ಬಿಸಿಸಿಐ EGOಗೆ ಶ್ರೇಯಸ್ ಬಲಿಪಶು – ODI, IPL ರನ್ ಮಳೆಗರೆದ್ರೂ ಮೋಸ
KKR ಕಿರಿಕ್ ಗೆ ಗಂಭೀರ್ ಜಿದ್ದು ಸಾಧಿಸಿದ್ರಾ?

ಬಿಸಿಸಿಐ EGOಗೆ ಶ್ರೇಯಸ್ ಬಲಿಪಶು – ODI, IPL ರನ್ ಮಳೆಗರೆದ್ರೂ ಮೋಸKKR ಕಿರಿಕ್ ಗೆ ಗಂಭೀರ್ ಜಿದ್ದು ಸಾಧಿಸಿದ್ರಾ?

ಸೆಪ್ಟೆಂಬರ್ 9ರಂದು ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಗೆ ಮಂಗಳವಾರವಷ್ಟೇ ಬಿಸಿಸಿಐ 15 ಸದಸ್ಯರ ಟೀಂ ಅನೌನ್ಸ್ ಮಾಡಿದೆ. ಉಳಿದಂತೆ ಐವರನ್ನ ರಿವರ್ಸ್ ಪ್ಲೇಯರ್ಸ್ ಲಿಸ್ಟ್​ನಲ್ಲಿ ಸೆಲೆಕ್ಟ್ ಮಾಡಿದೆ. ಸೋ ಟೋಟಲ್ಲಾಗಿ 20 ಆಟಗಾರರು ಏಷ್ಯಾಕಪ್ ಟೂರ್ನಿಗಾಗಿ ಯುಎಇ ಫ್ಲೈಟ್ ಏರ್ತಾರೆ. ಬಟ್ ಈ ಟೂರ್ನಿಯಲ್ಲಿ ಯಾವೊಬ್ಬ ಕನ್ನಡಿಗನೂ ಅವಕಾಶ ಪಡೆದಿಲ್ಲ. ಹಾಗೇ ಸಾಕಷ್ಟು ಸ್ಟಾರ್ ಪ್ಲೇಯರ್​ಗಳಿಗೂ ಅವಕಾಶ ಸಿಕ್ಕಿಲ್ಲ. ಈ ಪೈಕಿ ತುಂಬಾ ಚರ್ಚೆಯಲ್ಲಿರೋ ಹೆಸರು ಅಂದ್ರೆ ಅದು ಶ್ರೇಯಸ್ ಅಯ್ಯರ್.

ಇದನ್ನೂ ಓದಿ  : ಪ್ರಸಿದ್ಧ್ ಕೃಷ್ಣ ಆಟಕ್ಕುಂಟು ಲೆಕ್ಕಕ್ಕಿಲ್ಲ – ಏಷ್ಯಾಕಪ್ ನಲ್ಲಿ ಕನ್ನಡಿಗರಿಗೆ ಸಿಗಲಿಲ್ಲ ಚಾನ್ಸ್!

