AIMIM ಮುಖ್ಯಸ್ಥನ ಮನೆ ಮೇಲೆ ನಾಲ್ಕನೇ ಬಾರಿಗೆ ಕಲ್ಲೆಸೆತ – ಓವೈಸಿಯನ್ನ ಟಾರ್ಗೆಟ್ ಮಾಡಿದ್ಯಾರು..!?

AIMIM ಮುಖ್ಯಸ್ಥನ ಮನೆ ಮೇಲೆ ನಾಲ್ಕನೇ ಬಾರಿಗೆ ಕಲ್ಲೆಸೆತ – ಓವೈಸಿಯನ್ನ ಟಾರ್ಗೆಟ್ ಮಾಡಿದ್ಯಾರು..!?

AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ನಿವಾಸದ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಭಾನುವಾರ ಸಂಜೆ ಅಪರಿಚಿತರು ಕಲ್ಲು ಎಸೆದಿದ್ದು ಕಿಟಕಿಗಳಿಗೆ ಹಾನಿಯಾಗಿದೆ ಎಂದು ಓವೈಸಿ ಆರೋಪಿಸಿದ್ದಾರೆ.  ಘಟನೆಯ ನಂತರ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ವಿದೇಶಿ ಪ್ರಯಾಣದಲ್ಲಿ ದಾಖಲೆ ಬರೆದ ಭಾರತೀಯರು – ಬರೋಬ್ಬರಿ $10 ಬಿಲಿಯನ್ ಖರ್ಚು..!

ದೆಹಲಿಯ ಅಶೋಕ ರಸ್ತೆಯಲ್ಲಿರುವ ಎಐಎಂಐಎಂ ಮುಖ್ಯಸ್ಥರ ನಿವಾಸದಲ್ಲಿ ಭಾನುವಾರ ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಹೆಚ್ಚುವರಿ ಡಿಸಿಪಿ ನೇತೃತ್ವದ ದೆಹಲಿ ಪೊಲೀಸರ ತಂಡ ಅವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದುಷ್ಕರ್ಮಿಗಳ ಗುಂಪೊಂದು ತಮ್ಮ ನಿವಾಸದ ಮೇಲೆ ಕಲ್ಲು ಎಸೆದು ಕಿಟಕಿಗಳನ್ನು ಹಾನಿಗೊಳಿಸಿದೆ ಎಂದು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಓವೈಸಿ ದೂರು ನೀಡಿದ್ದಾರೆ. ನಾನು ಭಾನುವಾರ ನಿವಾಸಕ್ಕೆ  ಹಿಂತಿರುಗಿದಾಗ ಕಿಟಕಿಗಳ ಗಾಜು ಒಡೆದಿದ್ದು, ಕಲ್ಲುಗಳು ಬಿದ್ದಿರುವುದನ್ನು ಗಮನಿಸಿದೆ. ಹಾಗೂ ಕಲ್ಲು ಎಸೆತದ ಬಗ್ಗೆ  ಮನೆಯ ಸಹಾಯಕರು ಮಾಹಿತಿ ನೀಡಿದರು. ದುಷ್ಕರ್ಮಿಗಳ ಗುಂಪು ಭಾನುವಾರ ಸಂಜೆ 5:30 ರ ಸುಮಾರಿಗೆ ನಿವಾಸದ ಮೇಲೆ ಕಲ್ಲು ಎಸೆದಿದೆ ಎಂದು ಆರೋಪಿಸಿದ್ದಾರೆ.

ಘಟನೆ ಸಂಬಂಧ ಮಾತನಾಡಿರುವ ಎಐಎಂಐಎಂ ಮುಖ್ಯಸ್ಥ ಓವೈಸಿ ‘ತಮ್ಮ ನಿವಾಸದ ಮೇಲೆ ಇದು ನಾಲ್ಕನೇ ದಾಳಿಯಾಗಿದೆ. ನನ್ನ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಸಿಸಿಟಿವಿ ಕ್ಯಾಮರಾಗಳಿದ್ದು ಅವುಗಳನ್ನ ಪರಿಶೀಲಿಸಿ ತಪ್ಪಿತಸ್ಥರನ್ನ ಕೂಡಲೇ ಬಂಧಿಸಬೇಕು. ಪದೇಪದೆ ಇಂತಹ ಘಟನೆಗಳು ನಡೆಯುತ್ತಿದ್ದು ಭದ್ರತೆಯನ್ನ ಹೆಚ್ಚಿಸಬೇಕು’ ಎಂದು ಕೋರಿದ್ದಾರೆ.

suddiyaana