ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಡ್ರೋನ್ ಗೆ ಶಾಕ್ ಮೇಲೆ ಶಾಕ್! – ಪ್ರತಾಪ್ ವಿರುದ್ಧ ಮತ್ತೊಂದು ಕೇಸ್!
ಬಿಗ್ ಬಾಸ್ ಕನ್ನಡ ಸೀಸನ್ -10 ರ ಸ್ಪರ್ಧಿ ಡ್ರೋನ್ ಪ್ರತಾಪ್‌ಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಲೇ ಇದೆ. ಡ್ರೋನ್ ಮೇಲೆ ಪದೇ ಪದೇ ಕೇಸ್ ದಾಖಲಾಗುತ್ತಲೇ ಇದೆ. ಇದೀಗ ಪ್ರತಾಪ್ ಮೇಲೆ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಇದನ್ನೂ ಓದಿ: ಅಯ್ಯೋ ದುರ್ವಿಧಿಯೇ.. ಚಕ್ಕುಲಿಯಿಂದ ಹೊರಟೇ ಹೋಯ್ತು ಈ ವ್ಯಕ್ತಿಯ ಪ್ರಾಣ!
ಪ್ರತಾಪ್ ವಿರುದ್ಧ ಬನಶಂಕರಿ ಮೂಲದ ಪರಮೇಶ್ ಎಂಬುವರು ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಡ್ರೋನ್ ಪ್ರತಾಪ್ ಡ್ರೋನ್ ಮಾರಾಟ ಮಾಡುತ್ತಿಲ್ಲ. ನಾಗರಿಕ ವಿಮಾನಯಾನ ಸಚಿವಾಲಯದಿಂದ ಅನುಮತಿಯೇ ಪಡೆದಿಲ್ಲ. ಇವರು ನಡೆಸುತ್ತಿರೋ ಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಪರವಾನಗಿ ಪಡೆದೇ ಇಲ್ಲ. ಹೀಗಾಗಿ ಡ್ರೋನ್ ಪ್ರತಾಪ್ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಪರವಾನಗಿ ಇಲ್ಲದ ಡ್ರೋನ್ ಮಾರಾಟ ಮಾಡುವ ಮೂಲಕ ಜನರಿಗೆ ವಂಚನೆ ಮಾಡಲಾಗುತ್ತಿದೆ. ಇದು ಕಾನೂನು ಬಾಹಿರ, ಕೂಡಲೇ ಕ್ರಮಕೈಗೊಳ್ಳಿ ಎಂದು ದೂರಿನಲ್ಲಿ ತಿಳಿಸಲಾಗಿದೆ.