IND Vs PAK.. ಮತ್ತೆ 2 ಮ್ಯಾಚ್? – ಸೂಪರ್ 4ನಲ್ಲೂ ಶೇಕ್ ಹ್ಯಾಂಡ್ ಇಲ್ವಾ?
ಪಾಕ್ ಗೆ ಮತ್ತೆ ಅವಮಾನ ಪಕ್ಕಾ!

IND Vs PAK.. ಮತ್ತೆ 2 ಮ್ಯಾಚ್? – ಸೂಪರ್ 4ನಲ್ಲೂ ಶೇಕ್ ಹ್ಯಾಂಡ್ ಇಲ್ವಾ?ಪಾಕ್ ಗೆ ಮತ್ತೆ ಅವಮಾನ ಪಕ್ಕಾ!

ಏಷ್ಯಾಕಪ್ ಟೂರ್ನಿ ಸದ್ಯ ರೋಚಕ ಘಟ್ಟ ತಲುಪಿದೆ. ಲೀಗ್ ಹಂತದ ಪಂದ್ಯಗಳು ಮುಗಿತಾ ಬಂದ್ರೂ ಸಹ ಈವರೆಗೂ ಭಾರತವಷ್ಟೇ ಸೂಪರ್ 4ಗೆ ಕಾಲಿಟ್ಟಿದೆ. ಒಮನ್ ಮತ್ತು ಹಾಂಗ್​ಕಾಂಗ್ ತಂಡಗಳು ಆಲ್ರೆಡಿ ಟೂರ್ನಿಯಿಂದ ಹೊರಬಿದ್ದಾಗಿದೆ. ಇನ್ನುಳಿದ ಮೂರು ಸ್ಥಾನಗಳಿಗಾಗಿ ಐದು ಟೀಮ್​ಗಳು ಪೈಪೋಟಿಗಿಳಿದಿವೆ. ಈ ಪೈಕಿ ಮೂರು ತಂಡಗಳಿಗೆ ಸೂಪರ್ 4 ಪಕ್ಕಾ ಆಗಲಿದೆ.

ಯುಎಇ ವರ್ಸಸ್ ಪಾಕ್.. ಗೆದ್ದವ್ರಿಗೆ ಸೂಪರ್ 4 ಫಿಕ್ಸ್!

ಏಷ್ಯಾಕಪ್​ನ 10ನೇ ಪಂದ್ಯದಲ್ಲಿ ಅಂದ್ರೆ ಬುಧವಾರ ಪಾಕಿಸ್ತಾನ ಮತ್ತು ಯುಎಇ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಉಭಯ ತಂಡಗಳಿಗೂ ಕೂಡ ಇದು ಲೀಗ್ ಹಂತದ ಕೊನೇ ಪಂದ್ಯ. ಗ್ರೂಪ್ ಎನಲ್ಲಿರುವ ಭಾರತ ಎರಡಕ್ಕೆ ಎರಡೂ ಮ್ಯಾಚ್ ಗೆದ್ದಿರೋದ್ರಿಂದ ಆಲ್ರೆಡಿ ಸೂಪರ್ 4ಗೆ ಕಾಲಿಟ್ಟಿದೆ. ಇದೇ ಗುಂಪಿನಲ್ಲಿರೋ ಪಾಕಿಸ್ತಾನ ಟೂರ್ನಿಯಲ್ಲಿ ಒಂದು ಪಂದ್ಯ ಗೆದ್ದು ಒಂದು ಪಂದ್ಯ ಸೋತಿದೆ. ಪಾಯಿಂಟ್ಸ್ ಟೇಬಲ್​ನಲ್ಲಿ ಸೆಕೆಂಡ್ ಪ್ಲೇಸ್​ನಲ್ಲಿದೆ. ಇನ್ನು ಯುಎಇ ಕೂಡ ಒಂದು ಪಂದ್ಯ ಗೆದ್ದು ಒಂದು ಪಂದ್ಯ ಸೋತು ಮೂರನೇ ಸ್ಥಾನದಲ್ಲಿದೆ. ಅತ್ತ ಒಮನ್ ತಂಡ ಎರಡೂ ಮ್ಯಾಚ್ ಸೋತು ಕೊನೇ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಮ್ಯಾಚಲ್ಲಿ ಯುಎಇ ಗೆದ್ರೆ ಪಾಕ್ ಜರ್ನಿ ಎಂಡ್ ಆಗುತ್ತೆ. ಪಾಕ್ ಗೆದ್ರೆ ಸೂಪರ್ 4ಗೆ ಕಾಲಿಡುತ್ತೆ. ಹಾಗೇನಾದ್ರೂ ಪಾಕಿಸ್ತಾನ ಸೂಪರ್ 4 ಹಂತಕ್ಕೆ ಕಾಲಿಟ್ರೆ ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೆ 2 ಪಂದ್ಯಗಳು ನಡೆಯೋ ಚಾನ್ಸನ್ ಇದೆ.

