60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಆಶಿಷ್ ವಿದ್ಯಾರ್ಥಿ – ರೂಪಾಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಹುಭಾಷಾ ನಟ

60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಆಶಿಷ್ ವಿದ್ಯಾರ್ಥಿ – ರೂಪಾಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಹುಭಾಷಾ ನಟ

ಬಹುಭಾಷಾ ನಟ, ಹಾಗೂ ಫೇಮಸ್ ಫುಡ್ ವ್ಲಾಗರ್ ಆಶಿಷ್ ವಿದ್ಯಾರ್ಥಿ ಎರಡನೇ ವಿವಾಹವಾಗಿದ್ದಾರೆ. ತಮ್ಮ 60ನೇ ವಯಸ್ಸಿನಲ್ಲಿ ಅಸ್ಸಾಂ ಮೂಲದ ರೂಪಾಲಿ ಬರುವ ಎಂಬವರನ್ನು ಆಶಿಷ್ ವಿದ್ಯಾರ್ಥಿ ಮದುವೆಯಾಗಿದ್ದಾರೆ. ಮೇ 25ರಂದು ಸರಳವಾಗಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೀವನದ ಈ ಹಂತದಲ್ಲಿ ರೂಪಾಲಿಯೊಟ್ಟಿಗೆ ವಿವಾಹವಾಗಿರುವುದು ಬಹಳ ಖುಷಿಯಾಗಿದೆ ಎಂದು ಆಶಿಷ್ ವಿದ್ಯಾರ್ಥಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕಾನ್ ಫೆಸ್ಟಿವಲ್‌ ನಲ್ಲಿ ವಿಚಿತ್ರ ಗೌನ್‌ ಧರಿಸಿದ್ದ ನಟಿ ಐಶ್ವರ್ಯಾ ರೈ – ‘ಕಾಸ್ಟ್ಯೂಮ್ ಗುಲಾಮರುʼ ಎಂದಿದ್ಯಾಕೆ ವಿವೇಕ್‌ ಅಗ್ನಿಹೋತ್ರಿ

ಗುವಾಹಟಿಯವರಾಗಿರುವ ರೂಪಾಲಿ ಬರುವ ಫ್ಯಾಷನ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊಲ್ಕೊತ್ತಾದ ಅಪ್​ಸ್ಕೇಲ್ ಫ್ಯಾಷನ್ಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ರೂಪಾಲಿ ಹಾಗೂ ಆಶಿಷ್​ರ ವಿವಾಹ ಸಹ ಕೊಲ್ಕತ್ತದಲ್ಲಿ ನಡೆದಿದೆ. ಆಶಿಷ್ ವಿದ್ಯಾರ್ಥಿಗೆ ಇದು ಎರಡನೇ ಮದುವೆ. ಈ ಹಿಂದೆ ನಟಿ ಶಕುಂತಲಾ ಅವರ ಪುತ್ರಿ ರಜೋಶಿ ಜೊತೆಗೆ ಆಶಿಷ್ ವಿದ್ಯಾರ್ಥಿ ವಿವಾಹವಾಗಿದ್ದರು. ಹಲವು ವರ್ಷಗಳ ದಾಂಪತ್ಯದ ಬಳಿಕ ಇಬ್ಬರೂ ದೂರಾದರು.

ಆಶಿಷ್ ವಿದ್ಯಾರ್ಥಿ ಕನ್ನಡ ಸೇರಿದಂತೆ 11 ಭಾಷೆಗಳ ಸುಮಾರು 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಕನ್ನಡದಲ್ಲೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಕೆ 47, ಕೋಟಿಗೊಬ್ಬ, ನಂದಿ, ದುರ್ಗಿ, ಆಕಾಶ್, ನಮ್ಮಣ್ಣ, ಆ ದಿನಗಳು, ಶಕ್ತಿ, ಬಚ್ಚನ್ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

 

suddiyaana