ಗೌತಮ್ ಗಂಭೀರ ಬ್ಲಂಡರ್ – ಮ್ಯಾಚ್ ಗೆದ್ದ ಭಾರತ ಸ್ಲಾಟ್ ನಲ್ಲಿ ಫೇಲ್          

ಗೌತಮ್ ಗಂಭೀರ ಬ್ಲಂಡರ್ – ಮ್ಯಾಚ್ ಗೆದ್ದ ಭಾರತ ಸ್ಲಾಟ್ ನಲ್ಲಿ ಫೇಲ್          

ಏಷ್ಯಾಕಪ್​ನ ಸೂಪರ್ 4 ಹಂತದ ಎರಡನೇ ಪಂದ್ಯದಲ್ಲೂ ಭಾರತ ಗೆದ್ದು ಬೀಗಿದೆ. ಬಾಂಗ್ಲಾದೇಶವನ್ನ ಬಗ್ಗು ಬಡಿದು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಫೈನಲ್​ಗೆ ಲಗ್ಗೆ ಇಟ್ಟಿದೆ. ಅಭಿಷೇಕ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ, ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಸ್ಪಿನ್ ದಾಳಿಗೆ ಬಾಂಗ್ಲಾ ಪಡೆ ಧೂಳೀಪಟವಾಗಿದೆ. ಆದ್ರಿಲ್ಲಿ ಭಾರತ ಮ್ಯಾಚ್ ಗೆದ್ರೂ ಕೂಡ ಸ್ಲಾಟ್ ಚೇಂಜ್ ಸ್ಟ್ರಾಟರ್ಜಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಬ್ಯಾಟಿಂಗ್ ಆರ್ಡರ್​ನಲ್ಲಿ ಕೋಚ್ ಗೌತಮ್ ಗಂಭೀರ್ ಮಾಡ್ತಿರೋ ಪ್ರಯೋಗಕ್ಕೆ ಮಾಜಿ ಕ್ರಿಕೆಟರ್ಸ್ ರೊಚ್ಚಿಗೆದ್ದಿದ್ದಾರೆ.

ಇದನ್ನೂ ಓದಿ : ಪಾಕಿಸ್ತಾನಕ್ಕೆ ಸೂರ್ಯ ಗ್ರಹಣ – ಫೈನಲ್ ನಲ್ಲಿ ಮತ್ತೆ IND Vs PAK?

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಏಷ್ಯಾಕಪ್​ನ ಸೂಪರ್ ಫೋರ್ ಹಂತದ ಐದನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾ ತಂಡಗಳು ಮುಖಾಮುಖಿಯಾಗಿದ್ವು. ಪಂದ್ಯದ ಆರಂಭಕ್ಕೂ ಮೊದ್ಲೇ ಈ ಮ್ಯಾಚ್ ಗೆಲ್ಲೋದು ಭಾರತವೇ ಅನ್ನೋದು ಎಲ್ರಿಗೂ ಗೊತ್ತಿತ್ತು. ಅದ್ರಂತೆ ಮ್ಯಾಚ್ ಕೂಡ ವಿನ್ ಆದ್ರು. ಏಷ್ಯಾಕಪ್ ಫೈನಲ್​ಗೂ ಗ್ರ್ಯಾಂಡ್ ಎಂಟ್ರಿ ಕೊಟ್ರು. ಅದ್ರಲ್ಲೂ ಈ ಪಂದ್ಯದಲ್ಲಿ ಮತ್ತೊಮ್ಮೆ ಶೈನ್ ಆಗಿದ್ದು ಟೀಂ ಇಂಡಿಯಾದ ರೈಸಿಂಗ್ ಸ್ಟಾರ್ ಅಭಿಷೇಕ್ ಶರ್ಮಾ.

ಅಭಿಷೇಕ್ ಬ್ಯಾಟಿಂಗ್ ಖದರ್ ಗೆ ಬಾಂಗ್ಲಾ ಉಡೀಸ್!

