ನಿನಗೆ ಒರಗಿಕೊಳ್ಳೋಕೆ ರಘು ಹೆಗಲು, ತೊಡೆ ಬೇಕು! – ರಾಶಿಕಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಅಶ್ವಿನಿ

ಬಿಗ್‌ಬಾಸ್ ಕನ್ನಡ ಸೀಸನ್ 12 ರ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಸ್ಪರ್ಧಿಗಳ ಮಧ್ಯೆ ಟಫ್ ಫೈಟ್ ಏರ್ಪಟ್ಟಿದೆ. ಆದ್ರೀಗ ಕೆಲ ಸ್ಪರ್ಧಿಗಳು ತಮ್ಮ ಮಾತಿನ ಮೂಲಕವೇ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಇದೀಗ ಅಶ್ವಿನಿ ಗೌಡ, ರಘು ಹಾಗೂ ರಾಶಿಕಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಶ್ವಿನಿ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ಕೇಸ್! – ನಾಲ್ವರು ಅರೆಸ್ಟ್!
ಬಿಗ್ ಬಾಸ್ ಸೀಸನ್ 12ರ ಸೂಪರ್ ಸಂಡೇ ವಿಥ್ ಬಾದ್‌ಷಾ ಸುದೀಪ ಸಂಚಿಕೆಯಲ್ಲಿ ಸುದೀಪ್ ಸ್ಪರ್ಧಿಗಳಿಗೆ ಒಂದು ಆಕ್ಟಿವಿಟಿ ನೀಡಿದ್ರು. ಇದ್ರ ಪ್ರಕಾರ ಮನೆಯೊಳಗೆ ಇರುವ ಪಂಚಿಂಗ್ ಬ್ಯಾಗ್ ಮೇಲೆ ಮನೆಯ ಸದಸ್ಯರ ಫೋಟೋವನ್ನು ಅಂಟಿಸಿ, ಅದಕ್ಕೆ ಪಂಚ್ ಮಾಡುತ್ತಾ ಆ ಸ್ಪರ್ಧಿಗಳ ಬಗ್ಗೆ ತಮ್ಮ ಮನಸ್ಸಿನಲ್ಲಿರೋದನ್ನ ಮುಖಕ್ಕೆ ಹೊಡೆದಂತೆ ಹೇಳಬೇಕು. ಈ ವೇಳೆ ಅಶ್ವಿನಿ ರಾಶಿಕಾ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಅಶ್ವಿನಿ ಗೌಡ ಅವರ ಫೋಟೋವನ್ನು ಪಂಚಿಂಗ್ ಬ್ಯಾಗ್‌ಗೆ ಅಂಟಿಸಿ ರಾಶಿಕಾ, ಬರೀ ಮ್ಯಾನಿಪೂಲೇಟ್ ಮಾಡಿ, ಎದುರು ಇರುವ ವ್ಯಕ್ತಿಯನ್ನು ಬೇರೆ ಥರ ತೋರಿಸುವುದು ಇವರ ಗುಣ ಎಂದು ಪಂಚಿಂಗ್ ಬ್ಯಾಗ್ ಪಂಚ್ ಮಾಡಿದ್ದಾರೆ. ಅಶ್ವಿನಿ ಗೌಡ ತನ್ನ ಸರದಿ ಬರುತ್ತಿದ್ದಂತೆ ರೊಚ್ಚಿಗೆದ್ದಿದ್ದಾರೆ. ರಾಶಿಕಾ ಫೋಟೋವನ್ನ ಪಂಚ್ ಬ್ಯಾಗ್‌ಗೆ ಅಂಟಿಸಿ, ಮಿಸ್ ಯೂನಿವರ್ಸ್ ಅಂದುಕೊಂಡಿರುವ ರಾಶಿಕಾ.. ಇನ್ನೊಂದು ಟ್ರ್ಯಾಕ್, ಮತ್ತೊಂದು ಟ್ರ್ಯಾಕ್ ಅಂತ ನಾನು ಶುರು ಮಾಡಿಕೊಂಡಿರಲಿಲ್ಲ. ನಿನಗೆ ನಿಯತ್ತು ಇಲ್ಲ ಅನ್ನೋಕೆ ಸೂರಜ್ ಇದ್ನಲ್ಲ ಅವನೇ ದೊಡ್ಡ ಉದಾಹರಣೆ. ನಿನಗೆ ಒರಗಿಕೊಳ್ಳೋಕೆ ರಘು ಅವರ ತೊಡೆ, ರಘು ಅವರ ಹೆಗಲು ಬೇಕು ನನಗೆ ಅವಶ್ಯಕತೆ ಇಲ್ಲ. ನಾನು ಇನ್ನೊಬ್ಬರಿಗೆ ಹೆಗಲಾಗೆಗಿರ್ತೀನಿ ಎಂದು ಹೇಳಿದ್ದಾರೆ. ಇದೀಗ ಅಶ್ವಿನಿ ಗೌಡ ಹೇಳಿಗೆ ವೀಕ್ಷಕರಿಗೆ ಬೇಸರ ತಂದಿದೆ. ಅಶ್ವಿನಿ ಗೌಡ ಇಷ್ಟು ಕೀಳಾಗಿ ಮಾತನಾಡಬಾರದಿತ್ತು. ರಘು, ರಾಶಿಕಾ ಭಾಂದವ್ಯ ಉತ್ತಮವಾಗಿದೆ. ಅವರಿಬ್ಬರದು ಅಣ್ಣ, ತಂಗಿ ಬಾಂಧವ್ಯ. ಕೋಪಗೊಂಡಾಗ ಅಶ್ವಿನಿ ಗೌಡ ಬಳಸುವ ಪದಗಳು ಅವಳನ್ನು ನಿಜವಾಗಿಯೂ ಮೂರ್ಖಳನ್ನಾಗಿ ಕಾಣುವಂತೆ ಮಾಡುತ್ತದೆ. ಕಳೆದ ಎರಡು ದಿನಗಳಿಂದ ರಾಶಿಕಾ ಯಾವುದೇ ನಿಜವಾದ ಕಾರಣವಿಲ್ಲದೆ ಅವಳನ್ನು ಗುರಿಯಾಗಿಸಿಕೊಂಡಾಗ ಅವಳು ರಾಶಿಕಾಳನ್ನು ನಿರ್ಲಕ್ಷಿಸಿ ಹೆಚ್ಚು ಪ್ರಬುದ್ಧತೆಯನ್ನು ತೋರಿಸಬೇಕಾಗಿತ್ತು.

ನೋಡಿರಿ

