ಪಾಂಡ್ಯ ಪವರ್ ಗೆ ಪತರಗುಟ್ಟಿದ್ದ ಪಾಕಿಸ್ತಾನ – ಬ್ಯಾಟಿಂಗ್ & ಬೌಲಿಂಗ್ ಸ್ಟ್ರೆಂಥ್ ಸೂಪರ್
ಏಷ್ಯಾಕಪ್ ಚರಿತ್ರೆ.. ವಿಶ್ವಕಪ್ ಗೆ ಟಿಕೆಟ್?

ಪಾಂಡ್ಯ ಪವರ್ ಗೆ ಪತರಗುಟ್ಟಿದ್ದ ಪಾಕಿಸ್ತಾನ – ಬ್ಯಾಟಿಂಗ್ & ಬೌಲಿಂಗ್ ಸ್ಟ್ರೆಂಥ್ ಸೂಪರ್ಏಷ್ಯಾಕಪ್ ಚರಿತ್ರೆ.. ವಿಶ್ವಕಪ್ ಗೆ ಟಿಕೆಟ್?

ಆನ್ ದಿ ಫೀಲ್ಡ್ ಹಾಗೇ ಆಫ್ ದಿ ಫೀಲ್ಡ್ ಎರಡರಲ್ಲೂ ಸದಾ ಸುದ್ದಿಯಲ್ಲಿರೋ ಆಟಗಾರ ಹಾರ್ದಿಕ್ ಪಾಂಡ್ಯ.  ಕ್ರಿಕೆಟ್ ಅಂತಾ ಬಂದಾಗ ಒನ್ ಮ್ಯಾನ್ ಆರ್ಮಿ ಥರ ನಿಂತು ಭಾರತವನ್ನ ಗೆಲ್ಲಿಸಿಕೊಡೋ ಸಾಮರ್ಥ್ಯ ಇರುವಂತ ಪ್ಲೇಯರ್. ಅಗ್ರೆಸ್ಸಿವ್ ಬ್ಯಾಟಿಂಗ್, ವೇಗದ ಬೌಲಿಂಗ್, ಸ್ಮಾರ್ಟ್ ಫೀಲ್ಡಿಂಗ್ ಮೂಲಕವೇ ಟೀಂ ಇಂಡಿಯಾ ಶಕ್ತಿಯಾಗಿದ್ದಾರೆ. ಬಟ್ ಪದೇಪದೆ ಕಾಡುವ ಇಂಜುರಿಯೇ ಪಾಂಡ್ಯ ಪಾಲಿಗೆ ವಿಲನ್ ಆಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಗಾಯದ ಕಾರಣದಿಂದ ತಂಡದಿಂದ ದೂರವೇ ಉಳಿದಿದ್ದ ಪಾಂಡ್ಯ ಏಷ್ಯಾಕಪ್ ಮೂಲಕ ಕಮ್​ ಬ್ಯಾಕ್​ಗೆ ರೆಡಿಯಾಗಿದ್ದಾರೆ. ಯುಎಇಯಲ್ಲಿ ನಡೆಯಲಿರುವ ಈ ಟಿ20 ಏಷ್ಯಾಕಪ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಮೇನ್ ಸ್ಟ್ರೆಂತ್ ಆಗಲಿದ್ದಾರೆ. ಹಾಗೇ ಈ ಟೂರ್ನಮೆಂಟ್‌ನಲ್ಲಿ ಒಂದು ಅಪರೂಪದ ದಾಖಲೆಯನ್ನು ಸೃಷ್ಟಿಸುವ ಹಾದಿಯಲ್ಲಿದ್ದಾರೆ.

