ಮರ್ಯಾದೆ ಅಶ್ವಿನಿ ಗೌಡ ಮತ್ತು ಜಾನ್ವಿಗೆ ಮಾತ್ರ ಇರೋದಾ? –ರಘು ಮತ್ತು ಗಿಲ್ಲಿಗೆ ಮರ್ಯಾದೆ ಇಲ್ವಾ?
ದೊಡ್ಮನೆಯಲ್ಲಿ ಮರ್ಯಾದೆಗಾಗಿ ಉಪವಾಸ ಮಾಡಿದ ಅಶ್ವಿನಿ ಗೌಡ

ಮರ್ಯಾದೆ ಅಶ್ವಿನಿ ಗೌಡ ಮತ್ತು ಜಾನ್ವಿಗೆ ಮಾತ್ರ ಇರೋದಾ? –ರಘು ಮತ್ತು ಗಿಲ್ಲಿಗೆ ಮರ್ಯಾದೆ ಇಲ್ವಾ?ದೊಡ್ಮನೆಯಲ್ಲಿ ಮರ್ಯಾದೆಗಾಗಿ ಉಪವಾಸ ಮಾಡಿದ ಅಶ್ವಿನಿ ಗೌಡ

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಈಗ ಮರ್ಯಾದೆ ಜಗಳ ಶುರುವಾಗಿದೆ. ಗೌರವ ಕೊಟ್ಟು ಗೌರವ ಪಡೆದುಕೊಳ್ಳಬೇಕು. ನಾವೇ ಗೌರವ ಕೊಡದೆ ಇದ್ದ ಮೇಲೆ ಬೇರೆಯವರಿಂದ ಗೌರವ ನಿರೀಕ್ಷೆ ಮಾಡುವುದು ಎಷ್ಟು ಸರಿ?. ಇದೀಗ ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರದ್ದು ಇದೇ ಪರಿಸ್ಥಿತಿ. ಇದೀಗ ಅಶ್ವಿನಿ ಗೌಡ ಮರ್ಯಾದೆ ಕೊಡುತ್ತಿಲ್ಲ, ಗೌರವ ಇಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ಜೊತೆಗೆ ಉಪವಾಸ ಕೂಡಾ ಆರಂಭಿಸಿದ್ದಾರೆ.

ಇದನ್ನೂ ಓದಿ:ಪದೇ ಪದೇ ಹೋಗ್ತೀನಿ ಅಂತಾರೆ ಅಶ್ವಿನಿ ಗೌಡ – ಇವರ ಆಸೆ ಈಡೇರಿಸ್ತಾರಾ ಬಿಗ್‌ಬಾಸ್?

ಬಿಗ್ ಬಾಸ್ ಮನೆಯಲ್ಲಿ ಜಾನ್ವಿ ಹಾಗೂ ಅಶ್ವಿನಿ ಗೌಡ ನೇರವಾಗಿ ನಾಮಿನೇಟ್ ಆಗಿದ್ದಾರೆ. ಈ ವಿಚಾರಕ್ಕೆ ಬೇಜಾರೋ.. ಇಲ್ಲಾ, ಗಿಲ್ಲಿ ಮತ್ತು ರಘು ವಿರುದ್ಧ ಹೋರಾಟ ಮಾಡಲು ಸಾಧ್ಯವಿಲ್ಲ ಎಂಬ ಬೇಸರವೋ.. ಮಾತು ಮಾತಿಗೆ ಜಗಳಕ್ಕಿಳಿದ ಅಶ್ವಿನಿ ಗೌಡ ಕೊನೆಗೂ ಉಪವಾಸ ಸತ್ಯಾಗ್ರಹ ಶುರುಮಾಡಿದ್ದಾರೆ. ಅಶ್ವಿನಿ ಗೌಡ ಅವರು ಬಹುತೇಕ ಸಂದರ್ಭದಗಳಲ್ಲಿ ಏಕವಚನ ಬಳಕೆ ಮಾಡುತ್ತಾರೆ. ಆದರೆ, ಅವರಿಗೆ ಯಾರಾದರೂ ಏಕವಚನ ಬಳಕೆ ಮಾಡಿದರೆ ಸಿಟ್ಟು ಬರುತ್ತದೆ. ‘ಮೊದಲು ಗೌರವ ಕೊಡು’ ಎಂದು ಕೇಳುತ್ತಾರೆ. ಇದು ಎಷ್ಟು ಸರಿ ಎಂಬುದು ವೀಕ್ಷಕರ ಪ್ರಶ್ನೆ.