ಏಷ್ಯಾಕಪ್ ಟೂರ್ನಿಗೆ ಯಾರನ್ನ ಸೆಲೆಕ್ಟ್ ಮಾಡಿದ್ರೂ ಬಿಟ್ರೂ ಶ್ರೇಯಸ್ ಅಯ್ಯರ್ ಹೆಸರಂತೂ ಇದ್ದೇ ಇರುತ್ತೆ ಅನ್ನೋದು ತುಂಬಾ ಜನರ ನಂಬಿಕೆ ಆಗಿತ್ತು. ಬಟ್ ಇಲ್ಲಿ ಶ್ರೇಯಸ್ ಅಯ್ಯರ್ ಮತ್ತೊಮ್ಮೆ ಕಡೆಗಣನೆಗೆ ಒಳಗಾಗಿದ್ದಾರೆ. ಸ್ಟ್ಯಾಂಡ್‌ಬೈ ಆಟಗಾರರ ಪಟ್ಟಿಯಲ್ಲೂ ಅವ್ರ ಹೆಸರಿಲ್ಲ. ಸುದ್ದಿಗೋಷ್ಠಿ ವೇಳೆ ಶ್ರೇಯಸ್ ಅಯ್ಯರ್‌ ಆಯ್ಕೆ ಆಗದಿರುವ ಬಗ್ಗೆ ಮಾತನಾಡಿದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, “ಶ್ರೇಯಸ್ ಅಯ್ಯರ್ ಈ ಅವಕಾಶ ಕಳೆದುಕೊಳ್ಳುವುದು ದುರದೃಷ್ಟಕರ. ಅದು ಅವರ ತಪ್ಪಲ್ಲ, ನಮ್ಮ ತಪ್ಪೂ ಅಲ್ಲ. ಬಟ್ ಅವರು ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ ಅಂದಿದ್ದಾರೆ. ಌಕ್ಚುಲಿ ಶ್ರೇಯಸ್ ಅಯ್ಯರ್ ಸಾಲಿಡ್ ಫಾರ್ಮ್​​ನಲ್ಲಿದ್ದಾರೆ. ಚಾಂಪಿಯನ್ಸ್ ಟ್ರೋಫಿ, ಐಪಿಎಲ್​ನಲ್ಲೂ ಕೂಡ ರನ್​ ಮಳೆಯನ್ನೇ ಹರಿಸಿದ್ರು.

ಶ್ರೇಯಸ್ ಸಾಲಿಡ್ ಫಾರ್ಮ್!

