ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಅವರಿಗೆ ಹುಟ್ಟುಹಬ್ಬದ ಸಂಭ್ರಮ – 43 ನೇ ವಸಂತಕ್ಕೆ ಕಾಲಿಟ್ಟ ಅಪ್ಪು ಪತ್ನಿ

ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಅವರಿಗೆ ಹುಟ್ಟುಹಬ್ಬದ ಸಂಭ್ರಮ – 43 ನೇ ವಸಂತಕ್ಕೆ ಕಾಲಿಟ್ಟ ಅಪ್ಪು ಪತ್ನಿ

ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಕೊನೆಯ ಸೊಸೆ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಮುದ್ದಿನ ಮಡದಿ ಅಶ್ವಿನಿ ಪುನೀತ್ ರಾಜ್​ಕುಮಾರ್​ಗೆ ಹುಟ್ಟುಹಬ್ಬದ ಸಂಭ್ರಮ. ಅಶ್ವಿನಿ 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಕುಟುಂಬ ಸದಸ್ಯರು, ಸ್ಯಾಂಡ್‌ವುಡ್‌ ನ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ರಾಘವೇಂದ್ರ ರಾಜ್ ಕುಮಾರ್‌ ಕೂಡ ವಿಶ್‌ ಮಾಡಿದ್ದಾರೆ. ತಮ್ಮ ಸೋಶಿಯಲ್‌ ಮೀಡಿಯಾ ಖಾತೆ ಎಕ್ಸ್‌ನಲ್ಲಿ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: ಹೋಟೆಲ್, ಪಬ್, ರೆಸ್ಟೋರೆಂಟ್ ಗಳಲ್ಲಿ ಧೂಮಪಾನ ಸ್ಥಳ ತೆರವಿಗೆ ಆದೇಶ

ಇನ್ನು PRK ಪ್ರೊಡೆಕ್ಷನ್ ಸಂಸ್ಥೆ ಕೂಡ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ವಿಶೇಷವಾಗಿ ವಿಶ್‌ ಮಾಡಿದೆ. ಪಿ.ಆರ್.ಕೆ. ತಂಡದ ವತಿಯಿಂದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ನಮ್ಮೆಲ್ಲಾ ಕಾರ್ಯಗಳಿಗೆ ಮುನ್ನಡೆಯುವ ಶಕ್ತಿ ನೀಡುತ್ತೀರಿ ಮತ್ತು ನಾವು ಕಂಡ ಕನಸುಗಳನ್ನು ಸಾಧಿಸಬಹುದು ಎಂದು ಉದಾಹರಣೆಯ ಮೂಲಕ ತೋರಿಸುತ್ತೀರಿ. ಅದಕ್ಕಾಗಿ ಧನ್ಯವಾದಗಳು ಮತ್ತು ಇಡೀ ತಂಡವು ನಿಮಗೆ ಎಂದೆಂದಿಗೂ ಯಶಸ್ಸನ್ನು ಬಯಸುತ್ತದೆ ಅಂತಾ  ವಿಶೇಷ ಪೋಸ್ಟ್‌ ಹಾಕಿ ವಿಶ್‌ ಮಾಡಲಾಗಿದೆ.

ಪುನೀತ್ ರಾಜ್​ಕುಮಾರ್ ಅವರು ಅಶ್ವಿನಿ ಅವರು ಪ್ರೀತಿಸಿ ಮದುವೆಯಾದ್ರು. ಈ ಬಗ್ಗೆ ಸಂದರ್ಶನದಲ್ಲಿ ಪುನೀತ್ ರಾಜ್​ಕುಮಾರ್ ಅವ್ರೇ ಹೇಳಿಕೊಂಡಿದ್ದಾರೆ. ಅಶ್ವಿನಿ ಅವರನ್ನು ಪುನೀತ್ ರಾಜ್​ಕುಮಾರ್ ಮೊದಲು ನೋಡಿದ್ದು ಜಿಮ್​​ನಲ್ಲಿ, ಮೊದಲ ನೋಟದಲ್ಲೇ ಅಪ್ಪು ಅವರು ಅಶ್ವಿನಿಗೆ ಬೋಲ್ಡ್ ಆಗಿದ್ರು. ಪರಿಚಯದ ಬಳಿಕ ಇವರಿಬ್ಬರ ಮಧ್ಯೆ ಸ್ನೇಹ ಚಿಗುರಿತು. ಅಶ್ವಿನಿ ಮೇಲೆ ಪುನೀತ್ ಲವ್ ಆಗಿದೆ. ಪುನೀತ್ ರಾಜ್​ಕುಮಾರ್ ತಡ ಮಾಡದೇ ಅಶ್ವಿನಿ ಅವರಿಗೆ ಲವ್ ಪ್ರಪೋಸ್ ಮಾಡಿಬಿಟ್ರು. ಇಬ್ಬರು ಬಳಿಕ ಮನೆಯವರನ್ನು ಮದುವೆಗೆ ಒಪ್ಪಿಸಿದ್ದಾರೆ. ಕುಟುಂಬಸ್ಥರ ಸಮ್ಮತಿ ಪಡೆದು ಪುನೀತ್ ರಾಜ್​ಕುಮಾರ್ ಮತ್ತು ಅಶ್ವಿನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಡಿಸೆಂಬರ್ 1, 1999 ರಂದು ಗುರು-ಹಿರಿಯರ ಸಮ್ಮುಖದಲ್ಲಿ ಪುನೀತ್ ರಾಜ್​ಕುಮಾರ್ ಮತ್ತು ಅಶ್ವಿನಿ ಹೊಸ ಜೀವನಕ್ಕೆ ಕಾಲಿಟ್ರು.