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತದ ಪರ ಌಸ್ ಯೂಶುಯಲ್ ಈ ಮ್ಯಾಚಲ್ಲೂ ಅಭಿಷೇಕ್ ಶರ್ಮಾ ಬ್ಯಾಟಿಂಗ್ ಪವರ್​ ನೆಕ್ಸ್​ಟ್ ಲೆವೆಲ್​ನಲ್ಲಿತ್ತು. ಸಿಕ್ಸ್, ಫೋರ್​ಗಳಲ್ಲೇ ಡೀಲ್ ಮಾಡ್ತಾ ಬಾಂಗ್ಲಾ ಬೌಲರ್​ಗಳನ್ನ ಬೆಂಡೆತ್ತಿತ್ತಿದ್ರು. 200+ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸ್ತಿದ್ರೆ ಟೀಂ ಇಂಡಿಯಾ ಫ್ಯಾನ್ಸ್​ಗಂತೂ ಹಬ್ಬವೋ ಹಬ್ಬ. 37 ಎಸೆತಗಳಳಲ್ಲೇ 5 ಸಿಕ್ಸರ್, 6 ಬೌಂಡರಿಗಳಿಂದ 75 ರನ್ ಪೇರಿಸಿದರು. ಇನ್ನೇನು ಶತಕದತ್ತ ಹೆಜ್ಜೆ ಹಾಕ್ತಿರೋ ಹೊತ್ತಲ್ಲೇ ರನ್​ಔಟ್ ಆಗಿದ್ದು ಕೋಟ್ಯಂತರ ಅಭಿಮಾನಿಗಳ ಹಾರ್ಟ್ ಬ್ರೇಕ್ ಆಗುವಂತೆ ಮಾಡಿತ್ತು. ಬಹುಶಃ ಕ್ಯಾಚ್ ಔಟೋ ಅಥವಾ ಬೌಲ್ಡೋ ಆಗಿದ್ರೂ ಇಷ್ಟೊಂದು ಹರ್ಟ್ ಆಗ್ತಿರಲಿಲ್ಲ. ರನ್​ ಔಟ್ ಆಗಿದ್ದು ತುಂಬಾನೇ ಬೇಜಾರ್ ಆಗಿಸಿತ್ತು. ಇನ್ನು ಗಿಲ್ 29 ರನ್ ಗಳಿಸಿದ್ರೆ ಪಾಂಡ್ಯ 38 ರನ್ ಸಿಡಿಸಿದ್ರು. ಉಳಿದವರ್ಯಾರು ನಿರೀಕ್ಷಿತ ಪ್ರದರ್ಶನ ನೀಡ್ಲಿಲ್ಲ. ಸೋ ಅಂತಿಮವಾಗಿ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು.

ಟಾರ್ಗೆಟ್ ಬೆನ್ನತ್ತಿದ್ದ ಬಾಂಗ್ಲಾ ಆಟಗಾರರ ಪೆವಿಲಿಯನ್ ಪರೇಡ್!

ಭಾರತ ನೀಡಿದ 169 ರನ್ ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶದ ಪರ ಆರಂಭಿಕ ಆಟಗಾರ ಸೈಫ್ ಹುಸೇನ್ ಅದ್ಭುತ ಪ್ರದರ್ಶನ ನೀಡಿದ್ರು. 51 ಎಸೆಗಳಲ್ಲಿ 69 ರನ್ ಕಲೆ ಹಾಕಿದ್ರು. ಹಾಗೇ ಪರ್ವೇಜ್ ಹುಸೇನ್ 21 ರನ್ ಗಳಿಸಿದ್ರು. ಬಟ್ ಉಳಿದ ಯಾವ ಆಟಗಾರನಿಂದಲೂ ಒಂದಂಕಿ ಮೊತ್ತವನ್ನ ದಾಟೋಕೆ ಸಾಧ್ಯವಾಗ್ತಿಲ್ಲ. ಸೋ ಅಂತಿಮವಾಗಿ 19.3 ಓವರ್​ಗಳಲ್ಲಿ 127 ರನ್ ಗಳಿಸಿ ಆಲೌಟ್ ಆದ್ರು. ಈ ಮೂಲಕ ಭಾರತ 41 ರನ್​ಗಳ ಅಂತರದಿಂದ ಪಂದ್ಯವನ್ನ ಗೆದ್ದುಕೊಳ್ತು. ಆದ್ರೆ ಇದೇ ಪಂದ್ಯದಲ್ಲಿ ಭಾರತದ ಕಳಪೆ ಫೀಲ್ಡಿಂಗ್​ ಜಗಜ್ಜಾಹೀರಾಗಿದೆ.

