ಟ್ರಂಪ್ ಮಾತೇ ಮೋದಿಗೆ ಮುಳ್ಳು? – ‘ಕೈ’ ಜಾಲದಲ್ಲಿ ಸಿಕ್ಕಿಬೀಳ್ತಾರಾ ಪ್ರಧಾನಿ?
ಸಂಸತ್ ನಲ್ಲಿ ಈಗ ಅಸಲಿ ಯುದ್ಧ

ಟ್ರಂಪ್ ಮಾತೇ ಮೋದಿಗೆ ಮುಳ್ಳು? – ‘ಕೈ’ ಜಾಲದಲ್ಲಿ ಸಿಕ್ಕಿಬೀಳ್ತಾರಾ ಪ್ರಧಾನಿ?ಸಂಸತ್ ನಲ್ಲಿ ಈಗ ಅಸಲಿ ಯುದ್ಧ

ಜುಲೈ 21 ಅಂದ್ರೆ ಇವತ್ತಿಂದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಳೆಗಾಲದ ಅಧಿವೇಶನ ಆರಂಭ ಆಗಿದೆ. ಸೆಷನ್ ಸ್ಟಾರ್ಟ್ ಆಗೋಕೂ ಒಂದು ದಿನ ಮುನ್ನ ಅಂದ್ರೆ ಭಾನುವಾರ ಜೆಪಿ ನಡ್ಡಾ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆದಿದೆ. 51 ಪಕ್ಷಗಳ 54 ಪ್ರತಿನಿಧಿಗಳು ಭಾಗವಹಿಸಿದ್ರು. ಸಭೆಯಲ್ಲಿ ಸರ್ಕಾರ ಮಸೂದೆಗಳ ಮಂಡನೆ ಹಾಗೇ ಯಾವೆಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದೆ ಅನ್ನೋ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದ್ರು. ವಿಪಕ್ಷಗಳೂ ಕೂಡ ಮೇಜರ್ ಡವಲಪ್​ಮೆಂಟ್ಸ್​ಗಳ ಲಿಸ್ಟ್ ಮುಂದಿಟ್ಟು ಈ ವಿಚಾರಗಳ ಬಗ್ಗೆ ಚರ್ಚೆ ಮಾಡೋಕೆ ಅವಕಾಶ ಕೊಡ್ಬೇಕು ಅಂತಾ ಕೇಳಿವೆ. ಸೋ ಅಲ್ಲಿಗೆ ಸೆಷನ್​ನಲ್ಲಿ ಈ ಸಲ ಗಲಾಟೆ, ಗದ್ಧಲ ಅಂತೂ ಫಿಕ್ಸ್ ಆಗಿದೆ. ಇನ್ನು ಅಧಿವೇಶನ ಆರಂಭಕ್ಕೂ ಮುನ್ನ ಮಾತ್ನಾಡಿದ ಮೋದಿ ಬಾಹ್ಯಾಕಾಶ ಕಾರ್ಯಾಚರಣೆ ಬಗ್ಗೆ ಮಾತನಾಡಿದ್ರು. ಹಾಗೇ ಆಪರೇಷನ್ ಸಿಂಧೂರ್ ವಿಚಾರವನ್ನೂ ಪ್ರಸ್ತಾಪಿಸಿದ್ರು.

ಇದನ್ನೂ ಓದಿ : 2026ರ ಐಪಿಎಲ್ ಗೆ RCBಯಲ್ಲೂ ಬಾರೀ ಬದಲಾವಣೆ – ಮೂವರು ಆಟಗಾರರು ತಂಡದಿಂದ ರಿಲೀಸ್?

ಯುದ್ಧ ನಿಲ್ಲಿಸಿದ್ದೇ ನಾನು.. ಟ್ರಂಪ್ ಮಾತೇ ಕಾಂಗ್ರೆಸ್ ಗೆ ಆಯುಧ!

