ಪುನೀತ್ರಂತೆಯೇ ಅಶ್ವಿನಿ ‘ಪವರ್’ಫುಲ್ ಕಿಕ್ – ವರ್ಕೌಟ್ ಹಿಂದಿನ ಸೀಕ್ರೆಟ್ ಏನು ಗೊತ್ತಾ..!?
‘ಅಭಿ’ಮಾನಿಗಳ ‘ಪರಮಾತ್ಮ’.. ‘ದೊಡ್ಮನೆ’ಯ ‘ಅರಸ’.. ‘ಗಂಧದ ಗುಡಿ’ಯ ‘ರಾಜಕುಮಾರ’.. ಚಂದನವನದಲ್ಲಿ ‘ಬೆಟ್ಟದ ಹೂ’ವಾಗಿ ಅರಳಿ ರಾರಾಜಿಸಿದ ‘ಕನ್ನಡಿಗ’ ಪುನೀತ್ ರಾಜ್ಕುಮಾರ್.. ‘ಆಕಾಶ’ದೆತ್ತರ ಸಾಧನೆ ಮಾಡಿದ ‘ಅಪ್ಪು’ ಕರುನಾಡಿನ ಪಾಲಿಗೆ ‘ಭಾಗ್ಯವಂತ’ನೇ ಸರಿ. ನಡೆ, ನುಡಿಯಲ್ಲಿ ತಂದೆಯಂತೆಯೇ ಕೋಟ್ಯಂತರ ಜನರ ಪ್ರೀತಿ ಸಂಪಾದನೆ ಮಾಡಿದ್ರು. ಸಿನಿಮಾದಲ್ಲಿ ಸದಾ ಬ್ಯುಸಿ ಇರುತ್ತಿದ್ದರೂ ಪವರ್ ಸ್ಟಾರ್ ವರ್ಕೌಟ್ ಮಾಡೋದನ್ನ ಮಿಸ್ ಮಾಡ್ತಿರಲಿಲ್ಲ.
ಇದನ್ನೂ ಓದಿ : ಶಿವ ಶಿವ ಎಂದರೆ ಭಯವಿಲ್ಲ – ಮಹಾಶಿವರಾತ್ರಿ ಆಚರಣೆ, ಉಪವಾಸದ ಹಿನ್ನೆಲೆ ಏನು ಗೊತ್ತಾ..!?
ಫಿಟ್ನೆಸ್ಗೆ ಹೆಚ್ಚು ಮಹತ್ವ ಕೊಟ್ಟಿದ್ದ ಪುನೀತ್ ರಾಜ್ಕುಮಾರ್ ನಿತ್ಯ ಜಿಮ್ಗೆ ಹೋಗಿ ವರ್ಕೌಟ್ ಮಾಡ್ತಿದ್ರು. ಪುನೀತ್ ರಾಜ್ಕುಮಾರ್ ಸಮುದ್ರದ ದಡದಲ್ಲಿ ಕಸರತ್ತು ನಡೆಸಿದ್ದು ಹಾಗೂ ಸೈಕ್ಲಿಂಗ್ ಮಾಡಿದ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ವು. ಇದೀಗ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಫಿಟ್ನೆಸ್ ಬಗ್ಗೆ ಗಮನಹರಿಸಿದ್ದು, ವರ್ಕೌಟ್ ವಿಡಿಯೋವೊಂದು ವೈರಲ್ ಆಗಿದೆ.
ಪುನೀತ್ ರಾಜ್ಕುಮಾರ್ ನಿಧನದ ನಂತರ ಪಿಆರ್ಕೆ ಸ್ಟುಡಿಯೋನ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರೇ ಮುನ್ನಡೆಸುತ್ತಿದ್ದಾರೆ. ಹಲವು ಸಿನಿಮಾಗಳಿಗೆ ಬೆಂಬಲ ನೀಡುತ್ತಿದ್ದಾರೆ. ಮಕ್ಕಳ ಜೊತೆಗೆ ಅನೇಕ ಜವಾಬ್ದಾರಿ ಅಶ್ವಿನಿ ಹೆಗಲ ಮೇಲಿದೆ. ಇದೀಗ ಅಶ್ವಿನಿ ಫಿಟ್ ಆಗಲು ವರ್ಕೌಟ್ ಪ್ರಾರಂಭಿಸಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಅಶ್ವಿನಿ ಪುನೀತ್ ರಾಜ್ಕುಮಾರ್, ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಅಷ್ಟೇ ಅಲ್ಲದೇ ಹೊಸ ಸಿನಿಮಾಗೆ ಬೆಂಬಲ ಸೂಚಿಸುವ ಮೂಲಕ ಚಿತ್ರರಂಗದಲ್ಲೂ ಸಕ್ರಿಯರಾಗಿದ್ದಾರೆ. ಅಪ್ಪು ಅಭಿಮಾನಿಗಳು ಆಯೋಜಿಸುವ ಕಾರ್ಯಕ್ರಮಗಳಿಗೂ ಭೇಟಿ ನೀಡಿದ್ದಾರೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಜಿಮ್ನಲ್ಲಿ ವರ್ಕೌಟ್ ಮಾಡ್ತಿರುವ ವಿಡಿಯೋ ನೋಡಿದ ನೆಟ್ಟಿಗರು ಅಶ್ವಿನಿಗೆ ಪ್ರೋತ್ಸಾಹ ನೀಡಿದ್ದಾರೆ. ಮತ್ತೆ ಕೆಲವರು ಒತ್ತಡದಿಂದ ಆಚೆ ಬರಲು ಇದು ಒಳ್ಳೆ ಮಾರ್ಗ ಅಂತ ಸಲಹೆಯನ್ನೂ ನೀಡಿದ್ದಾರೆ. ಅಪ್ಪು ಅವರಂತೆ ವರ್ಕೌಟ್ಗೆ ಇಳಿದಿದ್ದಾರೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.