ಭಾರತಕ್ಕೆ UAE ಲೆಕ್ಕಕ್ಕೇ ಇಲ್ಲ – ಗಿಲ್ ಸ್ಥಾನವೇ BCCIಗೆ ತಲೆನೋವು
ಸಂಜು ಕೈ ಬಿಟ್ರೆ ಲೆಕ್ಕಾಚಾರವೇ ತಪ್ಪುತ್ತಾ?

2025ರ ಏಷ್ಯಾಕಪ್ ಟೂರ್ನಿಗೆ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ 15 ಆಟಗಾರರನ್ನ ಸೆಲೆಕ್ಟ್ ಮಾಡಿತ್ತು. 17 ಆಟಗಾರರನ್ನ ಆಯ್ಕೆ ಮಾಡೋ ಅವಕಾಶ ಇದ್ರೂ 15 ಜನರನ್ನೇ ಫೈನಲ್ ಮಾಡಿತ್ತು. ಯಾಕಂದ್ರೆ ಆಟಗಾರರ ಮೇಲೆ ಇರೋ ಕಾನ್ಫಿಡೆನ್ಸ್ ಲೆವೆಲ್ ಅದು. ಬಟ್ ಈಗ ಚಾಲೆಂಜ್ ಏನಂದ್ರೆ ಈ 15 ಜನರಲ್ಲಿ ಪ್ಲೇಯಿಂಗ್ 11 ಫೈನಲ್ ಮಾಡೋದು. ಓಪನರ್ಸ್, ವಿಕೆಟ್ ಕೀಪರ್, ಆಲ್ ರೌಂಡರ್, ಬೌಲರ್ಸ್.. ಹೀಗೆ ಅಂತಿಮವಾಗಿ ಯಾರ್ಯಾರನ್ನ ಕಣಕ್ಕಿಳಿಸೋದು ಅನ್ನೋದೇ ಬಿಗ್ ಕನ್ಫ್ಯೂಷನ್ ಆಗಿದೆ.
ಗಿಲ್ ರೀ ಎಂಟ್ರಿ.. ಪ್ಲೇಯಿಂಗ್ 11 ಲೆಕ್ಕಾಚಾರ ಉಲ್ಟಾ?
2024ರ ಟಿ-20 ವಿಶ್ವಕಪ್ ಗೆದ್ದ ಬಳಿಕ ಭಾರತದ ರೆಕಾರ್ಡ್ಸ್ ಅತ್ಯದ್ಭುತವಾಗಿದೆ. ಬಟ್ ಈ ಸಲ ಏಷ್ಯಾಕಪ್ಗೆ ಟೀಂ ಅನೌನ್ಸ್ ಮಾಡಿರೋ ತಂಡಕ್ಕೆ ಯಾರನ್ನ ಮೈದಾನಕ್ಕೆ ಇಳಿಸೋದು ಅನ್ನೋದು ಮಾತ್ರ ಗೊಂದಲ ಆಗಿದೆ. ಅದಕ್ಕೆ ಕಾರಣ ಶುಭ್ ಮನ್ ಗಿಲ್ ರೀ ಎಂಟ್ರಿ. ಕಳೆದೊಂದು ವರ್ಷದಿಂದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸ್ತಿದ್ರು. ಬಟ್ ಗಿಲ್ ಬಂದಿರೋದ್ರಿಂದ ಸ್ಲಾಟ್ ವೇರಿಯೇಷನ್ ಆಗಲಿದೆ. ಅಭಿಷೇಕ್ ಅಂತೂ ಒನ್ ಸೈಡ್ ಓಪನರ್ ಫಿಕ್ಸ್.. ಬಟ್ ಇನ್ನೊಬ್ರು ಯಾರು ಅನ್ನೋದೇ ಪ್ರಶ್ನೆ. ಇಲ್ಲಿ ಟ್ವಿಸ್ಟ್ ಏನಂದ್ರೆ ಗಿಲ್ ಕಳೆದೊಂದು ವರ್ಷದಿಂದ ಭಾರತದ ಪರ ಟಿ-20ಐ ಪಂದ್ಯ ಆಡಿಲ್ಲ. 2024ರ ಜುಲೈ 30ರಂದು ಶ್ರೀಲಂಕಾ ವಿರುದ್ಧ ಕೊನೇ ಬಾರಿಗೆ ಭಾರತದ ಪರ ಕಣಕ್ಕಿಳಿದಿದ್ದು. ಈಗ ಏಷ್ಯಾಕಪ್ಗೆ ವೈಸ್ ಕ್ಯಾಪ್ಟನ್ ಆಗಿ ಬಂದಿದ್ದಾರೆ. ಸೋ ಗಿಲ್ಗೆ ಸ್ಲಾಟ್ ಕೊಡ್ಲೇಬೇಕು. ಬಟ್ ಯಾವ ಸ್ಲಾಟ್ ಅನ್ನೋದೇ ಕನ್ಫ್ಯೂಷನ್. ಹೀಗಾಗಿ ಭಾರತಕ್ಕೆ ಶುಭ್ಮನ್ ಗಿಲ್ ಒಂಥರಾ ಭಾರ ಅಂದ್ರೂ ತಪ್ಪಿಲ್ಲ. ಆದ್ರೆ ಇಲ್ಲಿ ಗಿಲ್ ಕಾರಣಕ್ಕೆ ಡೈರೆಕ್ಟ್ ಎಫೆಕ್ಟ್ ಆಗ್ತಿರೋದು ಸಂಜು ಸ್ಯಾಮ್ಸನ್ಗೆ.
ಒಂದೇ ವರ್ಷದಲ್ಲಿ 3 ಸೆಂಚುರಿ ಸಿಡಿಸಿದ್ದಾರೆ ಸಂಜು!
ಭಾರತದ ಪರ ಇತ್ತೀಚಿನ ಟಿ-20ಐ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಸ್ಫೋಟಕ ಓಪನರ್ ಆಗಿದ್ದಾರೆ. ಅಭಿಷೇಕ್ ಶರ್ಮಾ ಜೊತೆ ಸಾಲಿಡ್ ಇನ್ನಿಂಗ್ಸ್ ಕಟ್ಟಿದ್ದಾರೆ. ಅದ್ರಲ್ಲೂ ಕಳೆದ ಒಂದು ವರ್ಷದಲ್ಲೇ 3 ಸೆಂಚುರಿ ಸಿಡಿಸಿದ್ದಾರೆ. 2024ರ ಅಕ್ಟೋಬರ್ 12 ರಂದು ಹೈದರಾಬಾದ್ನಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಚೊಚ್ಚಲ T20I ಶತಕ ಸಿಡಿಸಿದ್ರು. ಕೇವಲ 40 ಎಸೆತಗಳಲ್ಲಿ ಶತಕ ಕಂಪ್ಲೀಟ್ ಮಾಡಿದ್ರು. ಇದು T20I ಕ್ರಿಕೆಟ್ನಲ್ಲಿ ಭಾರತೀಯನೊಬ್ಬ ಗಳಿಸಿದ ಮೂರನೇ ವೇಗದ ಶತಕವಾಗಿದೆ. ಆ ಬಳಿಕ ನವೆಂಬರ್ನಲ್ಲಿ ಸೌತ್ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳ ಟಿ-20ಐ ಸರಣಿಯಲ್ಲಿ ಮೊದಲ ಪಂದ್ಯದಲ್ಲೇ ಮತ್ತೊಂದು ಶತಕ ಬಾರಿಸಿದ್ರು. ಬಟ್ ಬ್ಯಾಡ್ಲಕ್ ಮುಂದಿನ ಎರಡು ಪಂದ್ಯಗಳಲ್ಲಿ ಡಕ್ ಔಟ್ ಆಗಿದ್ರು. ಹೀಗಿದ್ರೂ ನಾಲ್ಕನೇ ಪಂದ್ಯದಲ್ಲಿ ಕೇವಲ 56 ಎಸೆತಗಳಲ್ಲಿ ಅಜೇಯ 109 ರನ್ ಗಳಿಸಿ ಗ್ರೇಟ್ ಕಮ್ ಬ್ಯಾಕ್ ಮಾಡಿದ್ರು. ಹೀಗಾಗಿ ಸಂಜು ಸ್ಯಾಮ್ಸನ್ ಬ್ಯಾಟಿಂಗ್ನಲ್ಲಿ ಡಾಮಿನೇಟ್ ಮಾಡೋಕೆ ನಿಂತ್ರೆ ಎದುರಾಳಿ ಯಾರೇ ಆಗಿದ್ರೂ ಕೇರ್ ಮಾಡ್ದಂಗೆ ಚಚ್ಚುತ್ತಾರೆ. ಹೀಗಾಗಿ ಗಿಲ್ ಬಂದ್ರು ಅಂತಾ ಸಂಜುರನ್ನ ಬೆಂಚ್ ಕಾಯಿಸೋಕೆ ಆಗಲ್ಲ. ಹಾಗಂಗ ಮಿಡಲ್ ಆರ್ಡರ್ ನಲ್ಲಿ ಅವಕಾಶ ಕೊಡೋದೂ ಕಷ್ಟ. ಯಾಕಂದ್ರೆ ಮಧ್ಯಮ ಕ್ರಮಾಂಕದಲ್ಲಿ ಅವ್ರ ಸ್ಕೋರ್ ಚೆನ್ನಾಗಿಲ್ಲ. ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದಾಗ ಐದು ಇನ್ನಿಂಗ್ಸ್ಗಳಲ್ಲಿ ಕೇವಲ 62 ರನ್ಗಳನ್ನು ಗಳಿಸಿದ್ದಾರೆ ಅವರ ಸರಾಸರಿ 20.67 ಇದೆ. ಮತ್ತು ಸ್ಟ್ರೈಕ್ ರೇಟ್ 131.91 ಆಗಿದೆ. ಆರನೇ ಸ್ಥಾನದಲ್ಲಿ, ಅವರು ಕೇವಲ ಒಂದು ಇನ್ನಿಂಗ್ಸ್ ಆಡಿದ್ದಾರೆ, ಇದರಲ್ಲಿ ಕೇವಲ 12 ರನ್ಗಳು ಬಂದಿವೆ ಮತ್ತು ಸ್ಟ್ರೈಕ್ ರೇಟ್ ಕೂಡ 100.00 ಆಗಿದೆ. ಟೋಟಲ್ಲಾಗಿ ಸಂಜು ಭಾರತ ಪರ ಇದುವರೆಗೆ 42 ಟಿ20 ಅಂತಾರಾಷ್ಟ್ರೀಯ ಇನ್ನಿಂಗ್ಸ್ಗಳನ್ನು ಆಡಿದ್ದಾರೆ. ಇದರಲ್ಲಿ ಅವರು 861 ರನ್ ಗಳಿಸಿದ್ದಾರೆ. ಸರಾಸರಿ 25.32 ಇದ್ರೆ ಸ್ಟ್ರೈಕ್ ರೇಟ್ 152.39 ಆಗಿದೆ. ಬಟ್ ಮಿಡಲ್ ಆರ್ಡರ್ನಲ್ಲಿ ಜಿತೇಶ್ ಶರ್ಮಾ ಬ್ಯಾಟಿಂಗ್ ಆವರೇಜ್ ಮತ್ತು ಸ್ಟ್ರೈಕ್ರೇಟ್ ಚೆನ್ನಾಗಿದೆ. ಜಿತೇಶ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇವಲ ಏಳು ಟಿ20 ಇನ್ನಿಂಗ್ಸ್ಗಳನ್ನು ಆಡಿದ್ದಾರೆ. ಮತ್ತು 100 ರನ್ಗಳನ್ನು