2025ರ ಐಪಿಎಲ್ ಗೂ ಮುನ್ನವೇ ಶ್ರೇಯಸ್ ಅಯ್ಯರ್ ಸಾಕಷ್ಟು ಸದ್ದು

ಪಂತ್ 27 ಕೋಟಿ ರೂಪಾಯಿ, ಶ್ರೇಯಸ್ ಅಯ್ಯರ್ 26.75 ಕೋಟಿ

17 ಪಂದ್ಯಗಳಿಂದ 50.33 ರ ಸರಾಸರಿಯಲ್ಲಿ 604 ರನ್ ಗಳಿಸಿದರು

600ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ಶ್ರೇಯಸ್ ಸ್ಟ್ರೈಕ್ ರೇಟ್

600 ರನ್‌ಗಳ ಗಡಿ ದಾಟಿದ ಬ್ಯಾಟ್ಸ್‌ಮನ್‌ಗಳಲ್ಲಿ ಅಯ್ಯರ್ 39 ಸಿಕ್ಸರ್‌

ಶ್ರೇಯಸ್​ಗಿಂತ ನಿಕೋಲಸ್ ಪೂರನ್ ಒಂದು ಸಿಕ್ಸರ್ ಅಂದ್ರೆ 40 ಸಿಕ್ಸ್

2023 ರ ಏಕದಿನ ವಿಶ್ವಕಪ್ ಮತ್ತು 2025 ರ ಚಾಂಪಿಯನ್ಸ್ ಟ್ರೋಫಿ

ಸ್ಲೋಪಿಚ್​ಗಳಲ್ಲಿ ಸ್ಪಿನ್ ವಿರುದ್ಧ ಫಿಯರ್​ಲೆಸ್ ಆಗಿ ಬ್ಯಾಟ್ ಬೀಸಿದ್ರು

ಈ ಹಿಂದೆ ಟೀಮ್ ಇಂಡಿಯಾದ ತ್ರಿ ಫಾರ್ಮೆಟ್​ ಪ್ಲೇಯರ್ ಆಗಿದ್ದ ಶ್ರೇಯಸ್​​, 2023ರ ಏಕದಿನ ವಿಶ್ವಕಪ್ ಬಳಿಕ ಕೇವಲ ODIಗೆ ಸೀಮಿತರಾಗಿದ್ದಾರೆ. ಐಪಿಎಲ್​​ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ರೂ, ಡೊಮೆಸ್ಟಿಕ್ ಕ್ರಿಕೆಟ್​​ನಲ್ಲಿ ಧಮಾಕೇಧಾರ್ ಪರ್ಫಾಮೆನ್ಸ್​ ನೀಡಿದ್ರೂ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಆಯ್ಕೆಯಾಗಲೇ ಇಲ್ಲ. ಐಪಿಎಲ್​​ನಲ್ಲಿ ಸಾಲಿಡ್ ಆಟವಾಡಿದ್ರೂ ಏಷ್ಯಾಕಪ್​​​ ಟೂರ್ನಿಗೆ ಸೆಲೆಕ್ಟ್​ ಆಗಿಲ್ಲ.  ಇದು ಸಹಜವಾಗೇ ಶ್ರೇಯಸ್ ಅಯ್ಯರ್​ಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಅನ್ಯಾಯವಾಗ್ತಿದೆಯಾ ಎಂಬ ಅನುಮಾನ ಮೂಡಿಸಿದೆ. ಅಷ್ಟಕ್ಕೂ ಶ್ರೇಯಸ್ ಹೆಸರನ್ನ ಸೆಲೆಕ್ಟ್ ಮಾಡದೇ ಇರೋದಕ್ಕೆ ಈ ಮೂರು ವಿಚಾರಗಳೇ ಕಾರಣವಾಯ್ತಾ ಅನ್ನೋ ಅನುಮಾನ ಮೂಡಿಸಿದೆ.

ನಂಬರ್ 1

ಬಿಸಿಸಿಐ ಜೊತೆಗಿನ ವೈಮನಸ್ಸೇ ಮುಳುವಾಯ್ತಾ?

ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶ್ರೇಯಸ್ ಅಯ್ಯರ್ ಪ್ರದರ್ಶನ ಸದ್ದು ಮಾಡಿದ್ರೂ ಬಿಸಿಸಿಐ ಪಾಲಿಗಂತೂ ರೆಬೆಲ್ ಎಂದೇ ಬಿಂಬಿಸಲಾಗ್ತಿದೆ. ಕಳೆದ ವರ್ಷ ಅವರನ್ನು ಬಿಸಿಸಿಐ ಕೇಂದ್ರ ಒಪ್ಪಂದಗಳಿಂದ ತೆಗೆದುಹಾಕಿದ್ದನ್ನ ನಾವಿಲ್ಲಿ ನೆನಪು ಮಾಡಿಕೊಳ್ಬೇಕಾಗುತ್ತೆ. ದೇಶೀಯ ಕ್ರಿಕೆಟ್ ಆಡುವ ಬದಲು ತಮ್ಮ ಐಪಿಎಲ್ ಅಕಾಡೆಮಿಯಲ್ಲಿ ಶ್ರೇಯಸ್ ಅಯ್ಯರ್ ಪ್ರಾಕ್ಟೀಸ್ ಮಾಡುತ್ತಿದ್ದರು. ಹೀಗಾಗಿ ಭಾರತದ ಪಂದ್ಯಗಳಿಂದ ಅವ್ರನ್ನ ಕೈಬಿಡ್ಲಾಗಿತ್ತು. ಕೊನೆಗೆ ದೇಶೀ ಟೂರ್ನಿಗಳಲ್ಲಿ ಅವ್ರ ಪ್ರದರ್ಶನ ನೋಡಿ ಇದೇ ವರ್ಷ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಸೆಲೆಕ್ಟ್ ಮಾಡಲಾಗಿತ್ತು. ಬಟ್ ಟಿ-20ಐಗೆ ಕಮ್ ಬ್ಯಾಕ್ ಮಾಡೋದು ಕಷ್ಟ ಆಗಿದೆ.