ಇದನ್ನೂ ಓದಿ : HITಮ್ಯಾನ್ ಸಖತ್ ಫಿಟ್ – 30 ದಿನದಲ್ಲಿ 20 KG ಡೌನ್

ಏಷ್ಯಾ ಕಪ್ ಟಿ20 ಟೂರ್ನಮೆಂಟ್‌ನಲ್ಲಿ ಹಾರ್ದಿಕ್ ಪಂಡ್ಯಗೆ ಒಂದು ಐತಿಹಾಸಿಕ ದಾಖಲೆಯನ್ನು ಸೃಷ್ಟಿಸುವ  ಅವಕಾಶ ಇದೆ. ಈಗಾಗಲೇ 8 ಟಿ20 ಏಷ್ಯಾ ಕಪ್ ಪಂದ್ಯಗಳಲ್ಲಿ 83 ರನ್‌ಗಳನ್ನು ಗಳಿಸಿ, 11 ವಿಕೆಟ್‌ಗಳನ್ನು ಕಬಳಿಸಿರುವ ಹಾರ್ದಿಕ್, ಇನ್ನು 17 ರನ್‌ ಗಳಿಸಿದರೆ, ಟಿ20 ಏಷ್ಯಾ ಕಪ್‌ನಲ್ಲಿ 100+ ರನ್ಸ್ ಮತ್ತು 10+ ವಿಕೆಟ್‌ಗಳ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ತಾರೆ. ಹಾಗೇ ಜಗತ್ತಿನ ಬೆಸ್ಟ್ ಬೌಲರ್​ಗಳ ಪಟ್ಟಿಯಲ್ಲಿ ಪಾಂಡ್ಯ ಹೆಸರು ಯಾಕಿದೆ ಅನ್ನೋದು ಗೊತ್ತಾಗಲಿದೆ. ಮತ್ತು 2026ರ ಟಿ20 ವಿಶ್ವಕಪ್‌ಗೆ ತಂಡದಲ್ಲಿ ಅವ್ರ ಸ್ಥಾನವನ್ನ ಭದ್ರಪಡಿಸಿಕೊಳ್ಬೋದು. ಸದ್ಯಕ್ಕಂತೂ ಏಷ್ಯಾಕಪ್​ನಲ್ಲಿ ಅವ್ರ ಅವಶ್ಯಕತೆ ಜಾಸ್ತಿ ಇದೆ. ಯಾಕಂದ್ರೆ ಏಷ್ಯಾಕಪ್​ನಲ್ಲಿ ಈಗಾಗಲೇ ಕೆಲವು ಮರೆಯಲಾಗದ ಇನ್ನಿಂಗ್ಸ್ ಆಡಿದ್ದಾರೆ.

2016ರಲ್ಲಿ ಬಾಂಗ್ಲಾ ವಿರುದ್ಧ ಫಿಯರ್ ಲೆಸ್ ಬ್ಯಾಟಿಂಗ್ ಮಾಡಿದ್ದ ಪಾಂಡ್ಯ!

