ಕಳಪೆ ಪಟ್ಟ ಸಿಕ್ಕರೂ ಕೀಳು ಮಟ್ಟಕ್ಕೆ ಇಳಿದ ಅಶ್ವಿನಿ ಗೌಡ – ಗಿಲ್ಲಿ ಪಂಚೆ ಎಳೆಯೋ ಸವಾಲ್

ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಅಶ್ವಿನಿ ಗೌಡ ಹಾರಾಟ, ಹೋರಾಟ ಜೋರಾಗಿಯೇ ಇದೆ. ಕಳಪೆ ಪಟ್ಟ ಸಿಕ್ಕಿದರೂ ಕೂಡಾ ಕೀಳು ಮಟ್ಟದಲ್ಲಿ ಮಾತಾಡುವುದು ಬಿಟ್ಟಿಲ್ಲ. ಅಶ್ವಿನಿ ಗೌಡ ಆಟದ ರೀತಿ ನೋಡಿ ಇವರೇನಾ ಕನ್ನಡಪರ ಹೋರಾಟಗಾರ್ತಿ ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾಗೆ ಮತ್ತೆ ಅವಮಾನ! – ಸೆಡೆ ಎಂದು ಬೈದ ಕಾಕ್ರೋಚ್ ಸುಧಿಗೆ ಕಿಚ್ಚನ ಕ್ಲಾಸ್ ಫಿಕ್ಸ್?!
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಕೀಳುಮಟ್ಟದ ವರ್ತನೆ ಮುಂದುವರಿಸಿದ್ದಾರೆ. ಕಳೆದ ವಾರ ‘ಎಸ್’ ಶಬ್ದಕ್ಕೆ ಸುದೀಪ್ ಅವರಿಂದ ಉಗಿಸಿಕೊಂಡಿದ್ದ ಅಶ್ವಿನಿ, ಈ ವಾರ ಗಿಲ್ಲಿ ಜೊತೆಗಿನ ವಿವಾದದಲ್ಲಿ ಸಿಲುಕಿದ್ದಾರೆ. ಗಿಲ್ಲಿಯ ಪಂಚೆ ಎಳೆಯುವ ಬಗ್ಗೆ ಮಾತನಾಡಿರುವುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಅವರು ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದಿತ್ತು ಎಂದು ಎಲ್ಲರೂ ಹೇಳುತ್ತಿದ್ದಾರೆ. ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ತಾನೇ ಬಾಸ್ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅಶ್ವಿನಿ ಗೌಡ ಅವರಿಗೆ ರಘು ಅವರು ತಮ್ಮ ವಿಶೇಷ ಅಧಿಕಾರ ಬಳಸಿ ಕಳಪೆ ನೀಡಿದ್ದಾರೆ. ಕಳಪೆ ಎನಿಸಿಕೊಂಡ ಅವರು ಜೈಲಿನಲ್ಲಿ ಕುಳಿತಿರಬೇಕು. ಅವರು ಯಾವುದೇ ವಸ್ತುಗಳನ್ನು ತೆಗೆದುಕೊಂಡು ಜೈಲಿಗೆ ಹೋಗಬಾರದು. ಆದರೆ, ಅಶ್ವಿನಿ ಅವರು ತಮ್ಮ ಸ್ವೆಟರ್ ಧರಿಸಿಯೇ ಜೈಲಿನ ಒಳಗೆ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಗಿಲ್ಲಿ ನಟ ಸ್ವೆಟರ್ನ ಎಸೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಅಶ್ವಿನಿ ಸಿಟ್ಟಾದರು. ‘ನಿನ್ನ ಪಂಚೆ ಎಳೆಯೋಕೆ ನಿನಗೂ ಬರುತ್ತದೆ. ಆಗ, ನಿನ್ನ ಮರ್ಯಾದೆ ಏನಾಗಿರೋದು? ಹೋಗೋ ಥೂ’ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ‘ರೂಲ್ಸ್ ಹೇಳಲು ಬಂದವರಿಗೆ ಈ ರೀತಿಯಾ ಮಾಡೋದಾ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ‘ಗಿಲ್ಲಿ ಅವರು ಅಶ್ವಿನಿ ಅವರ ಸ್ವೆಟರ್ ಎಳೆದಿದ್ದೇ ಹೊರತು, ಡ್ರೆಸ್ ಅಲ್ಲ. ಅದರಲ್ಲಿ ತಪ್ಪೇನಿದೆ’ ಎಂದಿದ್ದಾರೆ ಫ್ಯಾನ್ಸ್. ಈ ವಿಚಾರವಾಗಿ ಸುದೀಪ್ ಅವರು ಇಂದಿನ (ಅಕ್ಟೋಬರ್ 25) ಎಪಿಸೋಡ್ನಲ್ಲಿ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಮತ್ತೊಂದೆಡೆ ಬಿಗ್ ಬಾಸ್ ಮನೆಯ ಕೆಲವು ಮೂಲ ನಿಯಮಗಳನ್ನು ಅಶ್ವಿನಿ ಗೌಡ ಅವರು ಮುರಿಯುತ್ತಿದ್ದಾರೆ. ಈ ವಾರ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದರೂ ಕೂಡ ಅವರು ತಗ್ಗಿ ಬಗ್ಗಿ ನಡೆದುಕೊಂಡಿಲ್ಲ. ಕ್ಯಾಪ್ಟನ್ ಆದ ರಘು ಹಾಗೂ ಕಳಪೆ ಆದ ಅಶ್ವಿನಿ ಗೌಡ ನಡುವಿನ ಕಿರಿಕ್ ಮುಂದುವರಿದಿದೆ.

ನೋಡಿರಿ