ನಂಬರ್ 2

ಗೌತಮ್ ಗಂಭೀರ್ ಜೊತೆಗಿನ ಮುನಿಸು ಕಾಡ್ತಿದ್ಯಾ?

2024 ರ ಐಪಿಎಲ್​ನಲ್ಲಿ ಕೆಕೆಆರ್ ತಂಡದಲ್ಲಿ ಗೌತಮ್ ಗಂಭೀರ್ ಹೆಡ್ ಕೋಚ್ ಆಗಿದ್ರೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆಗಿದ್ರು. ಈ ಜೋಡಿ ನೇತೃತ್ವದಲ್ಲಿ ಕೆಕೆಆರ್ ಗೆದ್ದು ಬೀಗಿತ್ತು. ಆದ್ರೆ ಅಯ್ಯರ್ ತಂಡದ ನಾಯಕನಾಗಿ ತಮಗೆ ಸಲ್ಲಬೇಕಾದ ಕ್ರೆಡಿಟ್ ಸಿಗಲಿಲ್ಲ ಎಂದು ಸಾರ್ವಜನಿಕವಾಗಿಯೇ ಹೇಳ್ಕೊಂಡಿದ್ರು.ಇದೇ ಹೇಳಿಕೆಯಿಂದ ಫ್ರಾಂಚೈಸಿಯಿಂದ ಹೊರಬಂದಿದ್ರು. ಅಂದಿನಿಂದ ಗಂಭಿರ್ ಮತ್ತು ಅಯ್ಯರ್ ನಡುವೆ ಎಲ್ಲವೂ ಸರಿ ಇಲ್ಲ ಎನ್ನಲಾಗಿತ್ತು. ಇದೀಗ ಈ ಎಫೆಕ್ಟ್ ಟೀಂ ಇಂಡಿಯಾದಲ್ಲೂ ಕಂಟಿನ್ಯೂ ಆಯ್ತಾ ಅನ್ನೋ ಪ್ರಶ್ನೆ ಕಾಡ್ತಿದೆ.

ನಂಬರ್ 3

ಗಿಲ್ ಎಂಟ್ರಿಯಿಂದ ಶ್ರೇಯಸ್ ಗೆ ಸ್ಥಾನ ಕೈತಪ್ಪಿತಾ?

ಪ್ರಸ್ತುತ ಶುಭ್ ಮನ್ ಗಿಲ್ ಭಾರತಕ್ಕೆ ಒಬ್ಬ ಸೂಪರ್‌ಸ್ಟಾರ್ ಕ್ರಿಕೆಟಿಗ ಆಗಿದ್ದಾರೆ. ಜಾಗತಿಕ ಬ್ರಾಂಡ್ ರಾಯಭಾರಿಯೂ ಬೆಳೀತಿದ್ದಾರೆ. ಇಂಗ್ಲೆಂಡ್‌ನಲ್ಲಿ 2-2 ಡ್ರಾದೊಂದಿಗೆ ತಮ್ಮ ಟೆಸ್ಟ್ ನಾಯಕತ್ವದ ಮೊದಲ ಸರಣಿಯಲ್ಲೇ ಸದ್ದು ಮಾಡಿದ್ರು. ನಾಯಕನಾಗಿ 750 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದರು. ಹೀಗಾಗಿ ಏಷ್ಯಾಕಪ್​ಗೆ ವೈಸ್ ಕ್ಯಾಪ್ಟನ್ ಆಗಿಯೂ ಸ್ಥಾನ ಪಡ್ಕೊಂಡ್ರು. ಯಾವಾಗ ಗಿಲ್ ಎಂಟ್ರಿ ಕನ್ಫರ್ಮ್ ಆಯ್ತೋ ಅಲ್ಲಿಗೆ ಶ್ರೇಯಸ್ ಸ್ಥಾನ ಕೈತಪ್ಪಿದೆ.

Shantha Kumari