ಕ್ರಿಕೆಟ್ ಮರೆತು ಉ*ಗ್ರರಾದ್ರಾ – ಉಡೀಸ್ ಆದ್ರೂ ಬಿಡದ ಉದ್ಧಟತನ
ರೌಫ್ ಬುಡಕ್ಕೆ ಅರ್ಷದೀಪ್ ಬೆಂಕಿ

ಕ್ರಿಕೆಟ್ ಮರೆತು ಉ*ಗ್ರರಾದ್ರಾ – ಉಡೀಸ್ ಆದ್ರೂ ಬಿಡದ ಉದ್ಧಟತನರೌಫ್ ಬುಡಕ್ಕೆ ಅರ್ಷದೀಪ್ ಬೆಂಕಿ

ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಟೀಂ ಆಟಕ್ಕಿಂತ ಹುಚ್ಚಾಟಗಳಿಂದಲೇ ಸುದ್ದಿಯಾಗ್ತಿದೆ. ಅದ್ರಲ್ಲೂ ಭಾರತದ ವಿರುದ್ಧ ಮೈದಾನದಲ್ಲಿ ಗೆಲ್ಲೋಕೆ ಆಗ್ದಿದ್ರೂ ದೌಲತ್ತಿಗೇನ್ ಕಮ್ಮಿ ಇಲ್ಲ. ಮೊನ್ನೆ ಸೂಪರ್ 4 ಹಂತದ ಮ್ಯಾಚಲ್ಲಿ ಪಾಕ್ ಬೌಲರ್ ಹ್ಯಾರಿಸ್ ರೌಫ್ ಒಂದು ಸಂಹ್ನೆ ಮಾಡಿದ್ದ. ಭಾರತದ 6 ಫೈಟರ್ ಜೆಟ್​ಗಳನ್ನ ಫಿನಿಶ್ ಮಾಡಿದ್ದೀವಿ ಅನ್ನೋದು ಅವ್ನ ಸಿಂಬಲ್ ಅರ್ಥ. ಬಟ್ ಈಗ ಇದೇ ಅವ್ರ ನ್ಯಾಷನಲ್ ಌಂಥಮ್ ಅನ್ನೋ ರೇಂಜ್​ಗೆ ಅಲ್ಲಿನ ಸೋ ಕಾಲ್ಡ್ ಪ್ಲೇಯರ್ಸ್ ಸೆಲೆಬ್ರೇಟ್ ಮಾಡ್ತಿದ್ದಾರೆ.

ಇದನ್ನೂ ಓದಿ : ಮಗನ ಜೊತೆ ಕಾಣಿಸಿಕೊಂಡ ವಿರುಷ್ಕಾ ಜೋಡಿ! – ಕೊಹ್ಲಿ ನಡೆಗೆ ಫ್ಯಾನ್ಸ್‌ ಮೆಚ್ಚುಗೆ!