ಏಷ್ಯಾಕಪ್​ನಲ್ಲಿ ಮೊದಲ ಬಾರಿಗೆ 2016ರಲ್ಲಿ ಟಿ-20 ಮಾದರಿಯಲ್ಲಿ ಟೂರ್ನಿ ಆಯೋಜನೆ ಮಾಡ್ಲಾಗಿತ್ತು. ಬಾಂಗ್ಲಾ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಭಾರತ ಫಸ್ಟ್ ಬ್ಯಾಟಿಂಗ್​ಗೆ ಇಳಿದಿತ್ತು. ಈ ವೇಳೆ 97 ರನ್​ಗಳಿಗೆ ನಾಲ್ಕು ವಿಕೆಟ್ ಕಳ್ಕೊಂಡಿತ್ತು. ಅಂದಿನ ಕ್ಯಾಪ್ಟನ್ ಎಂಎಸ್ ಧೋನಿ ಡಗೌಟ್‌ನಲ್ಲಿ ಕಾಯ್ತಾ ಇದ್ರು. ಆದ್ರೆ ಧೋನಿಗಿಂತ ಮೊದ್ಲೇ ಹಾರ್ದಿಕ್ ಪಾಂಡ್ಯ ಕ್ರೀಸ್​ಗೆ ಬಂದಿದ್ರು. ಆಗಷ್ಟೇ ಭಾರತ ತಂಡಕ್ಕೆ ಕಾಲಿಟ್ಟಿದ್ದ ಪಾಂಡ್ಯ ಮೇಲೆ ಯಾರಿಗೂ ಹೋಪ್ಸ್ ಇರ್ಲಿಲ್ಲ. ಬಟ್ ಬಾಂಗ್ಲಾ ವಿರುದ್ಧ ಫಿಯರ್ ಲೆಸ್ ಬ್ಯಾಟಿಂಗ್ ಮಾಡಿದ್ದ ಪಾಂಡ್ಯ  ಕೇವಲ 18 ಎಸೆತಗಳಲ್ಲಿ 170 ಸ್ಟ್ರೈಕ್ ರೇಟ್‌ನಲ್ಲಿ 31 ರನ್ ಗಳಿಸಿದ್ರು. ರೋಹಿತ್ ಶರ್ಮಾ ಜೊತೆಗೂಡಿ ಬಿಗ್ ಸ್ಕೋರ್​ನತ್ತ ತಂಡವನ್ನ ಕೊಂಡೊಯ್ದಿದ್ರು. ಹಾಗೇ ಬೌಲಿಂಗ್​ನಲ್ಲೂ ಒಂದು ವಿಕೆಟ್ ಬೇಟೆಯಾಡಿದ್ರು. ಅಂತಿಮವಾಗಿ ಈ ಪಂದ್ಯವನ್ನ ಭಾರತ ಗೆದ್ದು ಬೀಗಿತ್ತು.

2022ರಲ್ಲಿ ಪಾಕ್ ನೀಡಿದ್ದ ಟಾರ್ಗೆಟ್ ಬೆನ್ನತ್ತಿದ ಭಾರತಕ್ಕೆ ಆಸರೆ!

ಇನ್ನು ಭಾರತ vs ಪಾಕಿಸ್ತಾನ ನಡುವಿನ ಪಂದ್ಯ ಇದ್ದಾಗ ಎಂಥಾ ಟೆನ್ಷನ್ ಇರುತ್ತೆ ಅನ್ನೋದು ನಿಮ್ಗೆಲ್ಲಾ ಗೊತ್ತೇ ಇರುತ್ತೆ. ಯಾಕಂದ್ರೆ ಅದು ಬರೀ ಮ್ಯಾಚ್ ಅಲ್ಲ ಎಮೋಷನ್. ಇಂಥದ್ದೇ ಸಿಚುಯೇಷನ್ 2022ರ ಟಿ-20 ಏಷ್ಯಾಕಪ್ ಟೂರ್ನಿಯಲ್ಲೂ ಕ್ರಿಯೇಟ್ ಆಗಿತ್ತು. ಲೀಗ್ ಹಂತದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 147 ರನ್​ಗಳಿಗೆ ಆಲೌಟ್ ಆಗಿತ್ತು. ಈ ಟಾರ್ಗೆಟ್ ಬೆನ್ನತ್ತಿದ ಭಾರತ 89 ರನ್​ಗಳಿಗೆ 4 ವಿಕೆಟ್ ಕಳ್ಕೊಂಡಿತ್ತು. ಇಂಥಾ ಟೈಮಲ್ಲಿ ಆಸರೆಯಾಗಿ ನಿಂತಿದ್ದೇ ಹಾರ್ದಿಕ್ ಪಾಂಡ್ಯ. ರವೀಂದ್ರ ಜಡೇಜಾ ಜೊತೆಗೂಡಿ ಪ್ರೆಶರ್​ನ ನಿಭಾಯಿಸಿದ್ರು. ಕೊನೇ ಓವರ್‌ನಲ್ಲಿ ನಸೀಮ್ ಶಾ ಎಸೆತದಲ್ಲಿ 3 ಬೌಂಡರಿ ಸಿಡಿಸಿ ಪಂದ್ಯದ ದಿಕ್ಕನ್ನೇ ಬದಲಿಸಿದ್ರು. 17 ಎಸೆತಗಳಲ್ಲೇ 194ರ ಸ್ಟ್ರೈಕ್​ರೇಟ್​ನಲ್ಲಿ 33 ರನ್ ಗಳಿಸಿ ನಾಟೌಟ್ ಇನ್ನಿಂಗ್ಸ್ ಆಡಿದ್ರು. ಅಷ್ಟೇ ಅಲ್ಲದೆ ಬೌಲಿಂಗ್​ನಲ್ಲೂ ಪಾಕಿಗಳ ಹೆಡೆಮುರಿ ಕಟ್ಟಿದ್ರು. 4 ಓವರ್​ಗಳಲ್ಲಿ 25 ರನ್ ನೀಡಿ 3 ವಿಕೆಟ್ ಉರುಳಿಸಿದ್ರು. ಪರಿಣಾಮ ಆ ಪಂದ್ಯದಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಆಗಿದ್ರು.

