ರಕ್ಷಿತಾ ಶೆಟ್ಟಿ ಇನ್ನೋಸೆನ್ಸ್ ಫೇಸ್ ಸ್ಟ್ರಾಟರ್ಜಿ! – ಪ್ರಶ್ನೆಗಳ ಸುರಿಮಳೆಗೆ ಕರಾವಳಿ ಬೆಡಗಿ ಖಡಕ್ ಉತ್ತರ

ಬಿಗ್ ಬಾಸ್ ಮನೆ ಈಗ ರಣರಂಗವಾಗಿದೆ. ಅಶ್ವಿನಿ ಗೌಡ ಹಾಗೂ ಜಾಹ್ನವಿ ರಕ್ಷಿತಾಳನ್ನ ಟಾರ್ಗೆಟ್ ಮಾಡಿದ್ದಾರೆ. ಸಣ್ಣ ಪುಟ್ಟ ವಿಚಾರವನ್ನೇ ದೊಡ್ಡದು ಮಾಡ್ತಿದ್ದಾರೆ. ವಾಶ್‌ರೂಮ್‌ನಲ್ಲಿ ರಕ್ಷಿತಾ ಕ್ಯಾಮೆರಾ ಮುಂದೆ ಮಾತನಾಡಿದ್ದನ್ನ ಜಾಹ್ನವಿ ಹಾಗೂ ಅಶ್ವಿನಿ ಬೇರೆ ರೀತಿಯಲ್ಲೇ ಬಿಂಬಿಸಿದ್ದಾರೆ. ರಕ್ಷಿತಾ ಮೈಮೇಲೆ ದೆವ್ವ ಬಂದಿದೆ ಎಂದು ಎಲ್ಲರ ಮುಂದೆ ಬಿಂಬಿಸಿದ್ದಾರೆ. ಈ ವಿಚಾರವಾಗಿ ರಕ್ಷಿತಾ ಸಿಡಿದೆದ್ದಿದ್ದಾರೆ. ಇದೀಗ ಸ್ಪರ್ಧಿಗಳು ಸಾಲು ಸಾಲು ಪ್ರಶ್ನೆಗಳನ್ನ ರಕ್ಷಿತಾಗೆ ಕೇಳಿದ್ದು, ಆಕೆ ತಬ್ಬಿಬ್ಬಾಗಿದ್ದಾರೆ.
ಇದನ್ನೂ ಓದಿ: ತೇಜಸ್ವಿಯ ಕೆಂಪು ರತ್ನಗಳ ಹಿಂದೆ ಬಿದ್ದ ಸು ಫ್ರಮ್ ಸೋ ಗುರೂಜಿ – ಜುಗಾರಿ ಕ್ರಾಸ್ ಗೆ ರಾಜ್ ಬಿ ಶೆಟ್ಟಿ ಹೀರೋ!
ಬಿಗ್ ಬಾಸ್ ಮನೆಯಲ್ಲಿ ಸೀಸನ್ 12ರ ಮೊದಲ ಫಿನಾಲೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಫಿನಾಲೆ ತಲುಪಿರುವ ಫಿನಾಲೆ ಕಂಟೆಂಡರ್‌ಗಳು ಪತ್ರಿಕಾಗೋಷ್ಠಿ ಆಯೋಜನೆ ಮಾಡಿ, ಪತ್ರಕರ್ತರಂತೆ ಉಳಿದ ಸ್ಪರ್ಧಿಗಳನ್ನು ಬಾಯಿಗೆ ಬಂದಂತೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ರಕ್ಷಿತಾ ಶೆಟ್ಟಿಗೆ ಮಾತಿನ ಪೆಟ್ಟು ನೀಡಲು ಮುಂದಾಗಿದ್ದಾರೆ. ಆದರೆ, ಎಲ್ಲರಿಗೂ ರಕ್ಷಿತಾ ಶೆಟ್ಟಿ ಖಡಕ್ ತಿರುಗೇಟು ಕೊಟ್ಟಿದ್ದಾರೆ.
