S ಅಂದರೆ ಶೌಟಿಂಗ್! – ಎಸ್ ಕ್ಯಾಟಗರಿ ವಿವಾದದ ಬಗ್ಗೆ ಕಡೆಗೂ ಮೌನ ಮುರಿದ ಅಶ್ವಿನಿ ಗೌಡ!

ಬಿಗ್ಬಾಸ್ ಕನ್ನಡ ಸೀಸನ್ 12 ರಲ್ಲಿ ರಕ್ಷಿತಾ ಶೆಟ್ಟಿ ಹಾಗೂ ಅಶ್ವಿನಿ ಗೌಡ ಜಗಳವೇ ಹೈಲೈಟ್ ಆಗಿತ್ತು. ಹಾವು ಮುಂಗುಸಿಯಂತೆ ಪದೇ ಪದೆ ಕಿತ್ತಾಡುತ್ತಿದ್ದರು. ಗೆಜ್ಜೆ ವಿಚಾರವಾಗಿ ನಡೆದ ಜಗಳದ ಬಳಿಕ ಅಶ್ವಿನಿ ರಕ್ಷಿತಾ ಎಸ್ ಕ್ಯಾಟಗರಿಗೆ ಸೇರಿದವಳು ಎಂದು ಹೇಳಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಈ ಬಗ್ಗೆ ಅಶ್ವಿನಿ ಪ್ರತಿಕ್ರಿಯಿಸಿದ್ದಾರೆ. ಎಸ್ ಕ್ಯಾಟಗರಿ ಅಂದರೆ ಏನು ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ದೆಹಲಿ, ಬೆಂಗಳೂರು ಆಯ್ತು.. ಈಗ ಮಂಗಳೂರಿನಲ್ಲೂ ಕಳಪೆ ಏರ್ ಕ್ವಾಲಿಟಿ!
ಎಸ್ ಕ್ಯಾಟಗರಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಅಶ್ವಿನಿ ಗೌಡ, ನಾನು ಸಾಮಾಜಿಕ ಹೋರಾಟಗಾತಿ, ಕನ್ನಡ ಹೋರಾಟಗಾರ್ತಿ. ನನಗೆ 20 ವರ್ಷದ ಜರ್ನಿ ಇದೆ. ಜಾತಿ ಅಥವಾ ಇನ್ಯಾವುದೋ ವಿಚಾರದಲ್ಲಿ ಯಾವ ಪದ ಬಳಸಿದರೆ, ಏನಾಗುತ್ತದೆ ಎಂದು ಗೊತ್ತಿದೆ. ಅಷ್ಟು ಪ್ರಜ್ಞೆ ಇರೋ ವ್ಯಕ್ತಿ ನಾನಲ್ಲ. S ಅಂದರೆ ಶೌಟಿಂಗ್ ಎಂದರ್ಥ, ಕೂಗಾಡ್ತಾರೆ, ಕಿರುಚಾಡಿ ಸ್ಕೋಪ್ ತಗೊಳ್ತಾರೆ ಎನ್ನುವವರಿಗೆ ಶೌಟಿಂಗ್ ಕ್ಯಾಟಗರಿ ಎಂದು ಹೇಳುತ್ತಾರೆ. ರಕ್ಷಿತಾ ಶೆಟ್ಟಿ ಕೂಗಾಡುತ್ತಾರೆ, ಆ ವ್ಯಕ್ತಿ ನಾನಲ್ಲ. ಎಸ್ ಕ್ಯಾಟಗರಿ ಬಗ್ಗೆ ಜನರು ಈಗ ಮಾತನಾಡಿರೋದು ನೋಡಿ, ಸಿಲ್ಲಿ ಅನಿಸಿತು. ಈಗ ನನಗೆ ರಕ್ಷಿತಾ ಶೆಟ್ಟಿ ನೇರವಾಗಿ ಗೊತ್ತಿದೆ ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
ನಾನು ಕೊನೆಯಲ್ಲಿ ರಕ್ಷಿತಾ ಶೆಟ್ಟಿ ಜೊತೆ ಕ್ಲೋಸ್ ಆಗಿದ್ದೆ. ರಕ್ಷಿತಾ ಶೆಟ್ಟಿ ಒಂಥರ ಜ್ಯೂನಿಯರ್ ಅಶ್ವಿನಿ ಥರ. ಆರಂಭದಲ್ಲಿ ಹೇಗಿರುತ್ತದೆಯೋ ಹಾಗೆ ಆಮೇಲೆ ಇರೋದಿಲ್ಲ. ನಾನು ಟಾಪ್ 1 ರಲ್ಲಿ ಬರ್ತೀನಿ ಎಂದು ಅನೇಕರು ಅಂದುಕೊಂಡಿದ್ದರು. ಹೆಣ್ಣು ಮಕ್ಕಳು ಬಿಗ್ ಬಾಸ್ ಶೋಗೆ ಹೋಗಬಾರದು, ಕಪ್ ಕೊಡಲ್ಲ, ಇನ್ನು ಯಾರೇ ಬಿಗ್ ಬಾಸ್ ಮನೆಗೆ ಬಂದರೂ ಕೂಡ ಅಶ್ವಿನಿ ಗೌಡ ಥರ ಇರಬೇಕು ಎಂದು ಕಾಮೆಂಟ್ ಮಾಡಿದ್ದರು. ಅದೆಲ್ಲ ನೋಡಿ ಖುಷಿ ಆಯ್ತು ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
ಮನುಷ್ಯನಿಗೆ ತೃಪ್ತಿ ಅನ್ನೋದು ಇಲ್ಲ, ನಾನು ವಿನ್ ಆದರೂ ಕೂಡ ತೃಪ್ತಿ ಇರೋದಿಲ್ಲ. ವಿನ್ ಆಗಬೇಕು ಎನ್ನೋದಿತ್ತು. ಈಗ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳೋಣ. ಎಲ್ಲರನ್ನು ಎದುರಿ ಹಾಕಿಕೊಂಡು ಒಂಟಿಯಾಗಿ ಬದುಕೋದು ಸುಲಭ ಇಲ್ಲ. ಇಲ್ಲಿಯವರೆಗೆ ಬಂದಿದೀನಿ ಅಂದರೆ ನಾನು ಕಪ್ ಗೆದ್ದಷ್ಟೇ ಖುಷಿ ಎಂದಿದ್ದಾರೆ.

ನೋಡಿರಿ

