ನೆಗಳಂತೂ ಮೂಡಿವೆ. ಮತ್ತೊಂದೆಡೆ ಅಭಿಷೇಕ್ ಶರ್ಮಾ ಬ್ಯಾಟಿಂಗ್ ಕೂಡ ಗಮನ ಸೆಳೆದಿದೆ.
ಇದನ್ನೂ ಓದಿ : ಹರ್ಷಿತ್ ರಾಣಾ ವಿರುದ್ಧ PAK ದೂರು – IND Vs SL ಸೆಮೀಸ್ ಫೈಟ್
ಶ್ರೀಲಂಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಂತ ಭಾರತ ಫಸ್ಟ್ ಬ್ಯಾಟಿಂಗ್ ಮಾಡ್ತೀವಿ ಅಂತಾ ಬ್ಯಾಟಿಂಗ್ ಚೂಸ್ ಮಾಡಿಕೊಳ್ತಾರೆ. ಆದ್ರೆ ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11ನಲ್ಲಿ ಒಂದು ಬದಲಾವಣೆ ಮಾಡಿದ್ದು ಅದೇ ಅಚ್ಚರಿ ಮೂಡಿಸಿದೆ. ನಂಬರ್ 3ನಲ್ಲಿದ್ದ ಪ್ಯೂರ್ ಬ್ಯಾಟರ್ನೇ ಕೈಬಿಟ್ಟು ಆಫ್ ಸ್ಪಿನ್ ಆಲೌಂಡರ್ ತನುಶ್ ಕೋಟಿಯಾನ್ಗೆ ಚಾನ್ಸ್ ಕೊಟ್ಟಿದ್ರು. ನೇಪಾಳ, ಪಾಕಿಸ್ತಾನ ವಿರುದ್ಧ ನಂಬರ್ 3ನಲ್ಲಿ ಆಯುಷ್ ಬದೋನಿ ಚೆನ್ನಾಗಿ ಆಡಿಲ್ಲ ಅಂತಾ ಯುಎಇ ವಿರುದ್ಧದ ಪಂದ್ಯಕ್ಕೆ ಪ್ರಭ್ ಸಿಮ್ರಾನ್ ಸಿಂಗ್ ಆಡಿಸಿದ್ರು. ಆದ್ರೆ ಪ್ರಭ್ ಸಿಮ್ರಾನ್ ಕೂಡ ಬೇಗನೆ ವಿಕೆಟ್ ಒಪ್ಪಿಸಿದ್ರು. ಸೋ ಅಲ್ಲಿಗೆ ನಂಬರ್ 3ನಲ್ಲಿ ಸ್ಪೆಷಲಿಸ್ಟ್ ಬ್ಯಾಟರ್ ಬೇಡ್ವೇಬೇಡ ಅಂತಾ ಲಂಕಾ ವಿರುದ್ಧದ ಪಂದ್ಯಕ್ಕೆ ಕೋಟಿಯಾನ್ನ ಸೆಲೆಕ್ಟ್ ಮಾಡಿದ್ರು. ಬ್ಯಾಟಿಂಗ್ ಡೆಪ್ತ್ ಏನೋ ಎಂಡ್ವರೆಗೂ ಇತ್ತು. ಹೀಗೆ ಸ್ಪೆಷಲ್ ಸ್ಕ್ವಾಡ್ನೊಂದಿಗೆ ಕಣಕ್ಕಿಳಿದ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಚೂಸ್ ಮಾಡಿಕೊಂಡಿದ್ದು ಸ್ಟಾರ್ಟ್ ಕೂಡ ಚೆನ್ನಾಗೇ ಇತ್ತು.
ಮೊನ್ನೆ 204 ರನ್ಸ್.. ಇಂದು 40 ರನ್ಸ್ ಗೆ ವೈಭವ್ ಔಟ್!