ಈ ಬಾರಿಯ ಸಂಸತ್ ಮುಂಗಾರು ಅಧಿವೇಶನದಲ್ಲಿ ಡೊನಾಲ್ಡ್ ಟ್ರಂಪ್ ಹೇಳಿಕೆ ಕಿಚ್ಚು ಹಚ್ಚೋದ್ರಲ್ಲಿ ಡೌಟೇ ಇಲ್ಲ. ಕಾಂಗ್ರೆಸ್​ ಅಂತೂ ಟ್ರಂಪ್ ಹೇಳಿದ್ದ ಒಂದೊಂದು ಮಾತನ್ನೂ ಲಿಸ್ಟ್ ಮಾಡ್ಕೊಂಡು ಕಾಯ್ತಾ ಇದೆ. ಭಾರತ ನಾನು ಹೇಳಿದಂತೆ ಕೇಳುತ್ತೆ ಎಂದು ಜಗತ್ತಿನ ಮುಂದೆ ಪೊಟ್ರೇ ಮಾಡ್ತಾ ಇರೋ ಟ್ರಂಪ್ ಅಸಲಿ ಆಟ ಬೇರೇನೇ ಇದೆ. ಅದೇನು ಅಂತಾ ಹೇಳೋಕು ಮುನ್ನ ಆಪರೇಷನ್ ಸಿಂಧೂರ್ ಬಗ್ಗೆ ಒಂದ್ಸಲ ಗ್ಲ್ಯಾನ್ಸ್ ಮಾಡೋಣ.

ಕಾಂಗ್ರೆಸ್ ಕೈಯಲ್ಲಿ ಟ್ರಂಪ್ ಕಾರ್ಡ್!

ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ ​ನಲ್ಲಿ ದಾಳಿ

ಪ್ರತೀಕಾರವಾಗಿ ಪಾಕ್ ಆಕ್ರಮಿತ ಉಗ್ರ ನೆಲೆಗಳನ್ನ ದ್ವಂಸ

ಭಾರತ ಮತ್ತು ಪಾಕಿಸ್ತಾನ ನಡುವೆ ಅಘೋಷಿತ ಯುದ್ಧ ಆರಂಭ

ಅಫಿಶಿಯಲ್ ಯುದ್ಧ ಅನೌನ್ಸ್ ಆಗೇ ಬಿಡುತ್ತೆ ಅನ್ನುವಾಗ್ಲೇ ಟ್ರಂಪ್ ಎಂಟ್ರಿ

ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷವನ್ನ ನಿಲ್ಲಿಸಿದ್ದೇ ನಾನು

ಎರಡು ರಾಷ್ಟ್ರಗಳ ಜೊತೆ ವ್ಯಾಪಾರ ವಹಿವಾಟು ಬಂದ್ ಮಾಡೋದಾಗಿ ಎಚ್ಚರಿಕೆ

ಪ್ರಧಾನಿ ಮೋದಿಯವರಾಗ್ಲಿ ಅಥವಾ ಕೇಂದ್ರ ಸರ್ಕಾರದಿಂದ ಬರದ ಸ್ಪಷ್ಟನೆ

ಟ್ರಂಪ್ ಪದೇಪದೇ ಯುದ್ಧ ನಿಲ್ಲಿಸಿದ್ದೇ ನಾನು ಅಂತಾ ಕೊಚ್ಚಿಕೊಳ್ಳುತ್ತಿದ್ರು

ಟ್ರಂಪ್ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಕರೆ ಮಾಡಿ ಸ್ಪಷ್ಟನೆ

ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಪರಿಹರಿಸಿಕೊಳ್ಳಲಿವೆ ಎಂದು ಸ್ಪಷ್ಟನೆ