ಬಾಂಗ್ಲಾ ವಿರುದ್ಧ 5 ಕ್ಯಾಚ್ ಡ್ರಾಪ್.. ಸೈಫ್ ಹಸನ್ ಗೆ 4 ಸಲ ಜೀವದಾನ!

ಒಂದು ಮ್ಯಾಚ್ ಗೆಲ್ಲೋಕೆ ಫೀಲ್ಡಿಂಗ್ ಎಷ್ಟು ಇಂಪಾರ್ಟೆಂಟ್ ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. 2024ರ ಟಿ-20ವಿಶ್ವಕಪ್​ ಫೈನಲ್​ನಲ್ಲಿ ಆವತ್ತು ಸೂರ್ಯಕುಮಾರ್ ಹಿಡಿದಿದ್ದ ಕ್ಯಾಚೇ ಭಾರತವನ್ನ ಚಾಂಪಿಯನ್ ಪಟ್ಟಕ್ಕೇರಿಸಿತ್ತು. ಬಟ್ ಇತ್ತೀಚೆಗೆ ಭಾರತ ತಂಡ ಫೀಲ್ಡಿಂಗ್​ನಲ್ಲಿ ಸಿಕ್ಕಾಪಟ್ಟೆ ಲೇಜಿಯಾಗಿದೆ. ಅದ್ರಲ್ಲೂ ಬಾಂಗ್ಲಾ ವಿರುದ್ಧ 5 ಕ್ಯಾಚ್ ಬಿಟ್ಟಿದ್ದಾರೆ. ಬಾಂಗ್ಲಾದೇಶದ ಆರಂಭಿಕ ಆಟಗಾರ ಸೈಫ್ ಹಸನ್ ಒಬ್ಬರೇ ನಾಲ್ಕು ಬಾರಿ ಜೀವದಾನ ಪಡೆದಿದ್ದಾರೆ. ಇನ್ನು ಏಷ್ಯಾಕಪ್​ನಲ್ಲಿ ಅತೀ ಹೆಚ್ಚು ಕ್ಯಾಚ್ ಬಿಟ್ಟಿರೋ ಟೀಮ್​ಗಳಲ್ಲಿ ಭಾರತ ನಂಬರ್ 1 ಪ್ಲೇಸ್​ನಲ್ಲಿದೆ. ಐದು ಪಂದ್ಯಗಳಿಂದ 12 ಕ್ಯಾಚ್​ಗಳನ್ನ ಕೈಚೆಲ್ಲಿದ್ದಾರೆ. ನಮ್ಮ ಕನ್ನಡ ಸ್ಪೋರ್ಟ್ಸ್ ಕಮೆಂಟೇಟರ್ ಜಾನಿಯವ್ರು ಯಾವಾಗ್ಲು ಒಂದು ಮಾತ್ ಹೇಳ್ತಾರೆ. ಕ್ಯಾಚ್ ಬಿಟ್ರೋ ಮ್ಯಾಚ್ ಬಿಟ್ರೋ ಅಂತಾ. ಅಂದ್ರೆ ಒಂದು ಕ್ಯಾಚ್ ಇಡೀ ಮ್ಯಾಚ್​ನ ಟರ್ನಿಂಗ್ ಪಾಯಿಂಟ್ ಆಗ್ಬೋದು. ಬಟ್ ಕ್ರಿಕೆಟ್ ಜಗತ್ತಿನಲ್ಲಿ ಫೀಲ್ಡಿಂಗ್​ನಲ್ಲಿ ಒನ್ ಆಫ್ ದಿ ಬೆಸ್ಟ್ ಟೀಂ ಭಾರತ. ಕೊಹ್ಲಿ, ಜಡ್ಡು ಇವ್ರೆಲ್ಲಾ ಬೆಸ್ಟ್ ಫೀಲ್ಡರ್ಸ್. ಹಾಗೇ ಸೂರ್ಯ ಒನ್ ಆಫ್ ದಿ ಬೆಸ್ಟ್ ಫೀಲ್ಡರ್. ತಿಲಕ್ ಕೂಡ. ಬಟ್ ಇನ್ಮುಂದಿನ ಮ್ಯಾಚ್​ಗಳಲ್ಲಿ ಕ್ಯಾಚ್ ವಿಚಾರದಲ್ಲಿ ಸೀರಿಯಸ್ ಆಗ್ಬೇಕಾಗುತ್ತೆ. ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಈ ಬಗ್ಗೆ ಇನ್ನಷ್ಟು ವರ್ಕೌಟ್ ಮಾಡ್ಬೇಕು. ಯಾಕಂದ್ರೆ ಫೈನಲ್​ನಲ್ಲಿ ಭಾರತಕ್ಕೆ ಮತ್ತೆ ಪಾಕ್ ಎದುರಾಳಿ ಆಗ್ಬೋದು. ಸೋ ಅಲ್ಲೂ ಕೂಡ ಜೀವದಾನ ಕೊಟ್ಕೊಂಡು ಕೂತ್ರೆ ಮ್ಯಾಚ್ ಕಳ್ಕೊಳ್ಬೇಕಾಗುತ್ತೆ. ನಿನ್ನೆ ಮ್ಯಾಚಲ್ಲಿ ಕುಲ್ದೀಪ್, ಬುಮ್ರಾ, ವರುಣ್ ಎಲ್ರೂ ಕೂಡ ಬೌಲಿಂಗ್​ ಬೊಂಬಾಟ್ ಆಗಿತ್ತು. ಸೋ ಮ್ಯಾಚ್ ಗೆದ್ವಿ. ಬಟ್ ಇದು ಪ್ರತೀ ಮ್ಯಾಚಲ್ಲೂ ವರ್ಕೌಟ್ ಆಗಲ್ಲ. ಒಂದೊಂದು ಬಾಲ್ ಒಂದೊಂದು ರನ್ಸ್​ ಕೂಡ ಇಂಪಾರ್ಟೆಂಟ್ ಆಗುತ್ತೆ. ಸೋ ನೆಕ್ಸ್​ಟ್ ಫೀಲ್ಡಿಂಗ್ ಬಗ್ಗೆ ಸ್ವಲ್ಪ ವರ್ಕೌಟ್ ಮಾಡ್ಬೇಕು. ಇನ್ನು ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಸ್ಲಾಟ್ ವಿಚಾರ ಕೂಡ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.  ಇಲ್ಲಿ ಭಾರತ ಗೆದ್ದಿದ್ದಕ್ಕಿಂತ ಪದೇಪದೆ ಸ್ಲಾಟ್ ಚೇಂಜ್ ಪ್ರಯೋಗ ಯಾಕೆ ಅನ್ನೋದೇ ಪ್ರಶ್ನೆಯಾಗಿದೆ.

