ಕಿಚ್ಚ ಬೈದ್ರೂ ಅಶ್ವಿನಿ, ಜಾಹ್ನವಿಗೆ ನಾಚಿಕೆ ಇಲ್ವಾ? – ಕಿಚ್ಚನಿಗೆ ಬಿಗ್ ಬಾಸ್ ಸರ್ಪ್ರೈಸ್!

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿಯನ್ನ ಜಾಹ್ನವಿ ಮತ್ತು ಅಶ್ವಿನಿ ಗೌಡ ಸುಖಾಸುಮ್ಮನೆ ಟಾರ್ಗೆಟ್ ಮಾಡಿದ್ದು ನಿಮ್ಗೆಲ್ಲಾ ಗೊತ್ತೇ ಇದೆ. ರಕ್ಷಿತಾ ಶೆಟ್ಟಿ ಮೇಲೆ ದೆವ್ವ ಬಂದಿದೆ, ರಾರಾ ಸಾಂಗ್ ಹೇಳಿ ಡ್ಯಾನ್ಸ್ ಮಾಡ್ತಿದ್ದಾಳೆ ಎಂದೆಲ್ಲ ಕಥೆ ಕಟ್ಟಿದರು. ಅಷ್ಟೇ ಅಲ್ಲ ರಕ್ಷಿತಾ ಬಟ್ಟೆ ತೋರ್ಸಿ ಅವಮಾನ ಮಾಡಿದ್ರು. ನಿನ್ನೆ ಕಿಚ್ಚ ಸುದೀಪ್ ಜಾಹ್ನವಿ ಅಶ್ವಿನಿ ಗೌಡರನ್ನ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ದೆವ್ವ ದ ಕತೆ ಕಟ್ಟಿದವರಿಗೆ ದೆವ್ವ ಬಿಡಿಸಿದ್ದಾರೆ. ಆದ್ರೆ ಕಿಚ್ಚ ಸುದೀಪ್ ಬೈದು, ಬುದ್ದಿ ಮಾತು ಹೇಳಿದ್ರೂ ಅವರಿಬ್ಬರಿಗೆ ತಮ್ಮ ತಪ್ಪಿನ ಅರಿವಾಗಿಲ್ಲ. ತಾವು ತಪ್ಪು ಮಾಡಿದ್ದೀವಿ ಅನ್ನೋ ಪಶ್ಚಾತ್ತಾಪವೂ ಕಾಡ್ತಿಲ್ಲ. ಇದೀಗ ಈ ಬಗ್ಗೆ ವೀಕ್ಷಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇವೆಲ್ಲದ್ರ ನಡುವೆ ಕಿಚ್ಚ ಸುದೀಪ್ಗೆ ಅವರ ಪತ್ನಿ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಅಪ್ಪು ಆ್ಯಪ್ ಟ್ರೈಲರ್ಗೆ ಕಿಚ್ಚನ ಧ್ವನಿ – ಸುದೀಪ್ ಧ್ವನಿಯಲ್ಲಿ ಮೂಡಿ ಬಂತು ಪುನೀತ್ ರಾಜಕುಮಾರ್ ಜೀವನ!
ಗೆಜ್ಜೆ ಸದ್ದು ವಿಚಾರಕ್ಕೆ ಮೂರನೇ ವಾರ ಬಿಗ್ ಬಾಸ್ ಮನೆ ರಣರಂಗವಾಗಿತ್ತು. ಜಾಹ್ನವಿ ಅಶ್ವಿನಿ ಗೌಡ ದೆವ್ವದ ಕತೆ ಕಟ್ಟಿ ರಕ್ಷಿತಾ ಮೇಲೆ ಅಪವಾದ ಹೊರಿಸಿದ್ರು.. ಅಷ್ಟೇ ಅಲ್ಲ.. ಆಕೆ ಬಟ್ಟೆ ತೋರ್ಸಿ ಅವಮಾನ ಮಾಡಿದ್ರು. ಇವರಿಬ್ಬರು ಕೊಟ್ಟ ಟಾರ್ಚರ್ಗೆ ರಕ್ಷಿತಾ ಕಣ್ಣೀರು ಹಾಕಿದ್ರು. ತಮ್ಮ ತಪ್ಪಿಲ್ಲ ಅಂತಾ ಹೇಳಿದ್ರೂ ಗಿಲ್ಲಿಯನ್ನ ಬಿಟ್ಟು ಆಕೆಗೆ ಯಾರೂ ಸಪೋರ್ಟ್ ಮಾಡಿರ್ಲಿಲ್ಲ. ಇದ್ರು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿತ್ತು. ರಕ್ಷಿತಾಳನ್ನ ಟಾರ್ಗೆಟ್ ಮಾಡಿದ ಅಶ್ವಿನಿ ಗೌಡ, ಜಾಹ್ನವಿಗೆ ಕಿಚ್ಚ ಸುದೀಪ್ ಸರಿಯಾಗೇ ಕ್ಲಾಸ್ ತೆಗೆದುಕೊಳ್ಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ನಿನ್ನೆಯ ಎಪಿಸೋಡ್ನಲ್ಲಿ ಕಿಚ್ಚಾ ಸುದೀಪ್ ಇಬ್ಬರನ್ನ ತರಾಟೆಗೆ ತೆಗೆದುಕೊಂಡು..