ಪಾಕಿಸ್ತಾನಿ ಪ್ಲೇಯರ್​ಗಳು ಹೆಂಗೆ ಅಂದ್ರೆ ಆನ್ ಫೀಲ್ಡ್​ನಲ್ಲಿ ಮ್ಯಾಚ್ ಗೆಲ್ಲೋಕಾಗ್ದಿದ್ರೂ ಆಫ್ ದಿ ಫೀಲ್ಡ್​ನಲ್ಲಿ ಇವ್ರ ಗಾಂಚಾಲಿಗೇನ್ ಕಮ್ಮಿ ಇಲ್ಲ. ಮೊನ್ನೆ ಸೂಪರ್ 4 ಹಂತದ ಮ್ಯಾಚಲ್ಲಿ ಭಾರತದ ವಿರುದ್ಧ ಸೋಲೋದು ಕನ್ಫರ್ಮ್ ಆಗ್ತಿದ್ದಂತೆ ಹ್ಯಾರಿಸ್ ರೌಫ್ ಒಂದ್ ಟ್ರಿಕ್ಸ್ ಬಳಸಿದ್ದ. ಅಂದ್ರೆ ಹೆಂಗೂ ಸೋಲ್ತೀವಿ. ಫ್ಯಾನ್ಸ್ ಮತ್ತೆ ಮುಖಕ್ಕೆ ಮಂಗಳಾರತಿ ಮಾಡ್ತಾರೆ. ಸೋ ಹೆಂಗಾದ್ರು ಮಾಡಿ ಅವ್ರನ್ನೆಲ್ಲಾ ಡೈವರ್ಟ್ ಮಾಡ್ಬೇಕು ಅಂತಾ ಚೀಪ್ ಗಿಮಿಕ್ ಬಳ್ಸಿದ್ದ. ಅದುವೇ ಕೈಸಹ್ನೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ನಾವು ಭಾರತದ 6-0 ಫೈಟರ್​ ಜೆಟ್​ಗಳನ್ನ ಉಡೀಸ್ ಮಾಡಿಬಿಟ್ಟಿದ್ದೀವಿ ಅಂತಾ ಸಿಗ್ನಲ್ ಕೊಟ್ಟಿದ್ದ. ಇದೇ ಸಿಗ್ನಲ್​ನ ಇಟ್ಕೊಂಡು ಅಲ್ಲಿನ ಆಟಗಾರರು ಹೋದಲ್ಲಿ ಬಂದಲ್ಲೆಲ್ಲಾ ಅದುನ್ನೇ ಇಮಿಟೇಟ್ ಮಾಡ್ತಿದ್ದಾರೆ.

ಆವತ್ತಿನ ಮ್ಯಾಚಲ್ಲಿ ಒಂದ್ಕಡೆ ಕ್ರೀಸ್​ನಲ್ಲಿ ಅಭಿಷೇಕ್ ಮತ್ತೆ ಶುಭ್​ಮನ್ ಗಿಲ್ ಪಾಕ್ ಬೌಲರ್​ಗಳನ್ನ ಚಾರ್ಜ್ ಮಾಡ್ತಿದ್ರು. ಅತ್ತ ಗ್ಯಾಲರಿಯಲ್ಲಿ ಇಂಡಿಯನ್ಸ್ ಫ್ಯಾನ್ಸ್ ಜೈಕಾರ ಹಾಕ್ತಿದ್ರು. ಸೋ ಸೆಂಟ್ರಲ್ಲಿ ಸಿಗಾಕ್ಕೊಂಡಿದ್ದ ಹ್ಯಾರಿಸ್ ರೌಫ್ ಹೆಂಗಾರ ಮಾಡಿ ತನ್ನ ಪ್ರೆಸ್ಟ್ರೇಷನ್ ಕಮ್ಮಿ ಮಾಡ್ಕೊಬೇಕಿತ್ತು. ಹೀಗಾಗೇ ಇಂಥಾ ಚೀಪ್ ಐಡಿಯಾ ಮಾಡಿದ್ದ. ಈಗ ಇದೇ ಪಾಕ್​ನಲ್ಲಿ ಟ್ರೆಂಡ್ ಆಗೋಗಿದೆ. ಕಳೆದ ಸೋಮವಾರ ಕೊಲಂಬೊದಲ್ಲಿ SAFF U-17 ಚಾಂಪಿಯನ್‌ಶಿಪ್ ಹಣಾಹಣಿಯಲ್ಲಿ ಭಾರತ ಮತ್ತು ಪಾಕ್ ಪಂದ್ಯ ನಡೀತಿತ್ತು. ಈ ವೇಳೆ ತನ್ನ ಮೊದಲ ಗೋಲು ಗಳಿಸಿದ ಪಾಕಿಸ್ತಾನದ ಪರ ಮುಹಮ್ಮದ್ ಅಬ್ದುಲ್ಲಾ ಎಂಬಾತ ಓವರ್ ಎಕ್ಸೈಟ್ ಆಗಿದ್ದ. ಅದೆಷ್ಟರ ಮಟ್ಟಿಗೆ ಅಂದ್ರೆ ಹ್ಯಾರಿಸ್ ರೌಫ್ ರೀತಿಯಲ್ಲಿ ಪ್ಲೇನ್ ಕ್ರಾಶಿಂಗ್ ಮಿಮಿಕ್ ಮಾಡಿ ಸೆಲೆಬ್ರೇಷನ್ ಮಾಡಿದ್ದಾನೆ.