ಯುಎಇ ವಿರುದ್ಧ 28 ಬಾಲಲ್ಲಿ ಶತಕ ಸಿಡಿಸಿ 53 ಬಾಲಲ್ಲಿ 204 ರನ್ಸ್ ಬಾರಿಸಿ ಜಗತ್ತನ್ನೇ ಬೆರಗುಗೊಳಿಸಿದ್ದ ವೈಭವ್ ಸೂರ್ಯವಂಶಿ ಶ್ರೀಲಂಕಾ ವಿರುದ್ಧವೂ ಅಂಥದ್ದೇ ಪ್ರದರ್ಶನ ಬರುತ್ತೆ ಅಂತಾ ಎಲ್ರೂ ಕಾಯ್ತಾ ಇದ್ರು. ಆದ್ರೆ ಈ ಪಂದ್ಯದಲ್ಲಿ ಪ್ರತೀ ಬಾಲ್ನಲ್ಲೂ ಬಿಗ್ ಹಿಟ್ ಟ್ರೈ ಮಾಡದೆ ವೇಯ್ಟಿಂಗ್ ಗೇಮ್ ಆಡಿದ್ರು. ಹೀಗಿದ್ರೂ 27 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ಗಳೊಂದಿಗೆ 40 ರನ್ಸ್ ಕಲೆ ಹಾಕಿ ವಿಕೆಟ್ ಒಪ್ಪಿಸಿದ್ರು. ಹಾಗಂತ ಪ್ರತೀ ಪಂದ್ಯದಲ್ಲೂ ಹೊಡಿಬಡಿ ಅಂತಾ ಆಡೋದು ಫೂಲೀಶ್ನೆಸ್ ಆಗುತ್ತೆ. ಸಿಚುಯೇಷನ್ಗೆ ತಕ್ಕಂತೆ ಬ್ಯಾಟಿಂಗ್ ಮಾಡ್ಬೇಕಾಗುತ್ತೆ. ಸೋ ಇದನ್ನೇ ವೈಭವ್ ಮಾಡಿದ್ದು. ಬಟ್ ಈ ಮ್ಯಾಚಲ್ಲಿ ವೈಭವ್ ಬೇಗ ಔಟ್ ಆದ್ರೂ ಅಭಿಷೇಕ್ ಶರ್ಮಾ ಕಡೆಯಿಂದ ಒಂದೊಳ್ಳೆ ಸಪೋರ್ಟ್ ಸಿಕ್ತು.
78 ರನ್ಸ್ ಗಳಿಸಿ ಔಟ್ ಆದ ಅಭಿಷೇಕ್ ಶರ್ಮಾ!
ಇನ್ನು ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕಡೆಯಿಂದಲೂ ಒಳ್ಳೆ ಪರ್ಫಾಮೆನ್ಸ್ ಬಂತು. 63 ಬಾಲಲ್ಲಿ 78 ರನ್ಸ್ ಕಲೆ ಹಾಕಿದ್ರು. ಇದ್ರಲ್ಲಿ 11 ಬೌಂಡರಿ ಹಾಗೇ 1 ಸಿಕ್ಸರ್ ಕೂಡ ಸೇರಿತ್ತು. ಅಷ್ಟಕ್ಕೂ ಭಾರತದ ಪರ ಆಡುವಾಗ ಅಭಿಷೇಕ್ ಮತ್ತು ವೈಭವ್ ಓಪನಿಂಗ್ ಕಾಂಬಿನೇಷನ್ ಹೇಗೆ ವರ್ಕ್ ಆಗ್ತಿದೆ ಅನ್ನೋದನ್ನ ಇಲ್ಲಿ ಗಮನಿಸಬೇಕಾಗುತ್ತೆ. ಭಾರತದ ಬ್ಯಾಟಿಂಗ್ ಆರ್ಡರ್ನಲ್ಲಿ ಹೇಗೆ ಡಿಫ್ರೆನ್ಸಸ್ ಮಾಡುತ್ತೆ ಅನ್ನೋದೂ ಗೊತ್ತಾಗುತ್ತೆ. ಲಂಕಾ ವಿರುದ್ಧದ ಮ್ಯಾಚಲ್ಲಿ ವೈಭವ್ ಮತ್ತು ಅಭಿ ನಡುವೆ ಮೊದಲ ವಿಕೆಟ್ಗೆ 80 ರನ್ಗಳ ಜೊತೆಯಾಟ ಬರುತ್ತೆ. ಌಂಡ್ 2ನೇ ವಿಕೆಟ್ಗೆ ಅಭಿಷೇಕ್ ಮತ್ತು ತಿಲಕ್ ನಡುವೆ 79 ರನ್ಗಳ ಜೊತೆಯಾಟ ಬಂತು. ಸೋ ಇವ್ರಿಬ್ರು ಕ್ರೀಸ್ನಲ್ಲಿ ಇರೋವಷ್ಟು ಹೊತ್ತೂ ರನ್ಸ್ ವೇಗ ಜಾಸ್ತಿ ಇರುತ್ತೆ. ಭಾರತ ಸೇಫ್ ಝೋನ್ನಲ್ಲಿ ಇರುತ್ತೆ. ನೆಕ್ಸ್ಟ್ ಬರುವ ಬ್ಯಾಟರ್ಗಳಿಗೂ ಅಷ್ಟೇನು ಒತ್ತಡ ಇರಲ್ಲ.

ನೋಡಿರಿ

