ಆಷಾಢ ಮಾಸದಲ್ಲಿ ಗಂಡ ಹೆಂಡತಿ ಯಾಕೆ ಜೊತೆಗಿರಬಾರದು ಗೊತ್ತಾ? – ವೈಜ್ಞಾನಿಕ ಕಾರಣವೇನು?

ಆಷಾಢ ಮಾಸ ಬಂತು ಅಂದ್ರೆ ಹೊಸ ಮಧು ಮಕ್ಕಳಿಗೆ ವನವಾಸ. ಗಂಡ ಹೆಂಡತಿ ಒಟ್ಟಿಗೆ ಇರಬಾರದು. ಹೆಂಡತಿ ತವರು ಮನೆಗೆ ಹೋಗಬೇಕು ಅನ್ನೋ ಶಾಸ್ತ್ರ ಇದೆ. ಆದ್ರೆ ಸಾಕಷ್ಟು ಜನಕ್ಕೆ ಆಷಾಢ ಮಾಸದ ವೈಜ್ಞಾನಿಕ ಕಾರಣ ಗೊತ್ತಿಲ್ಲ. ನಾವು ಯಾಕೆ ಆಷಾಢ ಮಾಸದಲ್ಲಿ ಗಂಡ ಹೆಂಡತಿ ಜೊತೆಗೆ ಇರಬಾರದು? ಅನ್ನೋದ್ದನ್ನ ನೋಡೋಣ.
ಇದನ್ನೂ ಓದಿ: ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಪ್ರತಿ ಶುಕ್ರವಾರ ಈ ಮಂತ್ರ ಪಠಿಸಿ
ಆಷಾಢ ಮಾಸದಲ್ಲಿ ಅತ್ತೆ ಮತ್ತು ಸೊಸೆ ಒಂದೇ ಮನೆಯಲ್ಲಿ ಇರಬಾರದು, ಹಾಗೆಯೇ ಹೊಸದಾಗಿ ಮದುವೆಯಾದ ನವ ದಂಪತಿಯನ್ನು ದೂರ ಇಡಬೇಕು ಎಂಬ ನಂಬಿಕೆಯಿದೆ. ಇದಕ್ಕೆ ಜ್ಯೋತಿಷ್ಯದ ಜೊತೆಗೆ ವೈಜ್ಞಾನಿಕ ಕಾರಣವೂ ಇದೆ. ಆಷಾಢ ಮಾಸದಲ್ಲಿ ಮಹಿಳೆ ಗರ್ಭಧರಿಸಿದರೆ, ಒಂಬತ್ತು ತಿಂಗಳ ನಂತರ ಬೇಸಿಗೆ ಬರುತ್ತೆ.. ಮಾರ್ಚ್-ಏಪ್ರಿಲ್ ನಲ್ಲಿ ಮಗುವಿನ ಜನನವಾಗುತ್ತದೆ. ಬಿಸಿಲಿನ ತಾಪವು ಬಾಣಂತಿ ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬ ದೂರದೃಷ್ಟಿಯಿಂದ ನಮ್ಮ ಹಿರಿಯರು ಈ ನಿಯಮವನ್ನು ರೂಪಿಸಿದ್ದರು.
ಆಷಾಢ ಮಾಸವು ಮುಂಗಾರು ಮಳೆಯ ಆರಂಭದ ಸಮಯ. ಬಿರುಗಾಳಿ, ಮಳೆಯಿಂದಾಗಿ ವಾತಾವರಣದಲ್ಲಿ ಬದಲಾವಣೆಗಳಾಗುತ್ತವೆ. ಈ ಸಮಯದಲ್ಲಿ ಕಲುಷಿತ ನೀರು ಮತ್ತು ಗಾಳಿಯಿಂದಾಗಿ ಕಾಲರಾ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ವೇಗವಾಗಿ ಹರಡುವ ಅಪಾಯವಿರುತ್ತದೆ. ಜೊತೆಗೆ, ಮನುಷ್ಯನ ಜೀರ್ಣಶಕ್ತಿ ಈ ಕಾಲದಲ್ಲಿ ದುರ್ಬಲವಾಗಿರುತ್ತದೆ.
ಇಂತಹ ಸಮಯದಲ್ಲಿ ಮದುವೆ ಅಥವಾ ಇತರ ಸಮಾರಂಭಗಳನ್ನು ಏರ್ಪಡಿಸಿ, ಸಿಹಿ ಮತ್ತು ಭಾರಿ ಭೋಜನ ಮಾಡಿದರೆ ಜೀರ್ಣಕ್ರಿಯೆ ಹದಗೆಟ್ಟು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಕಾರಣಕ್ಕಾಗಿಯೇ ಆಷಾಢದಲ್ಲಿ ಶುಭ ಕಾರ್ಯಗಳನ್ನು ನಿಷೇಧಿಸಿ, ಲಘು ಆಹಾರ, ಉಪವಾಸ ಮತ್ತು ವ್ರತಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಆಷಾಢ ಮಾಸವನ್ನು ಕೇವಲ ‘ಅಶುಭ’ ಎಂದು ಭಾವಿಸುವುದು ತಪ್ಪು. ಆಡಂಬರಗಳನ್ನು ಬದಿಗೊತ್ತಿ, ದೇವರ ಧ್ಯಾನ ಮತ್ತು ದೈಹಿಕ ಆರೋಗ್ಯದ ಕಡೆಗೆ ಗಮನಹರಿಸಲು ಋಷಿಮುನಿಗಳು ರೂಪಿಸಿದ ಅದ್ಭುತವಾದ ವ್ಯವಸ್ಥೆ ಇದಾಗಿದೆ.

ನೋಡಿರಿ

