ಏಷ್ಯಾಕಪ್ ನಲ್ಲಿ ಇಂಜುರಿಯಾದ್ರೆ ಔಟ್ – ಬದಲಿ ಆಟಗಾರನಿಗೆ ಚಾನ್ಸ್ ಸಿಗಲ್ವಾ?
ಸ್ಟ್ಯಾಂಡ್ ಬೈ ಪ್ಲೇಯರ್ಸ್.. ರೂಲ್ಸ್ ಹೇಗಿದೆ?

ಏಷ್ಯಾಕಪ್ ಟೂರ್ನಿಗೆ 15 ಸದಸ್ಯರ ತಂಡವನ್ನ ಟೀಂ ಇಂಡಿಯಾ ಅನೌನ್ಸ್ ಮಾಡಿದೆ. ಇದ್ರಲ್ಲಿ 11 ಮಂದಿ ಪ್ಲೇಯಿಂಗ್ 11 ನಲ್ಲಿ ಕಣಕ್ಕಿಳಿದ್ರೆ ನಾಲ್ಕು ಜನ ಬೆಂಚ್ ಕಾಯಬೇಕಾಗುತ್ತೆ. ಬಟ್ ಆಟದ ಟೈಮಲ್ಲಿ ಆಟಗಾರ ಗಾಯಗೊಂಡ್ರೆ ಮುಂದೇಗೆ ಅನ್ನೋ ಕುತೂಹಲ ತುಂಬಾ ಅಭಿಮಾನಿಗಳನ್ನ ಕಾಡ್ತಿದೆ. ಯಾಕಂದ್ರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಪ್ಲೇಯರ್ ಗಾಯಗೊಂಡ ವೇಳೆ ಬದಲಿ ಆಟಗಾರರನ್ನ ಆಡಿಸೋಕೆ ಅವಕಾಶ ಕೊಟ್ಟಿರಲಿಲ್ಲ. ಫೀಲ್ಡಿಂಗ್ ಗೆ ಮಾತ್ರ ಎಕ್ಸ್ಟ್ರಾ ಪ್ಲೇಯರ್ ನೀಡಲಾಗಿತ್ತು. ಆದ್ರೆ ಏಷ್ಯಾಕಪ್ನಲ್ಲಿ ಬೇರೆಯದ್ದೇ ನಿಯಮಗಳಿವೆ.
ಇದನ್ನೂ ಓದಿ : RCB ರೀ ಎಂಟ್ರಿಗೆ ABD ರೆಡಿ – 2026ರ IPL ವೇಳೆಗೆ ಕಮ್ ಬ್ಯಾಕ್?
ಏಷ್ಯಾಕಪ್ ಟೂರ್ನಿಗೆ ಭಾರತ ತಂಡ 15 ಆಟಗಾರರ ಅಧಿಕೃತ ತಂಡವನ್ನ ಘೋಷಣೆ ಮಾಡೋದ್ರ ಜೊತೆಗೆ ಐವರು ಆಟಗಾರರನ್ನ ಸ್ಟ್ಯಾಂಡ್ ಬೈ ಎಂದು ಘೋಷಣೆ ಮಾಡಲಾಗಿದೆ. ಈ ಐವರು ಅಗತ್ಯ ಬಿದ್ದರೆ ತಂಡಕ್ಕೆ ಕೂಡಿಕೊಳ್ಳಬೇಕಾಗುತ್ತೆ. ಮುಖ್ಯ ತಂಡದ ಜೊತೆಗೆ, ಟೀಮ್ ಇಂಡಿಯಾ ಮಾರ್ಕ್ಯೂ ಈವೆಂಟ್ಗಾಗಿ ಸ್ಟ್ಯಾಂಡ್-ಬೈ ಆಟಗಾರರನ್ನು ಸಹ ಘೋಷಿಸಿದೆ. ಮೆನ್ ಇನ್ ಬ್ಲೂ ತಂಡವು ಮೊದಲ ತಂಡದ ಯಾವುದೇ ಆಟಗಾರನಿಗೆ ಗಾಯವಾದರೆ ಆಡಲು ಸಿದ್ಧವಾಗಿರುವ 5 ಆಟಗಾರರನ್ನು ಹೊಂದಿದೆ. ಯಶಸ್ವಿ ಜೈಸ್ವಾಲ್ , ಧ್ರುವ್ ಜುರೆಲ್, ಪ್ರಸಿದ್ಧ್ ಕೃಷ್ಣ, ರಿಯಾನ್ ಪರಾಗ್ ಮತ್ತು ವಾಷಿಂಗ್ಟನ್ ಸುಂದರ್ ಭಾರತದ ಸ್ಟ್ಯಾಂಡ್-ಬೈ ಆಟಗಾರರಾಗಿದ್ದಾರೆ. ಸ್ಟ್ಯಾಂಡ್ಬೈ ಆಟಗಾರರು ತಂಡದ ಹೆಚ್ಚುವರಿ ಸದಸ್ಯರಾಗಿದ್ದಾರೆ. ಹಾಗೇ ಇವರು ಗಾಯದ ಬದಲಿ ಆಟಗಾರರಾಗಿ ತಂಡವನ್ನು ಸೇರಿಕೊಳ್ಳೋ ಅವಕಾಶ ಇರುತ್ತೆ. ಹಾಗಂತ ಇವ್ರು ಅಧಿಕೃತ ತಂಡದ ಜೊತೆ ಯುಎಇಗೆ ಪ್ರಯಾಣ ಬೆಳೆಸಲ್ಲ. ಆದರೆ ತಂಡದ ಪ್ರಮುಖ ಆಟಗಾರರಲ್ಲಿ ಯಾರಾದರೂ ಗಾಯಗೊಂಡರೆ ತಕ್ಷಣವೇ ಪ್ರಯಾಣ ಬೆಳೆಸಬೇಕಾಗುತ್ತೆ.
ಗಾಯದ ಬದಲಿ ನಿಯಮಗಳೇನು?
ತಂಡದ ಆಟಗಾರರೊಬ್ಬರು ಗಾಯಗೊಂಡರೆ ಬದಲಿ ಆಟಗಾರ ಕೇಳಬಹುದು
ವೈದ್ಯಕೀಯ ವರದಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತಾಂತ್ರಿಕ ತಂಡಕ್ಕೆ ರವಾನೆ
ತಾಂತ್ರಿಕ ಸಮಿತಿಯು ವರದಿಯನ್ನು ಪರಿಶೀಲಿಸಿ ನಿರ್ಧಾರಕ್ಕೆ ವೆರಿಫಿಕೇಷನ್
ಬ್ಯಾಟರ್ ಗಾಯಗೊಂಡ್ರೆ ಬದಲಿ ಆಟಗಾರನೂ ಬ್ಯಾಟರ್ ಆಗಿರಬೇಕು
ಬೌಲರ್ ಗಾಯಗೊಂಡ್ರೆ ತಂಡಕ್ಕೆ ಬರುವ ಆಟಗಾರ ಕೂಡ ಬೌಲರ್
ಆರಂಭಿಕ ಆಟಗಾರ ಗಾಯಗೊಂಡರೆ, ಯಶಸ್ವಿ ಜೈಸ್ವಾಲ್ ತಂಡದಲ್ಲಿ ಸ್ಥಾನ
ಗಾಯಗೊಂಡ ಆಟಗಾರನಿಗೆ ರಿಪ್ಲೇಸ್ ಆಗಿ ಪ್ರಸಿದ್ಧ್ ಕೃಷ್ಣ ಅವ್ರನ್ನ ಸೇರಿಸಬಹುದು
ಮೀಸಲು ಆಟಗಾರರ ಪಟ್ಟಿಯಲ್ಲಿ ಇಲ್ಲದ ಆಟಗಾರ ಕೂಡ ಬದಲಿ ಆಟಗಾರ
ಇನ್ನು ಸೆಪ್ಟೆಂಬರ್ 9ರಿಂದ ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಮತ್ತು ಯುಎಇ ಗ್ರೂಪ್ ಎ ನಲ್ಲಿದ್ದರೆ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಹಾಂಗ್ ಕಾಂಗ್ ಹಾಗೂ ಶ್ರೀಲಂಕಾ ಬಿ ಗ್ರೂಪ್ನಲ್ಲಿದೆ. ಈಗಾಗ್ಲೇ ಟೂರ್ನಿಗಾಗಿ 6 ಟೀಮ್ಗಳ ಘೋಷಣೆಯಾಗಿದೆ. ಶ್ರೀಲಂಕಾ ಹಾಗೂ ಯುಎಇ ತಂಡಗಳು ಆಟಗಾರರು ಮಾತ್ರ ಘೋಷಣೆಯಾಗಬೇಕಿದೆ.

ನೋಡಿರಿ