ಭಾರತ- ಪಾಕಿಸ್ತಾನ ಸಂಘರ್ಷದ ವೇಳೆ 5 ಫೈಟರ್ ಜೆಟ್ ಹೊಡೆದುರುಳಿಸಲಾಗಿತ್ತು

ಟ್ರಂಪ್ ಹೇಳಿಕೆ ಇಷ್ಟೊಂದು ಮಹತ್ವ ಪಡೆಯೋಕೆ ಕಾರಣನೂ ಇದೆ. ಭಾರತದ 5 ಯುದ್ಧವಿಮಾನ ಹೊಡೆದುರುಳಿಸಿದ್ದಾಗಿ ಪಾಕ್‌ ಹೇಳಿತ್ತಾದರೂ ಭಾರತ ಅದನ್ನು ತಳ್ಳಿಹಾಕಿತ್ತು. ಅಷ್ಟೇ ಅಲ್ಲ ಭಾರತ ಮತ್ತು ಪಾಕ್‌ ನಡುವಿನ ಕದನ ವಿರಾಮ ಘೋಷಣೆಯಾದ ಬಳಿಕ ಅಂದರೆ ಮೇ 10ರ ನಂತರ ಈ ಯುದ್ಧ ನಿಲ್ಲಲು ತಮ್ಮ ಮಧ್ಯಸ್ಥಿಕೆಯೇ ಕಾರಣ ಎಂದು ಟ್ರಂಪ್‌ ಅನೇಕ ಬಾರಿ ಹೇಳಿಕೊಂಡಿದ್ದರು. ವ್ಯಾಪಾರ ಒಪ್ಪಂದ ಮುಂದಿಟ್ಟುಕೊಂಡು ಎರಡೂ ದೇಶಗಳ ನಡುವಿನ ಯುದ್ಧ ನಿಲ್ಲಿಸಿದ್ದಾಗಿ ಹೇಳಿದ್ದರು. ಆದರೆ ಭಾರತ ಮಾತ್ರ ಟ್ರಂಪ್‌ ವಾದವನ್ನು ತಿರಸ್ಕರಿಸುತ್ತಲೇ ಬಂದಿದೆ. ಪಾಕಿಸ್ತಾನ ಕೇಳಿಕೊಂಡಿದ್ದಕ್ಕೆ ಕದನ ವಿರಾಮದ ಪ್ರಸ್ತಾಪ ಒಪ್ಪಿದ್ದಾಗಿ ಹೇಳಿಕೊಂಡಿದೆ. ಆದ್ರೆ ಜುಲೈ 19ರಂದು ಕೂಡ ಟ್ರಂಪ್ ಮತ್ತೆ ಅದನ್ನೇ ಹೇಳಿದ್ರು. ಕಳೆದ 70 ದಿನಗಳಲ್ಲಿ ಟ್ರಂಪ್ 24ನೇ ಬಾರಿಗೆ ಯುದ್ಧ ನಿಲ್ಲಿಸಿದ್ದಾಗಿ ಹೇಳ್ತಿದ್ದಾರೆ. ಟ್ರಂಪ್‌ ಜತೆ ಆತ್ಮೀಯ ಸಂಬಂಧ ಹೊಂದಿರುವ ಮೋದಿ ಅವರು ಈ ಹೇಳಿಕೆಗೆ ಸಂಸತ್ತಿನಲ್ಲಿ ಉತ್ತರ ನೀಡಬೇಕು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಪಟ್ಟು ಹಿಡಿದಿದ್ದಾರೆ.

ಇನ್ನು ಸೆಷನ್​ನಲ್ಲಿ ಇಷ್ಟೇ ಅಲ್ಲದೆ ಹಲವು ವಿಚಾರಗಳ ಚರ್ಚೆ ನಡೆಯಲಿದೆ. ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಈ ಮಧ್ಯೆ ಪ್ರತಿಪಕ್ಷಗಳು ಸದನದಲ್ಲಿ ಮತದಾನದ ಹಕ್ಕಿನ ಬಗ್ಗೆ ಚರ್ಚೆಗೆ ಒತ್ತಾಯಿಸಿವೆ. ಹಾಗೇ ಸಭೆಯಲ್ಲಿ ವಿರೋಧ ಪಕ್ಷಗಳು ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ರಚಿಸಲಾದ ಎರಡು- Front axle ಬಗ್ಗೆಯೂ ಚರ್ಚೆಗೆ ಒತ್ತಾಯಿಸಿವೆ. ಈಶಾನ್ಯ ರಾಜ್ಯ ಮಣಿಪುರದ ಪರಿಸ್ಥಿತಿಯನ್ನು ಸದನದಲ್ಲಿ ಚರ್ಚಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಜೊತೆಗೆ ಅಹಮದಾಬಾದ್​ನ ಏರ್ ಇಂಡಿಯಾ ವಿಮಾನ ದುರಂತದ ಬಗ್ಗೆ ಪ್ರಸ್ತಾಪಿಸಲಿವೆ. ಈ ವಿಷಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಖುದ್ದು ಹಾಜರಿದ್ದು ಉತ್ತರಿಸಬೇಕು. ಪಹಲ್ಗಾಂ ಗುಪ್ತಚರ ವೈಫಲ್ಯ, ಟ್ರಂಪ್ ಅವರ ಮಧ್ಯಸ್ಥಿಕೆ ಹೇಳಿಕೆ ಬಗ್ಗೆ ಉತ್ತರಿಸಬೇಕು ಎಂದೂ ಇಂಡಿಯಾ ಕೂಟ ನಿರ್ಣಯ ಕೈಗೊಂಡಿದೆ.

Shantha Kumari