ಗಳಿಸಿದ್ದಾರೆ. ಸರಾಸರಿ 14.29 ಆಗಿದ್ರೆ ಕೆಳ ಕ್ರಮಾಂಕದಲ್ಲಿ ಅವರ ಸ್ಟ್ರೈಕ್ ರೇಟ್ 147.06 ಆಗಿದೆ. ಆರನೇ ಸ್ಲಾಟ್ನಲ್ಲಿ ನಾಲ್ಕು ಇನ್ನಿಂಗ್ಸ್ಗಳಲ್ಲಿ 64 ರನ್ ಗಳಿಸಿದ್ದಾರೆ ಮತ್ತು ಸ್ಟ್ರೈಕ್ ರೇಟ್ 152.38 ಆಗಿದೆ. ಸೋ ಮಿಡಲ್ ಆರ್ಡರ್ ಕ್ಯಾಲ್ಕುಲೇಶನ್ ನೋಡಿದ್ರೆ ಸ್ಯಾಮ್ಸನ್ಗಿಂತ ಉತ್ತಮವಾಗಿದೆ. ಹೀಗಾಗಿ ಒಂದು ವೇಳೆ ಗಿಲ್ಗೆ ಟಾಪ್ ಆರ್ಡರ್ನಲ್ಲೇ ಕಣಕ್ಕಿಳಿಸ್ಬೇಕು ಅಂತಿದ್ರೆ ಬಹುಶಃ ಸ್ಲಾಟ್ ಚೇಂಜ್ ಆಗ್ಬೋದು.
ಅಭಿಷೇಕ್-ಸಂಜು ಓಪನರ್ಸ್.. ಗಿಲ್ ಗೆ 3ನೇ ಸ್ಲಾಟ್?
ಎಂದಿನಂತೆ ಅಭಿಷೇಕ್ ಜೊತೆ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಆರಂಭ ಮಾಡಿದ್ರೆ ಶುಭ್ಮನ್ ಗಿಲ್ಗೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಅವಕಾಶ ಮಾಡಿಕೊಡ್ಬೋದು. ನಾಲ್ಕನೇ ಕ್ರಮಾಂಕಕ್ಕೆ ಸೂರ್ಯಕುಮಾರ್, ಐದನೇ ಸ್ಲಾಟ್ನಲ್ಲಿ ತಿಲಕ್ ವರ್ಮಾ ಬರ್ತಾರೆ. ನಂತ್ರ ಆಲ್ರೌಂಡರ್ಸ್ ಕೋಟಾದಲ್ಲಿ ಕಣಕ್ಕಿಳಿಸೋ ಸಾಧ್ಯತೆ ಇದೆ. ಮಿಡಲ್ ಆರ್ಡರ್ನಲ್ಲಿ ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರನ್ನೂ ಪ್ಲೇಯಿಂಗ್ 11ನಲ್ಲಿ ನೋಡಬಹುದು. ಮೀಡಿಯಂ ಫಾಸ್ಟ್ ಬೌಲರ್ ಆಗಿರುವಂ ಶಿವಂ ದುಬೆ ಬೆಂಚ್ಗೆ ಸೀಮಿತ ಮಾಡೋದು ಬಹುತೇಕ ಫಿಕ್ಸ ್ಇದೆ. ಹಾಗೇ ರಿಂಕು ಸಿಂಗ್ಗೆ ಆಲ್ಮೋಸ್ಟ್ ಅವಕಾಶ ಕೈತಪ್ಪಿದಂತಿದೆ. ಅಂತಿಮವಾಗಿ ದುಬೈ ಪಿಚ್ನ ಗಮನದಲ್ಲಿ ಇಟ್ಕೊಂಡು ಯಾರಿಗೆಲ್ಲಾ ಅವಕಾಶ ಕೊಡ್ತಾರೆ ಅನ್ನೋದೇ ಈಗಿರೋ ಪ್ರಶ್ನೆ.

ನೋಡಿರಿ

