ಆಷಾಢ ಮಾಸದಲ್ಲಿ ನೀವು ಮಾಡಬೇಕಾದ ಕೆಲಸಗಳೇನು ಗೊತ್ತಾ?

ಆಷಾಢ ಮಾಸವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ವಿಶೇಷ ಮಹತ್ವ ಹೊಂದಿರುವ ಮಾಸವಾಗಿದೆ. ಧಾರ್ಮಿಕ ಆಚರಣೆಗಳ ಜೊತೆಗೆ ಜ್ಯೋತಿಷ್ಯ ದೃಷ್ಟಿಯಿಂದಲೂ ಈ ತಿಂಗಳು ಅತ್ಯಂತ ಶುಭಕರವೆಂದು ಪರಿಗಣಿಸಲಾಗುತ್ತದೆ. ಹಾಗಾದ್ರೆ ಆಷಾಢ ಮಾಸದಲ್ಲಿ ಮಾಡಬೇಕಾದ ಕೆಲಸವೇನು ಅನ್ನೋದ್ದನ್ನ ನೋಡೋಣ.
ಇದನ್ನೂ ಓದಿ: ಆಷಾಢ ಮಾಸದಲ್ಲಿ ಗಂಡ ಹೆಂಡತಿ ಯಾಕೆ ಜೊತೆಗಿರಬಾರದು ಗೊತ್ತಾ? – ವೈಜ್ಞಾನಿಕ ಕಾರಣವೇನು?
ಈ ಮಾಸದಲ್ಲಿ ಶ್ರೀ ಮಹಾವಿಷ್ಣು, ಶಿವ, ದುರ್ಗಾದೇವಿ ಹಾಗೂ ಶ್ರೀ ಹನುಮಂತನನ್ನು ಭಕ್ತಿಯಿಂದ ಪೂಜಿಸುವುದು ಉತ್ತಮವೆಂದು ಹೇಳಲಾಗಿದೆ. ಆಷಾಢ ಮಾಸದಲ್ಲಿ ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿ, ಖಾಲಿ ಹೊಟ್ಟೆಯಲ್ಲಿ ಸೂರ್ಯದೇವರಿಗೆ ಅರ್ಘ್ಯ ಸಮರ್ಪಿಸುವುದು ಶುಭಕರ. ಇದರಿಂದ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ದೈಹಿಕ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ.
ಆಷಾಢ ಮಾಸದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅಗತ್ಯವಿರುವವರಿಗೆ ಆಹಾರ, ದಕ್ಷಿಣೆ ಅಥವಾ ಅಗತ್ಯ ವಸ್ತುಗಳನ್ನು ದಾನ ಮಾಡಬಹುದು. ವಿಶೇಷವಾಗಿ ಕೊಡೆ, ನೆಲ್ಲಿಕಾಯಿ, ಪಾದರಕ್ಷೆ, ಉಪ್ಪು ಮೊದಲಾದ ವಸ್ತುಗಳನ್ನು ದಾನ ಮಾಡಿದರೆ ವಿಷ್ಣುವಿನ ಅನುಗ್ರಹ ಲಭಿಸಿ, ಜೀವನದಲ್ಲಿ ಶುಭ ಫಲಗಳು ದೊರೆಯುತ್ತವೆ ಎಂದು ನಂಬಲಾಗಿದೆ.
ಏಕಾದಶಿ, ಗುಪ್ತ ನವರಾತ್ರಿ, ಆಷಾಢ ಪೂರ್ಣಿಮೆ, ಅಮಾವಾಸ್ಯೆ ಹಾಗೂ ಯೋಗಿನಿ ಏಕಾದಶಿ ಮೊದಲಾದ ಪವಿತ್ರ ವ್ರತ ಸಾಧ್ಯವಾದರೆ ಉಪವಾಸ ಮಾಡಿ, ಪೂಜೆ ಸಲ್ಲಿಸಿ. ಇದರಿಂದ ಮನೋಕಾಮನೆಗಳು ಈಡೇರುತ್ತವೆ ಎಂದು ಧಾರ್ಮಿಕ ನಂಬಿಕೆ ಹೇಳುತ್ತದೆ.

ನೋಡಿರಿ