ಏಷ್ಯಾಕಪ್ ನಲ್ಲಿ ಭಾರತ-ಪಾಕ್ ನಡುವೆ ಮತ್ತೆ ಪೈಪೋಟಿ?

ಸೆಪ್ಟೆಂಬರ್ 19ರಂದು ಭಾರತ ವರ್ಸಸ್ ಒಮನ್ ತಂಡಗಳ ನಡುವಿನ ಪಂದ್ಯದ ಮೂಲಕ ಏಷ್ಯಾಕಪ್​ ಟೂರ್ನಿಯ ಲೀಗ್ ಹಂತದ ಪಂದ್ಯಗಳಿಗೆ ತೆರೆ ಬೀಳಲಿದೆ. ಆ ಬಳಿಕ ಸೆಪ್ಟೆಂಬರ್ 20ರಿಂದ ಸೂಪರ್ 4 ಹಂತದ ಪಂದ್ಯಗಳು ಶುರುವಾಗಲಿದೆ. ಇಂದಿನ ಪಂದ್ಯದಲ್ಲಿ ಯುಎಇ ತಂಡವನ್ನ ಸೋಲಿಸಿದ್ರೆ 2 ಅಂಕಗಳನ್ನ ಪಡೆಯೋ ಮೂಲಕ ಪಾಕಿಸ್ತಾನ ಪಾಯಿಂಟ್ಸ್ ಟೇಬಲ್​ನಲ್ಲಿ 2ನೇ ಸ್ಥಾನಕ್ಕೇರಲಿದೆ. ಅಥವಾ ಯುಎಇ ವಿರುದ್ಧ ಪಂದ್ಯ ನಡೆಯದೇ ಹೋದ್ರೂ ಕೂಡ ತಲಾ ಒಂದೊಂದು ಅಂಕ ನೀಡ್ಲಾಗುತ್ತೆ. ಪಾಕಿಸ್ತಾನದ ನೆಟ್ ರನ್​ರೇಟ್ ಜಾಸ್ತಿ ಇರೋದ್ರಿಂದ ಅವ್ರೇ ಸೆಲೆಕ್ಟ್ ಆಗ್ತಾರೆ. ಈ ಮೂಲಕ ಎ ಗುಂಪಿನಲ್ಲಿ ಭಾರತದ ಜೊತೆ ಸೂಪರ್ 4ಗೆ ಕಾಲಿಡುತ್ತೆ. ಈ ವೇಳೆ ಸೆಪ್ಟೆಂಬರ್ 21ರಂದು ಮತ್ತೆ ಭಾರತ ವರ್ಸಸ್ ಪಾಕ್ ನಡುವೆ ಮತ್ತೊಂದು ಕದನ ನಡೆಯಲಿದೆ.

ಸೆ.21ಕ್ಕೆ ಮತ್ತೆ ಮುಖಾಮುಖಿ?