ಬಿಗ್ಬಾಸ್ನಲ್ಲಿ ರಕ್ಷಿತಾಗೆ ಅವಮಾನ ಅವಮಾನ ಮಾಡಿರೋದಿಕ್ಕೆ ಬಾದ್ಷಾ ಅಶ್ವಿನಿ ಹಾಗೂ ಜಾಹ್ನವಿಗೆ ಕ್ಲಾಸ್ ತೆಗೆದುಕೊಂಡರು. ನಿಮಗೆ ಯಾವಾಗ ಬೇಕೋ ಆಗ ರಕ್ಷಿತಾ ಚಿಕ್ಕವಳು ಅಂತ ಹೇಳ್ತೀರಾ, ಆಮೇಲೆ ದೊಡ್ಡವಳು ಅಂತೀರಾ. ಇದ್ಯಾಕೆ? ನೀವೇ ತಪ್ಪು ಮಾಡಿದ್ದೀರಿ ಎಂದು ಒಪ್ಪಿಕೊಂಡು, ಆಮೇಲೆ ಮತ್ತೆ ರಕ್ಷಿತಾ ಶೆಟ್ಟಿ ಅವರು ಕೆಣಕಿದ್ರೆ ಆಗ ನೀವು ಮಾತನಾಡಿದ್ರೆ ಅದು ಚರ್ಚೆಯಾಗುತ್ತಿತ್ತು. ಸಿಕ್ಕಾಪಟ್ಟೆ ಪರ್ಸನಲ್ ಅಟ್ಯಾಕ್ ಆಗಿದೆ. ನಿನ್ನ ಬಟ್ಟೆ ನೋಡಿದ್ರೆ, ನೀನು ಎಲ್ಲಿಂದ ಬಂದಿದ್ದೀಯಾ ಅಂತ ಗೊತ್ತಾಗತ್ತೆ. She is nothing but s, ಈಡಿಯಟ್ ಅಂತೆಲ್ಲ ಬೈಯ್ತೀರಿ. ಅಂದು ಕಾಕ್ರೋಚ್ ಸುಧಿ ಯಮ್ಮ ಎಂದಾಗ ಹೆಸರು ಇದೆ ಹೇಳಿ ಅಂತ ಹೇಳ್ತೀರಾ, ಆದರೆ ನೀವು ರಕ್ಷಿತಾಗೆ ಈಡಿಯಟ್, ಕಾರ್ಟೂನ್ ಅಂತ ಕರೆಯುತ್ತೀರಾ.. ಈ ಮನೆ ನಿಮ್ಮದು, ಆ ಮನೆಯಲ್ಲಿ ಇರುವವರು ನೀವು ಎಂದಾಗ ಅಲ್ಲಿರುವ ಕ್ಯಾಮರಾಗಳು ನಿಮ್ಮದೇ. ಅದು ಯಾರೊಬ್ಬ ಅಪ್ಪನ ಆಸ್ತಿಯಲ್ಲ. ಬೇರೆಯವರ ಗೌರವ ತೆಗೆಯದೆ ಏನು ಬೇಕಿದ್ರೂ ಮಾಡಿ. ಆದರೆ ಒಬ್ಬನ ಮರ್ಯಾದೆ, ಗೌರವ, ಅಸ್ತಿತ್ವ ಇನ್ನೊಬ್ಬನ ಆಟದ ಸಾಮಾನು ಆಗಬಾರದು. ನೀವು ಮನೆಯೊಳಗಡೆ ಇದ್ದಾಗ ನಿಮ್ಮ ಗೌರವ ನಮ್ಮ ಜವಾಬ್ದಾರಿ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಇನ್ನು ಇಷ್ಟೆಲ್ಲಾ ಆದ್ರೂ ಅಶ್ವಿನಿ ಗೌಡ, ಜಾಹ್ನವಿ ಏನೂ ಆಗದಂತೆ ಇದ್ರು. ತಾವು ತಪ್ಪು ಮಾಡಿದ್ದೇವೆ ಅನ್ನೋ ಪಶ್ಚಾತ್ತಾಪ ಕೂಡ ಅವರಿಗೆ ಕಾಡ್ತಿಲ್ಲ. ಇದನ್ನ ನಿನ್ನೆ ಮಂಜು ಭಾಷಿಣಿ ಸುದೀಪ್ ಬಳಿ ಕೂಡ ಹೇಳಿದ್ರು. ಅಶ್ವಿನಿ ಗೌಡ, ಜಾಹ್ನವಿ ಅವರಿಗೆ ಪಶ್ಚಾತ್ತಾಪವೇ ಆಗಿಲ್ಲ, ಸುಮ್ಮನೆ ನಿಮ್ಮ ಮುಂದೆ ಕ್ಷಮೆ ಕೇಳಿದ್ದಾರೆ ಎಂದು ಮಂಜುಭಾಷಿಣಿ ಅವರು