2023ರಲ್ಲಿ ಪಾಕ್ ವಿರುದ್ಧ ರನ್ ಮಳೆ ಸುರಿಸಿದ್ದ ಪಾಂಡ್ಯ!

ಈ ಮೇಲೆ ಹೇಳಿದ ಎರಡು ಪರ್ಫಾಮೆನ್ಸ್​ ಪಾಂಡ್ಯರ ಸ್ಟ್ರೆಂಥ್ ತೋರಿಸಿದ್ರೆ 2023ರ ಏಕದಿನ ಮಾದರಿಯ ಏಷ್ಯಾಕಪ್ ವೇಳೆ ಪಾಕ್ ವಿರುದ್ಧ ರೆಸ್ಪಾನ್ಸಿಬಿಲಿಟಿ ತೋರಿಸಿದ್ರು. ಲೀಗ್ ಹಂತದ ಪಂದ್ಯದಲ್ಲಿ ಪಾಕ್ ವಿರುದ್ಧ ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ 66 ರನ್​ಗಳಿಗೆ 4 ವಿಕೆಟ್ ಕಳ್ಕೊಂಡಿದ್ರು. ರೋಹಿತ್ 11, ಗಿಲ್ 10, ವಿರಾಟ್ ಕೊಹ್ಲಿ 4, ಶ್ರೇಯಸ್ ಅಯ್ಯರ್ 14 ರನ್​ಗಳಿಗೆ ವಿಕೆಟ್ ಒಪ್ಪಿಸಿದ್ರು. ಇಂಥಾ ಟೈಮಲ್ಲಿ ಇಶಾನ್ ಕಿಶನ್​ಗೆ ಸ್ಟ್ರಾಂಗ್ ಸಾಥ್ ಕೊಟ್ಟಿದ್ದೇ ಹಾರ್ದಿಕ್ ಪಾಂಡ್ಯ. ಇಬ್ಬರೂ ಕೂಡ ಪಾಕ್ ಬೌಲರ್​ಗಳನ್ನ ಅಟ್ಟಾಡಿಸಿದ್ರು. ಕಿಶನ್ 82 ರನ್ ಬಾರಿಸಿದ್ರೆ ಹಾರ್ದಿಕ್ ಪಾಂಡ್ಯ 87 ರನ್ ಚಚ್ಚಿದ್ರು.  ಇಬ್ಬರ ಜೊತೆಯಾಟದಲ್ಲಿ 138 ರನ್‌ಗಳು ಬಂದಿದ್ವು. ಭಾರತ ಒಟ್ಟಾರೆಯಾಗಿ 10 ವಿಕೆಟ್​ಗೆ 266 ರನ್​ಗಳನ್ನ ಕಲೆ ಹಾಕಿತ್ತು. ಬಟ್ ಬ್ಯಾಡ್ ಲಕ್ ಪಾಕಿಸ್ತಾನ ಬ್ಯಾಟಿಂಗ್ ಶುರು ಮಾಡೋ ವೇಳೆಗೆ ಮಳೆ ಬಂದು ಪಂದ್ಯವೇ ರದ್ದಾಗಿತ್ತು. ಮ್ಯಾಚ್ ರದ್ದಾದ್ರೂ  ಪಾಂಡ್ಯ ಇನ್ನಿಂಗ್ಸ್ ಮಾತ್ರ ಅಚ್ಚಳಿಯದೇ ಉಳಿದಿದೆ.