9 ಪಂದ್ಯಗಳು ನಡೆದಿದ್ದು 8 ತಂಡಗಳ ಪೈಕಿ ಎ ಗುಂಪಿನಲ್ಲಿ ಭಾರತ ಸೆಲೆಕ್ಟ್

ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಪೈಪೋಟಿ

ಸೆಪ್ಟೆಂಬರ್ 20 ರಂದು ದುಬೈ ಕ್ರೀಡಾಂಗಣದಲ್ಲಿ ಮೊದಲ ಸೂಪರ್ 4 ಹಂತ

ಬಿ ಗ್ರೂಪ್ ​ನಲ್ಲಿ ಟಾಪ್ 2ನಲ್ಲಿರೋ ತಂಡಗಳು ಪೈಪೋಟಿ ನಡೆಸಲಿವೆ

ಸೆಪ್ಟೆಂಬರ್ 21ಕ್ಕೆ ಎ ಗುಂಪಿನಲ್ಲಿರೋ ಅಗ್ರ ಎರಡು ತಂಡಗಳು ಕಣಕ್ಕೆ

ನಂಬರ್ 1 ಪ್ಲೇಸ್ ನಲ್ಲಿ ಭಾರತ, ಪಾಕಿಸ್ತಾನ ಎರಡನೇ ಸ್ಥಾನ ಪಡೆದ್ರೆ

ನಾಲ್ಕು ತಂಡಗಳ ನಡುವೆ ತಲಾ ಮೂರ್ಮೂರು ಪಂದ್ಯಗಳು ನಡೆಯಲಿದೆ

ಸೂಪರ್ 4ನಲ್ಲಿ ಭಾರತ ಮತ್ತು ಪಾಕಿಸ್ತಾನ ಅಗ್ರ 2 ಸ್ಥಾನಗಳಲ್ಲಿ ಅವಕಾಶ

ಸೆಪ್ಟೆಂಬರ್ 28ಕ್ಕೆ ಶೆಡ್ಯೂಲ್ ಆಗಿರುವ ಫೈನಲ್ ನಲ್ಲಿ ಮತ್ತೆ ಉಭಯ ತಂಡಗಳು

ಭಾರತ ಮತ್ತು ಪಾಕಿಸ್ತಾನ ತಂಡಗಳಿಗೆ ಇನ್ನೂ ಎರಡು ಸಲ ಮುಖಾಮುಖಿ

ಸೂಪರ್ 4 ಹಂತದ ಪಂದ್ಯಗಳಲ್ಲೂ ಕೈ ಕುಲುಕಲ್ವಾ ಭಾರತ?

ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೆ ಎದುರು ಬದುರಾಗೋ ಅವಕಾಶ ನಿರ್ಮಾಣವಾದ್ರೆ ಎರಡು ಟೀಂ ಪ್ಲೇಯರ್ ಗಳ ಬಿಹೇವಿಯರ್ ಹೇಗಿರುತ್ತೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಯಾಕಂದ್ರೆ ಲೀಗ್ ಹಂತದ ಪಂದ್ಯದಲ್ಲೇ ಶೇಕ್ ಹ್ಯಾಂಡ್ ವಿವಾದ ಕ್ರಿಕೆಟ್ ಲೋಕದಲ್ಲೇ ಕಿಚ್ಚು ಹಚ್ಚಿದೆ. ಪಾಕ್​ಗೆ ತೀವ್ರ ಮುಖಭಂಗವಾಗಿದೆ. ಹೀಗಿರುವಾಗ ಸೂಪರ್ 4 ಮತ್ತು ಫೈನಲ್​ನಲ್ಲಿ ಎದುರು ಬದುರಾದಾಗ್ಲೂ ಭಾರತದ ಆಟಗಾರರು ಪಾಕಿಸ್ತಾನ ಪ್ಲೇಯರ್​ಗಳಿಗೆ ಹ್ಯಾಂಡ್ ಶೇಕ್ ನೀಡದೆ ಶೇಪ್ ಔಟ್ ಮಾಡೋದು ಪಕ್ಕಾ ಇದೆ.

Shantha Kumari