ಅಶ್ವಿನಿ ಚಿಕ್ಕಮಗಳೂರಿನವರಾಗಿದ್ದಾರೆ. ಪುನೀತ್ ರಾಜ್​ಕುಮಾರ್ ಅವರ ಸಿಂಪ್ಲಿಸಿಟಿ ಗುಣಕ್ಕೆ ಅಶ್ವಿನಿ ಕ್ಲೀನ್ ಬೋಲ್ಡ್ ಆಗಿದ್ದರಂತೆ. ಪುನೀತ್ ಅವರ ಸರಳತೆ ಮತ್ತು ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವ ನೋಡಿ ಅವರನ್ನು ಇಷ್ಟ ಪಟ್ಟಿದ್ದಾಗಿ ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಹೇಳಿದ್ದರು.

ಅಶ್ವಿನಿ ಮತ್ತು ಪುನೀತ್ ರಾಜ್​​ಕುಮಾರ್ ದಂಪತಿಗೆ ದ್ರಿತಿ ಮತ್ತು ವಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಪುತ್ರಿ ದ್ರಿತಿ ನ್ಯೂರ್ಯಾಕ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಕಿರಿಯ ಪುತ್ರಿ ವಂದಿತಾ ಬೆಂಗಳೂರಿನಲ್ಲೇ ಓದುತ್ತಿದ್ದಾರೆ. ಪುನೀತ್ ನಿಧನದ ಬಳಿಕ ಮನೆ ಹಾಗೂ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಅಶ್ವಿನಿ ನಿಭಾಯಿಸುತ್ತಿದ್ದಾರೆ.

2021ರ ಅಕ್ಟೋಬರ್ 29 ರಂದು ಪುನೀತ್ ರಾಜ್‌ಕುಮಾರ್ ಹಠಾತ್ ಸಾವನ್ನಪ್ಪಿದರು. ಈ ಸುದ್ದಿ ಅಶ್ವಿನಿ ಬಾಳಲ್ಲಿ ದೊಡ್ಡ ಆಘಾತವಾಗಿತ್ತು, ವಿಧಿಯಾಟಕ್ಕೆ ಕೈಚೆಲ್ಲಿ ಕೂರದೇ ಅಶ್ವಿನಿ ಪುನೀತ್ ರಾಜ್​ಕುಮಾರ್, ಸಿನಿಮಾರಂಗದಲ್ಲೇ ಆ್ಯಕ್ಟೀವ್ ಆಗಿದ್ದಾರೆ. ಸೌಮ್ಯ ಸ್ವಭಾವದವರಾದ ಅಶ್ವಿನಿ ಪುನೀತ್ ರಾಜ್​ಕುಮಾರ್, ಪಾರ್ವತಮ್ಮ ರೀತಿ ಗಿಟ್ಟಿಗಿತ್ತಿಯಾಗಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ತನ್ನದೇ ಆದ ಚಾಪು ಮೂಡಿಸಿದ ಅಶ್ವಿನಿ ಪುನೀತ್​ರಾಜ್​ಕುಮಾರ್, ನಿರ್ಮಾಪಕಿಯಾಗಿದ್ದಾರೆ. ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ಹಲವು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಪುನೀತ್ ಕನಸಾಗಿದ್ದ ಗಂಧದ ಗುಡಿ ಸಾಕ್ಷ್ಯಚಿತ್ರವನ್ನು ಯಶಸ್ವಿಯಾಗಿ ಜನರ ಮುಂದೆ ತನ್ನ ಕೀರ್ತಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರಿಗೆ ಸಲ್ಲುತ್ತದೆ. PRK ಪ್ರೊಡೆಕ್ಷನ್ ಸಂಸ್ಥೆ ಮೂಲಕ ಅನೇಕ ಸಿನಿಮಾಗಳನ್ನು ಅಶ್ವಿನಿ ನಿರ್ಮಿಸಿದ್ದಾರೆ.

Shwetha M