ದುಬೆ 3ನೇ ಸ್ಲಾಟ್.. ಸಂಜುಗೆ ಬ್ಯಾಟಿಂಗ್ ಚಾನ್ಸೇ ಇಲ್ಲ!

ಬಾಂಗ್ಲಾ ವಿರುದ್ಧದ ಮ್ಯಾಚಲ್ಲಿ ಅಭಿಷೇಕ್ ಮತ್ತು ಗಿಲ್ ಇಬ್ಬರ ಪಾರ್ಟ್ನರ್​ಶಿಪ್ ಮತ್ತೊಮ್ಮೆ ವರ್ಕೌಟ್ ಆಯ್ತು. ಪವರ್ ಪ್ಲೇನಲ್ಲೇ ಬೊಂಬಾಟ್ ಪ್ರದರ್ಶನ ನೀಡ್ತಿದ್ರು. ಬಟ್ 6.2 ಓವರ್​ಗಳಲ್ಲಿ 77 ರನ್ ಗಳಿಸಿದ್ದಾಗಲೇ ಗಿಲ್ 29 ರನ್​ಗಳಿಗೆ ಔಟ್ ಆದ್ರು. ಸೋ 3ನೇ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಬರ್ತಾರೆ ಅಂದ್ರೆ ಬಂದದ್ದು ಆಲ್​ರೌಂಡರ್ ಶಿವಂ ದುಬೆ. ಬಂದಷ್ಟೇ ಸ್ಪೀಡಾಗಿ ಪೆವಿಲಿಯನ್ ಸೇರ್ಕೊಂಡ್ರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಚ್ಯುಯಿಂಗ್​ಗಮ್ ತಿನ್ಕೊಂಡು ಸ್ಟೈಲಾಗಿ ಬಂದ ಸೂರ್ಯ 5 ರನ್ ಗಳಿಸೋಕೆ 11 ಬಾಲ್ ತಿಂದ್ರು. ಇನ್ನು ಐದನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ. ಅರೆ ತಿಲಕ್ ವರ್ಮಾ ಇದ್ರೂ ಸಂಜು ಇದ್ದಾರೆ. ಇದೇನಪ್ಪಾ ಪಾಂಡ್ಯ ಅಂತಾ ನೋಡಿದ್ರೆ 7ನೇ ಸ್ಲಾಟ್​ನಲ್ಲಿ ಅಕ್ಷರ್ ಪಟೇಲ್ ಬಂದ್ರು. ಸಂಜು ಬರ್ಲೇ ಇಲ್ಲ. ಅಲ್ಲಿಗೆ ಓಪನರ್ಸ್ ಬಿಟ್ರೆ ಉಳಿದವ್ರೆಲ್ಲಾ ಯಾರೂ ತಮ್ಮ ಫಿಕ್ಸ್​ಡ್ ಸ್ಲಾಟ್​ನಲ್ಲಿ ಬ್ಯಾಟಿಂಗ್​ಗೆ ಬರ್ಲಿಲ್ಲ. ಸೋ ಇದೇ ಈಗ ಚರ್ಚೆಗೆ ಗ್ರಾಸವಾಗಿದೆ. ಗೌತಮ್ ಗಂಭೀರ್ ಮಾಡ್ತಿರೋ ಈ ಪ್ರಯೋಗ ಬ್ಯಾಟಿಂಗ್ ಆರ್ಡರ್ ಮೇಲೆ ಎಫೆಕ್ಟ್ ಆಗ್ತಿದೆ ರನ್ಸ್ ಬರ್ತಿಲ್ಲ ಅಂತಾ ಮಾಜಿ ಕ್ರಿಕೆಟಿಗರು ಗರಂ ಆಗಿದ್ದಾರೆ. ಈ ಬಗ್ಗೆ ಮಾತ್ನಾಡಿರೋ ಸಂಜಯ್ ಮಂಜ್ರೇಕರ್ ಗಂಭೀರ್ ಪ್ರಯೋಗವನ್ನ ಟೀಕಿಸಿದ್ದಾರೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ದುಬೆಗೆ ಬಡ್ತಿ ಏಕೆ ಸಿಕ್ಕಿತೋ ಗೊತ್ತಿಲ್ಲ. ಸ್ಟ್ರೈಕ್​ರೇಟ್ ಕೂಡ ಚೆನ್ನಾಗಿಲ್ಲ ಅಂತಾ ತರಾಟೆಗೆ ತೆಗೆದುಕೊಂಡ್ರು. ಹಾಗೇ ಬ್ಯಾಟಿಂಗ್ ಆರ್ಡರ್ ಎಕ್ಸ್​ಪೆರಿಮೆಂಟ್​ನ ಇದೊಂದು ಬಿಗ್ ಬ್ಲಂಡರ್ ಅಂತಾ ಸುನಿಲ್ ಗವಾಸ್ಕರ್ ಗರಂ ಆಗಿದ್ದಾರೆ. ಅಷ್ಟೇ ಅಲ್ಲದೆ ಫ್ಯಾನ್ಸ್ ಕೂಡ ಇಂಥಾ ಪ್ರಯೋಗ ಬೇಡದಿತ್ತು ಎಂದು ತಿರುಗಿ ಬಿದ್ದಿದ್ದಾರೆ. ಇನ್ನು ಬ್ಯಾಟಿಂಗ್ ಆರ್ಡರ್ ಬಗ್ಗೆ ಸ್ಪಷ್ಟನೆ ನೀಡಿರೋ ಕ್ಯಾಪ್ಟನ್ ಸೂರ್ಯಕುಮಾರ್ ನಮ್ಮ ನಿರ್ಧಾರ ತಪ್ಪಾಗಿದೆ ಎಂದಿದ್ದಾರೆ. ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ ವೇಳೆ ಉತ್ತರ ನೀಡಿದ್ದಾರೆ.

Shantha Kumari