ಹೇಳಿದ್ದರು. ಆಗ ಅಶ್ವಿನಿ ಅವರು, ಪಶ್ಚಾತ್ತಾಪವನ್ನು ಹೇಗೆ ತೋರಿಸೋದು ಮುಂದಿನ ದಿನಗಳಲ್ಲಿ ತಿದ್ದಿಕೊಂಡು ಬದಲಾಗುವೆ ಎಂದಿದ್ದಾರೆ. ಇದೀಗ ಇವರಿಬ್ಬರ ವರ್ತನೆ ಬಗ್ಗೆ ವೀಕ್ಷಕರು ಅಸಮಧಾನ ಹೊರ ಹಾಕಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಯಾರಿಗಾದ್ರೂ ತಮ್ಮ ತಪ್ಪಿನ ಅರಿವಾಗುತ್ತೆ. ಆದ್ರೆ ಇವರಿಬ್ರು ಏನೂ ಆಗಿಲ್ಲ ಅನ್ನೋ ತರ ಇದ್ದಾರೆ.. ಒಂಚೂರು ನಾಚಿಕೆಯೂ ಇಲ್ವಾ ಅಂತಾ ಕಾಮೆಂಟ್ ಮಾಡ್ತಿದ್ದಾರೆ.
ಇನ್ನು ಬಿಗ್ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ಅವರ 25ನೇ ಮದುವೆ ವಾರ್ಷಿಕೋತ್ಸವ ಆಚರಿಸಲಾಗಿದೆ. ಪ್ರಿಯಾ ಸುದೀಪ್ ಅವರನ್ನ ಬಿಗ್ ಬಾಸ್ ವೇದಿಕೆಗೆ ಕರೆಸಿ ಸರ್ಪ್ರೈಸ್ ನೀಡಲಾಗಿದೆ. ಪ್ರಿಯಾ ವೇದಿಕೆ ಬರುತ್ತಿದ್ದಂತೆ ಸುದೀಪ್ ಅವರ ತಂದೆ ಎಂ.ಸಂಜೀವ್ ಅವರ ವಿಡಿಯೋವನ್ನು ಪ್ಲೇ ಮಾಡಲಾಗಿದೆ. ಮನೆಗೆ ಬಂದಿದ್ದು ಸೊಸೆ ಅಂತ ಹೇಳಲೋ, ಮಗಳು ಅಂತ ಹೇಳಲೋ ತಿಳಿಯುತ್ತಿಲ್ಲ. ಪ್ರಿಯಾ ನಮ್ಮನೆಯ ಭಾಗ್ಯ ದೇವತೆ. ಇದೇ ರೀತಿ ಒಗ್ಗಟ್ಟಿನಿಂದ ಬಾಳಿ ಎಂದು ಮಗ ಮತ್ತು ಸೊಸೆಗೆ ಎಂ.ಸಂಜೀವ್ ಆಶೀರ್ವದಿಸಿದ್ದಾರೆ. ಮಾವ ಸಂಜೀವ್ ಅವರ ಮಾತುಗಳನ್ನು ಕೇಳಿ ಪ್ರಿಯಾ ಸುದೀಪ್ ಭಾವುಕರಾಗಿ ಥ್ಯಾಂಕ್ಸ್ ಅಪ್ಪಾ ಎಂದು ಹೇಳಿದ್ದಾರೆ. ಈ ದಿನದ ವಿಶೇಷತೆ ಏನಂದ್ರೆ ಕಳೆದ ವರ್ಷ ನನ್ನ ತಾಯಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಜೀವಂತವಾಗಿ ನೋಡಿದ ದಿನ ಎಂದು ಹೇಳಿ ಸುದೀಪ್ ಸಹ ಭಾವುಕರಾದರು. ಮದುವೆ ವಾರ್ಷಿಕೋತ್ಸವದ ಹಿನ್ನೆಲೆ ಪತಿಗಾಗಿ ಪ್ರಿಯಾ ಹಾಡು ಸಹ ಹೇಳಿದ್ದಾರೆ. ಬಿಗ್ಬಾಸ್ ಸಹ ಕಿಚ್ಚ ದಂಪತಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ.

ನೋಡಿರಿ