ಗಿಲ್ಲಿ ಏಕವಚನದಲ್ಲಿ ಮಾತಾಡಿದ್ದು ಅಶ್ವಿನಿಗೆ ಸಿಟ್ಟು ತರಿಸಿದೆ. ಆದರೆ, ಗಿಲ್ಲಿಗೆ ಏಕವಚನದಲ್ಲೇ ಬೈದದ್ದು ಲೆಕ್ಕಿಕ್ಕಿಲ್ಲ. ಆದರೆ, ಗಿಲ್ಲಿಯದ್ದೇ ಸಂಪೂರ್ಣ ತಪ್ಪು ಅನ್ನೋ ರೀತಿ ಬಿಂಬಿಸಿ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದರು.

ಇದಾದ ನಂತರ ಕ್ಯಾಪ್ಟನ್ ರಘು ಸರದಿ. ರಘು ಜೊತೆಗಿನ ಜಗಳದಿಂದಾಗಿ ಅಶ್ವಿನಿ ಗೌಡ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಉಪವಾಸಕ್ಕೆ ಮುಂದಾಗಿರುವ ಕ್ಯಾಪ್ಟನ್ ರಘು ಅವರಿಂದ ಅಶ್ವಿನಿ ಗೌಡ ಕ್ಷಮೆ ಬಯಸುತ್ತಿರುವಂತೆ ಕಾಣಿಸುತ್ತಿದೆ. ಊಟ ಮಾಡದೇ ಕುಳಿತ ಅಶ್ವಿನಿ ಗೌಡ ಅವರ ಮನವೊಲಿಸಲು ಜಾನ್ವಿ ಸೇರಿದಂತೆ ಎಲ್ಲಾ ಸದಸ್ಯರು ಪ್ರಯತ್ನಿಸುತ್ತಿದ್ದಾರೆ. ಅಶ್ವಿನಿ ಗೌಡ ಅವರ ಕಾಫಿ ಕಪ್‌ ಹಾಗೆಯೇ ಇತ್ತು, ಅದನ್ನು ತೊಳೆದಿರಲಿಲ್ಲ. ಇದನ್ನು ರಘು ಅವರು ಹೇಳಿದ್ದರು. ಆಗ ಅಶ್ವಿನಿ ಗೌಡ ಅವರು, ಆ ಕಾಫಿ ಕಪ್‌ನಲ್ಲಿ ನನ್ನ ಹೆಸರು ಇದೆ, ನನ್ನ ಕಪ್‌ ಪಕ್ಕದಲ್ಲಿ ಇಟ್ಟುಕೊಂಡು, ಬೇರೆಯವರು ಅವರ ಕಪ್‌ ತೊಳೆದುಕೊಳ್ಳಲಿ ಎಂದು ಹೇಳಿದ್ದರು. ಅಶ್ವಿನಿ ಗೌಡ ಅವರು ನಿನ್ನೆ ರಾತ್ರಿಯೂ ಊಟ ಮಾಡಿಲ್ಲ, ಈಗಲೂ ಊಟ ಮಾಡಿಲ್ಲ ಎಂದು ಜಾಹ್ನವಿ ಅವರು ಹೇಳಿದ್ದಾರೆ. ಹೆಸರು ಕರೆದರೂ ಅವರಿಗೆ ಬೇಸರ ಆಗತ್ತಾ? ಎಂದು ರಘು ಹೇಳಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿರುವಷ್ಟು ದಿನ ಊಟ ಮಾಡಲ್ವಾ? ಎಂದು ಧ್ರುವಂತ್‌ ಪ್ರಶ್ನೆ ಮಾಡಿದ್ದಾರೆ.

ಇಲ್ಲಿ ರಘು ಮಾಡಿದ ತಪ್ಪೇನು ಎಂದು ವೀಕ್ಷಕರು ಕೂಡಾ ಪ್ರಶ್ನೆ ಮಾಡುತ್ತಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳು ಅಂದಮೇಲೆ ಎಲ್ಲರೂ ಸಮಾನರೇ. ಇಲ್ಲಿ ನನಗೆ ಮಾತ್ರ ಗೌರವ ಸಿಗಬೇಕು ಎಂದು ವಾದ ಮಾಡುತ್ತಿರುವ ಅಶ್ವಿನಿ ಗೌಡ ಅವರ ನಡೆ ಮುಂದೆ ಯಾವ ತಿರುವು ಪಡೆಯುತ್ತೋ ಕಾದು ನೋಡಬೇಕಿದೆ.

Sulekha