ರಕ್ಷಿತಾ ಶೆಟ್ಟಿಗೆ ಯಾಕೆ ನೀವು ಇನ್ನೋಸೆನ್ಸ್ ಫೇಸ್ ಮಾಡಿಕೊಂಡು ಕೂತಿದ್ದೀರಾ ಎಂದು ರಾಶಿಕಾ ಕೇಳುತ್ತಾರೆ. ಇದಕ್ಕೆ ಧ್ವನಿಗೂಡಿಸಿದ ಅಶ್ವಿನಿ ಗೌಡ ಇದು ನಿಮ್ಮ ಸ್ಟ್ರಾಟರ್ಜಿನಾ ಎಂದು ಪ್ರಶ್ನೆ ಮಾಡುತ್ತಾರೆ. ಆಗ ರಕ್ಷಿತಾ ಶೆಟ್ಟಿ ನನ್ನ ಫೇಸ್ ಇರುವುದೇ ಇನ್ನೋಸೆಂಟ್ ಏನು ಮಾಡೋದು ಹೇಳಿ ಎನ್ನುತ್ತಾರೆ. ಆಗ ನಾವು ಇದನ್ನು ಒಪ್ಪುವುದಿಲ್ಲ ಎಂದು ರಾಶಿಕಾ ಮತ್ತು ಅಶ್ವಿನಿ ಗೌಡ ಮಾತಿನ ಬಾಣ ಮುಂದುವರೆಸುತ್ತಾರೆ.
ಇನ್ನು ಕಾಕ್ರೋಚ್ ಸುಧಿ ಅವರು, ನೀವು ಈ ಮನೇಲಿ ಡೇ ಶಿಫ್ಟ್ ಮಾಡಿದ್ದಕ್ಕಿಂತ ನೈಟ್ ಶಿಫ್ಟ್ ಮಾಡಿದ್ದೇ ಹೆಚ್ಚು ಅಂತಾ ಮಾತು ಕೇಳಿ ಬರ್ತಿದೆ. ನೀವು ಇಲ್ಲಿ ಬಿಗ್ ಬಾಸ್‌ಗೆ ಬರುವುದನ್ನು ಬಿಟ್ಟು ಯಾವುದಾದರೂ ಒಂದು ಜೂ ಗಾರ್ಡನ್‌ನಲ್ಲಿ ಕೆಲಸಕ್ಕೆ ಹೋಗಬಹುದಿತ್ತು ಅನಿಸುತ್ತದೆ. ಮುಂದುವರೆದು ಕಾಕ್ರೋಚ್ ಸುಧಿ ನಿಮ್ಮನ್ನ ಈ ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಇಷ್ಟವಿಲ್ಲ ಎಂದು ನೇರವಾಗಿ ಹೇಳುತ್ತಾರೆ. ಇದಕ್ಕೆ ಮತ್ತೆ ಧ್ವನಿಗೂಡಿಸಿದ ಅಶ್ವಿನಿ ಗೌಡ ಇನ್ನೊಬ್ಬರಿಗೆ ಗೌರವ ಕೊಡಬೇಕು ಎನ್ನುವುದು ಇದ್ಯಾವುದೂ ನಿಮ್ಮ ಕ್ಯಾಟಗರಿಯಲ್ಲಿ ಬರುವುದಿಲ್ಲವೇ? ನೀವು ಒಂಥರಾ ಕಲ್ಪನಾ ಲೋಕದಲ್ಲಿ ಬದುಕುತ್ತಿದ್ದೀರಿ ಅನಿಸುತ್ತದೆ ಎಂದು ಪ್ರಶ್ನೆ ಮಾಡುತ್ತಾರೆ. ಜೊತೆಗೆ, ನಿಮಗೆ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲಿಕ್ಕೆ ಏನೆಲ್ಲಾ ಅರ್ಹತೆಗಳಿವೆ ಅನ್ಸುತ್ತೆ ಹೇಳಿ ಎಂದು ಕೇಳುತ್ತಾರೆ.
ಒಟ್ಟಾರೆಯಾಗಿ ಇದೀಗ ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕುವುದಕ್ಕೆ ರಕ್ಷಿತಾ ಶೆಟ್ಟಿಯನ್ನು ಎಲ್ಲರೂ ಟಾರ್ಗೆಟ್ ಮಾಡಿದ್ದಾರೆ ಎಂಬ ಅಂಶವು ಕಲರ್ಸ್ ಕನ್ನಡ ವಾಹಿನಿಯಿಂದ ಬಿಡುಗಡೆ ಮಾಡಿದ ಪ್ರೋಮೋದಿಂದ ತಿಳಿದು ಬರುತ್ತದೆ.

ನೋಡಿರಿ