ಒಂದು ಗೋಲ್​ಗೇ ಹಿಂಗೆ ಆಡಿದ್ದ. ಬಟ್ ಆವತ್ತಿನ ಪಂದ್ಯದಲ್ಲಿ ಭಾರತ ಗೆದ್ದು ಬೀಗಿತ್ತು. 3-2 ಅಂತರದಲ್ಲಿ ಪಂದ್ಯವನ್ನ ತನ್ನದಾಗಿಸಿಕೊಂಡಿತ್ತು. ಹಾಗಂತ ಇದು ಇಷ್ಟಕ್ಕೇ ನಿಂತಿಲ್ಲ. ಪಾಕ್ ಕ್ರಿಕೆಟ್ ಆಟಗಾರ್ತಿಯರು ಕೂಡ ರೌಫ್​ನ ಈಗ ರೋಲ್ ಮಾಡೆಲ್ ಥರ ನೋಡ್ತಿದ್ದಾರೆ. ಮಹಿಳಾ ತಂಡದ ನಾಯಕಿ ಫಾತಿಮಾ ಸನಾ ರಫೇನ್ ಡೌನ್ ಮಾದರಿಯಲ್ಲಿ ಸಹ್ನೆ ಮಾಡಿದ್ದಾಳೆ. ದಕ್ಷಿಣಾ ಆಫ್ರಿಕಾ ವಿರುದ್ಧದ ಏಕದಿನ ಸರಣಿ ವೇಳೆ ಈ ರೀತಿ ಸಿಂಬಲ್ ತೋರಿಸಿದ್ದಾಳೆ.

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲೇ ಮತ್ತೊಬ್ಬ ಆಟಗಾರ್ತಿ ನಶ್ರಾ ಸುಂಧು ಕೂಡ ಇದೇ ರೀತಿಯಲ್ಲಿ ವರ್ತಿಸಿದ್ದಾಳೆ.  ಆವತ್ತಿನ ಮ್ಯಾಚಲ್ಲಿ 6 ವಿಕೆಟ್ ತೆಗೆದಿದ್ದ ನಶ್ರಾ ಸಂಧು ಏಕದಿನ 100 ವಿಕೆಟ್‌ಗಳನ್ನು ತಲುಪಿದ ಪಾಕಿಸ್ತಾನದ ಅತ್ಯಂತ ವೇಗದ ಮಹಿಳೆ ಅನ್ನೋ ದಾಖಲೆ ಬರೆದಿದ್ದಳು. ಇದನ್ನ ಸೆಲೆಬ್ರೇಟ್ ಮಾಡೋಕೆ ಒನ್ಸ್ ಅಗೇನ್ ಇದೇ ಟ್ರಿಕ್ಸ್ ಬಳಸಿದ್ದಾಳೆ.

