ಅಧಿವೇಶನ ಮುಗಿಯುತ್ತಿದ್ದಂತೆ ಡಿಕೆಶಿ ಸಿಎಂ! – ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ ಕೈ ಶಾಸಕರು!

ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಯಾಗುತ್ತಿದೆ. ಸಿಎಂ ಕುರ್ಚಿ ಫೈಟ್ ಮತ್ತೆ ಸೌಂಡ್ ಮಾಡ್ತಿದೆ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದ್ದ ಡಿಸಿಎಂ ಡಿಕೆ ಶಿವಕುಮಾರ್ ನಿನ್ನೆ ರಾತ್ರಿ ಪ್ರವೀಣ್ ದೊಡ್ಡಣ್ಣನವರ್ ತೋಟದ ಮನೆಯಲ್ಲಿ 55–70 ಶಾಸಕರನ್ನು ಒಟ್ಟುಗೂಡಿಸಿದ್ದರು. ಇದ್ರ ಬೆನ್ನಲ್ಲೇ ಡಿಕೆಶಿ ಬಣ ಫುಲ್ ಆಕ್ಟಿವ್ ಆಗಿದೆ. ಇದೀಗ ಶಾಸಕರು ಸ್ಪೋಟಕ ಹೇಳಿಕೆ ನೀಡುತ್ತಿದ್ದಾರೆ. ಅಧಿವೇಶನ ಮುಗಿಯುತ್ತಿದ್ದಂತೆ ಡಿಕೆಶಿ ಸಿಎಂ ಆಗ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ನೀನೇ ನನ್ನ ಪ್ರಾಣ ಎಂದು ಗರ್ಭಿಣಿ ಮಾಡಿ ಕೈಕೊಟ್ಟ! – 2ನೇ ಮದುವೆಯಾಗಲು ಹೊರಟವನಿಗೆ ಶಾಕ್ ಕೊಟ್ಟ ಸಂತ್ರಸ್ತೆ!
ಬೆಳಗಾವಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಹೊತ್ತಲ್ಲೇ ಕೆಲ ನಾಯಕರ ಮಾತುಗಳು ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಸಿದ್ಧರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ನಾಯತ್ವ ಬದಲಾವಣೆ ಇಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ರು. ಇದೀಗ ಡಿ.ಕೆ ಅಲರ್ಟ್ ಆಗಿದೆ. ಇದೀಗ ಡಿಸಿಎಂ ಅತ್ಯಂತ ಆಪ್ತರೆನಿಸಿಕೊಂಡ ಶಾಸಕರಾದ ಇಕ್ಬಾಲ್ ಹುಸೇನ್ ಮತ್ತು ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ. ಸೋಮಶೇಖರ್ ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿದ್ದು, ಸಂಕ್ರಾಂತಿ ಅಲ್ಲ, ಅಧಿವೇಶನ ಮುಗಿಯುತ್ತಲೇ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ನನ್ನ ಹಣೆಯಲ್ಲಿ ಬರೆದಿದ್ದಕ್ಕೆ ನಾನು ಎಂಎಲ್ಎ ಆಗಿಲ್ಲವಾ? ಅದೇ ರೀತಿ ಡಿ.ಕೆ. ಶಿವಕುಮಾರ್ ಹಣೆಯಲ್ಲಿ ಬರೆದಿದೆ, ಅವರು ಸಿಎಂ ಆಗ್ತಾರೆ. ನಿನ್ನೆ ನಾವು 55 ಶಾಸಕರು ಡಿನ್ನರ್‌ಗೆ ಸೇರಿದ್ವಿ. ಊಟ ಮಾಡಿದ್ದೇವೆ ಅಷ್ಟೇ, ಆದರೆ ಡಿಕೆಶಿ ಸಿಎಂ ಆಗ್ತಾರೆ ಅನ್ನೋದು ನಿಶ್ಚಿತ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಯಾರಿಗೆ ಯಾವಾಗ ಜ್ಞಾನೋದಯ ಆಗುತ್ತೋ ಗೊತ್ತಿಲ್ಲ. ಫಲಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಇಕ್ಬಾಲ್ ಹುಸೇನ್ ಹೇಳಿದ್ದು, ನಿನ್ನೆ ಬೆಳಗ್ಗೆ ಯತೀಂದ್ರ ಸಿದ್ದರಾಮಯ್ಯ ನಾಯಕತ್ವ ಬದಲಾವಣೆ ಇಲ್ಲ ಎಂಬ ಹೇಳಿಕೆಗೆ ನೇರ ತಿರುಗೇಟು ನೀಡಿದಂತಿದೆ. ಹೈಕಮಾಂಡ್ ಈಗ ಸುಮ್ಮನಿದೆ ಏಕೆಂದರೆ ಅಧಿವೇಶನ ನಡೀತಿದೆ. ಅಧಿವೇಶನ ಮುಗಿಯಲಿ, ತೀರ್ಮಾನ ಆಗುತ್ತೆ ಎಂದು ಸಂಚಲನ ಹೇಳಿಕೆ ನೀಡಿದ್ದಾರೆ.
ಇತ್ತ ಬಿಜೆಪಿ ಉಚ್ಚಾಟಿತ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಕೂಡ ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ. ಡಿ.ಕೆ. ಶಿವಕುಮಾರ್ ಯಾಕ್ರೀ ಸಿಎಂ ಆಗಬಾರದು…?, ಪಕ್ಷ ಕಟ್ಟಿದ್ದಾರೆ, ಶ್ರಮ ಪಟ್ಟಿದ್ದಾರೆ, ಕೂಲಿ ಕೇಳ್ತಿದ್ದಾರೆ. ನನ್ನ ಹಣೆಯಲ್ಲಿ ಬಿಜೆಪಿಗೆ ಹೋಗಿ ಮಂತ್ರಿ ಆಗಬೇಕು ಅಂತಾ ಇತ್ತು. ಅದೇ ರೀತಿ ಡಿಕೆಶಿ ಹಣೆಯಲ್ಲಿ ಬರೆದಿದ್ರೆ ಸಿಎಂ ಆಗುತ್ತಾರೆ. ಅವರು ಯಾಕೆ ಬಿಜೆಪಿಗೆ ಹೋಗಿ ಸಿಎಂ ಆಗಬೇಕು?. ನಿನ್ನೆ ಡಿನ್ನರ್‌ಗೆ ಕರೆದಿದ್ರು, ನಾನು ಹೋಗಿದ್ದೆ. ಸುಮಾರು 70 ಜನ ಶಾಸಕರು ಇದ್ದರು ಎಂದಿದ್ದಾರೆ.
ಅಧಿವೇಶನ ಇನ್ನೂ ಐದು ದಿನಗಳ ಕಾಲ ನಡೆಯಲಿದೆ. ಆದರೆ ಡಿಕೆಶಿ ಬಣದ ಈ ಹೇಳಿಕೆಗಳಿಂದ ಸಿದ್ದರಾಮಯ್ಯ ಬಣದಲ್ಲಿ ಆತಂಕ ಮನೆ ಮಾಡಿದೆ. ಹೈಕಮಾಂಡ್ ಈಗಾಗಲೇ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಳಗೊಂಡ ಸಭೆ ನಡೆಸಿದೆ ಎಂಬ ಮಾಹಿತಿ ಇದೆ. ಅಧಿವೇಶನ ಮುಗಿಯಲಿ, ತೀರ್ಮಾನ ಆಗುತ್ತದೆ ಎಂಬ ಇಕ್ಬಾಲ್ ಹುಸೇನ್ ಮಾತುಗಳು ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ.

ನೋಡಿರಿ