ಏಷ್ಯಾಕಪ್​ನ ಎರಡೂ ಟಿ-20 ಪಂದ್ಯಗಳಲ್ಲಿ ಆಡಿರೋ ಪಾಂಡ್ಯ ಈ ಬಾರಿಯೂ ಕೀ ರೋಲ್ ಪ್ಲೇ ಮಾಡೋ ನಿರೀಕ್ಷೆ ಇದೆ. ಬ್ಯಾಟಿಂಗ್ ಅಥವಾ ಬೌಲಿಂಗ್ ಎರಡರಲ್ಲೂ ನಂಬಿಕೆ ಇಡುವಂಥ ಆಟಗಾರ. ಆದ್ರೆ ಯುಎಇಯ ಪಿಚ್‌ಗಳು ಸಾಮಾನ್ಯವಾಗಿ ಸ್ಪಿನ್ ಬೌಲರ್‌ಗಳಿಗೆ ಅನುಕೂಲಕರವಾಗಿರುತ್ತವೆ. ವೇಗದ ಬೌಲರ್‌ಗಳಿಗೆ ಇಲ್ಲಿ ವಿಕೆಟ್ ತೆಗೆಯೋದು ಸ್ವಲ್ಪ ಕಷ್ಟವೇ ಅನ್ನಿಸ್ಬೋದು. ಹೀಗಿದ್ರೂ ಹಾರ್ದಿಕ್‌ರ ಸ್ಲೋ ಬಾಲ್‌ಗಳು, ಯಾರ್ಕರ್‌ಗಳು ಮತ್ತು ಬೌನ್ಸರ್‌ಗಳಂತಹ ವೇರಿಯೇಶನ್‌ಗಳು ಎದುರಾಳಿಗಳನ್ನ ಕಾಡಬಹುದು. ಭಾರತ ತಂಡವು ಹಾರ್ದಿಕ್‌ರನ್ನು ಜಸ್ಪ್ರೀತ್ ಬುಮ್ರಾ ಜೊತೆಗೆ ಎರಡನೇ ವೇಗದ ಬೌಲರ್ ಆಗಿ ಬಳಸಬಹುದು. ಸದ್ಯ ಗಾಯದಿಂದ ರಿಕವರ್ ಆಗಿ ತಂಡಕ್ಕೆ ಬಂದಿರೋ ಪಾಂಡ್ಯರ ಫಿಟ್‌ನೆಸ್ ಮತ್ತು ಬೌಲಿಂಗ್ ಸಾಮರ್ಥ್ಯವನ್ನು ಭಾರತ ತಂಡದ ಆಡಳಿತವು ಎಚ್ಚರಿಕೆಯಿಂದ ಗಮನಿಸಲಿದೆ. ಹಾಗೇ 2026ರ ಟಿ-20 ವರ್ಲ್ಡ್ ಕಪ್ ಲಿಸ್ಟ್​ನಲ್ಲಿ ಪಾಂಡ್ಯ ಹೆಸರು ಫಿಕ್ಸ್ ಆಗ್ಬೋದು.

Shantha Kumari