ಇನ್ನು ಪಾಕಿಗಳು ಅದೆಂಥಾ ಕೀಳುಮಟ್ಟದ ಪ್ರಚಾರಕ್ಕೆ ಇಳಿದಿದ್ದಾರೆ ಅಂದ್ರೆ ಜಗತ್ತಿನ ನಂಬರ್ 1 ಕ್ರೀಡಾಪಟು ಕ್ರಿಶ್ಚಿಯಾನೋ ರೊನಾಲ್ಡೋರನ್ನೂ ಬಿಟ್ಟಿಲ್ಲ. ರೊನಾಲ್ಡೋ ಕೂಡ ಪಾಕಿಸ್ತಾನ ರಫೇಲ್ ಡೌನ್ ಮಾಡಿದ್ದನ್ನ ಮಿಮಿಕ್ ಮಾಡಿದ್ದಾರೆ ಅಂತಾ ಟ್ರೋಲ್ ಮಾಡ್ತಿದ್ದಾರೆ. ಬಟ್ ರಿಯಾಲಿಟಿ ಬೇರೆನೇ ಇದೆ. ರೊನಾಲ್ಡೋ ಪ್ಲೇನ್ ಕ್ರಾಶ್ ರೀತಿಯಲ್ಲೇ ಸೆಲೆಬ್ರೇಟ್ ಮಾಡಿದ್ದಾರೆ. ಆದ್ರೆ ಇದು ಪಾಕಿಗಳು ಹೇಳೋ ಥರ ಭಾರತವನ್ನ ಅಣಕ ಮಾಡಿರೋದಲ್ಲ. ಅಸಲಿಯತ್ತು ಏನಂದ್ರೆ ಕಳೆದ ಫೆಬ್ರವರಿಯಲ್ಲಿ ಎಎಫ್‌ಸಿ ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ  ಸೌದಿ ಕ್ಲಬ್ ಅಲ್-ನಾಸರ್ ಪರ ಆಡ್ತಿದ್ದ ರೊನಾಲ್ಡೋ ಯುಎಇಯ ಅಲ್ ವಾಸ್ಲ್ ವಿರುದ್ಧ 4-0 ಅಂತರದ ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿದ್ರು. ಅದೂ ಕೂಡ ತಮ್ಮ ಬರ್ತಡೇ ಟೈಮಲ್ಲೇ. ಆವತ್ತು ತಮ್ಮ ಎರಡನೇ ಗೋಲು ಬಳಿಕ ಹೊಸ ಸ್ಟೈಲಲ್ಲಿ ಸೆಲೆಬ್ರೇಟ್ ಮಾಡಿದ್ರು. ವಿಮಾನ ಟೇಕಾಫ್ ಆದ ಕೆಲವೇ ಹೊತ್ತಲ್ಲೇ ಕ್ರಾಶ್ ಆಯ್ತು ಅನ್ನೋ ಥರ ಸಂಭ್ರಮಿಸಿದ್ರು. ಈಗ ಇದೇ ವಿಡಿಯೋವನ್ನ ಇಟ್ಕೊಂಡು ಪಾಕಿಸ್ತಾನಿಗಳು ಅದನ್ನೇ ಟ್ರೋಲ್ ಮಾಡ್ತಿದ್ದಾರೆ.

ಹೋದಲ್ಲಿ ಬಂದಲ್ಲೆಲ್ಲಾ ಪಾಕಿಸ್ತಾನ್ ಪ್ಲೇಯರ್​​ಗಳು ಓವರ್ ರಿಯಾಕ್ಟ್ ಮಾಡ್ತಿದ್ದಾರೆ. ಆದ್ರೆ ಎಲ್ಲರ ಬಾಯಿ ಮುಚ್ಚಿಸುವಂತೆ ಟೀಂ ಇಂಡಿಯಾದ ಸ್ಟಾರ್ ಬೌಲರ್ ಅರ್ಶದೀಪ್ ರಿಯಾಕ್ಷನ್ ಕೊಟ್ಟಿದ್ದಾರೆ. ರಫೇಲ್ ಯುದ್ಧವಿಮಾನಗಳನ್ನ ಹೊಡೆದುರುಳಿಸಿದ್ವಿ ಅಂತಾ ರೌಫ್ ಬಿಲ್ಡಪ್ ತಗೊಂಡ್ರೆ ಅದೇ ಸ್ಟೈಲಲ್ಲೇ ರೌಫ್ ಬುಡಕ್ಕೆ ಬೆಂಕಿ ಇಟ್ಟಿದ್ದಾರೆ. ರಫೇಲ್ ಜೆಟ್​ಗಳು ಕ್ರಾಶ್ ಆಗ್ಲಿಲ್ಲ ನಿಮ್ಮ ಬುಡಕ್ಕೆ ಬೆಂಕಿ ಇಟ್ವಿ ಅನ್ನೋ ಸ್ಟೈಲಲ್ಲಿ ಕೌಂಟರ್ ಕೊಟ್ಟಿದ್ದಾರೆ. ಪಾಕಿಸ್ತಾನಿಯರ ಅಷ್ಟೂ ಗಿಮಿಕ್​ಗಳಿಗೆ ತಮ್ಮ ಎಡಗೈನಲ್ಲೇ ಮುಟ್ಟಿನೋಡಿಕೊಳ್ಳುವಂತೆ ಬಿಸಿ ಮುಟ್ಟಿಸಿದ್ದಾರೆ.

Shantha Kumari