ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ಅಶ್ವಿನಿ ಗೌಡ – ಅತಿ ವಿಶ್ವಾಸವೇ ಕ್ಲೈಮ್ಯಾಕ್ಸ್‌ನಲ್ಲಿ ಮುಳ್ಳಾಯ್ತಾ?

ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ಅಶ್ವಿನಿ ಗೌಡ – ಅತಿ ವಿಶ್ವಾಸವೇ ಕ್ಲೈಮ್ಯಾಕ್ಸ್‌ನಲ್ಲಿ ಮುಳ್ಳಾಯ್ತಾ?

ಬಿಗ್‌ಬಾಸ್ ಫೈನಲ್‌ನಲ್ಲಿ ಅಶ್ವಿನಿ ಗೌಡ ಅವರಿಗೆ ನಿರಾಸೆಯಾಗಿದೆ. ಅಶ್ವಿನಿಗೌಡ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯ್ತು. ಸ್ವತಃ ಕಿಚ್ಚ ಸುದೀಪ್ ಅವರೇ ಬಿಗ್‌ಬಾಸ್ ಮನೆಯೊಳಗೆ ಬಂದು ಮೂವರನ್ನು ಹೊರಗೆ ಕರೆದು ಕೊಂಡು ಬಂದರು.

ಇದನ್ನೂ ಓದಿ:ಬಿಗ್‌ಬಾಸ್ ಫಿನಾಲೆಯಲ್ಲಿ ಎಡವಿದ ಕಾವು – ರವಿಚಂದ್ರನ್ ಜೊತೆಯಲ್ಲಿ ಹೊರಗೆ ಬಂದ ಕಾವ್ಯ

ಕಿಚ್ಚ ಸುದೀಪ್ ವೇದಿಕೆಗೆ ಬಂದ ಕೂಡಲೇ ಗಿಲ್ಲಿ, ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಅವರಲ್ಲಿ ಯಾರು ಮೂರನೇ ಸ್ಥಾನಕ್ಕೆ ಬರಲಿದ್ದಾರೆ ಎಂಬ ವಿಚಾರ ಬಹಿರಂಗ ಪಡಿಸಿದರು. ಇದರಲ್ಲಿ ಅಶ್ವಿನಿ ಗೌಡ ಅವರು ಮೂರನೇ ಸ್ಥಾನದಲ್ಲಿ ಬಿಗ್‌ಬಾಸ್ ಮನೆಯ ಆಟವನ್ನು ಕೊನೆಗೊಳಿಸಿದರು. ಅಶ್ವಿನಿ ಗೌಡ ಅವರಿಗೆ 14 ಲಕ್ಷ ರೂಪಾಯಿ ಬಹುಮಾನ ದೊರೆತಿದೆ.

ಅಶ್ವಿನಿ ಗೌಡ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖ ಆಕ್ಟಿವಿಸ್ಟ್ ಕೂಡ ಹೌದು. ನೂರಾರು ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ನಟಿಸಿರುವ ಇವರು, ವೈಯಕ್ತಿಕವಾಗಿ ಸಾಕಷ್ಟು ಶ್ರೀಮಂತರು. ತಮಗೆ 150 ಬಾಡಿಗೆ ಮನೆಗಳಿವೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದರು. ಅಂತಹ ಐಷಾರಾಮಿ ಜೀವನದ ಹಿನ್ನೆಲೆಯಿಂದ ಬಂದರೂ, ಬಿಗ್‌ಬಾಸ್ ಮನೆಯಲ್ಲಿ ಸಾಮಾನ್ಯರಂತೆ ಕಷ್ಟಪಟ್ಟು ಟಾಸ್ಕ್ ಆಡಿದ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

Sulekha