ಗುಜರಾತ್ ಎಲೆಕ್ಷನ್ – “ಮಿನಿ ಆಫ್ರಿಕನ್” ಗ್ರಾಮಸ್ಥರಿಂದ ಮೊದಲ ಬಾರಿಗೆ ಮತದಾನ

ಗುಜರಾತ್ ಎಲೆಕ್ಷನ್ – “ಮಿನಿ ಆಫ್ರಿಕನ್” ಗ್ರಾಮಸ್ಥರಿಂದ ಮೊದಲ ಬಾರಿಗೆ ಮತದಾನ

ಜಂಬೂರ್‌: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಇದೇ ಮೊದಲ ಬಾರಿಗೆ ಆಫ್ರಿಕಾ ಮೂಲದ ಆದಿವಾಸಿಗಳಿಗೆ ತಮ್ಮದೇ ಮತಗಟ್ಟೆಯಲ್ಲಿ ಮತದಾನ ಮಾಡುವ ಅವಕಾಶ ದೊರೆತಿದೆ. ನೂರಾರು ವರ್ಷಗಳ ಹಿಂದೆ ಆಫ್ರಿಕಾದಿಂದ ವಲಸೆ ಗುಜರಾತ್ ನ ಜಂಬೂರ್ ಎಂಬ ಪ್ರದೇಶದಲ್ಲಿ ಸಿದ್ದಿ ಜನಾಂಗದವರು ನೆಲೆಸಿದ್ದರು. ಇದೇ ಮೊದಲ ಬಾರಿಗೆ ತಮ್ಮದೇ ವಿಶೇಷ ಮತಗಟ್ಟೆಯಲ್ಲಿ ಮತದಾನ ನಡೆಸುವ ಅವಕಾಶ ಇಲ್ಲಿನ ನಿವಾಸಿಗಳಿಗೆ ದೊರೆತಿದೆ.

ಇಂದು ಬೆಳಗ್ಗೆ 8ರಿಂದಲೇ ಗುಜರಾತ್‌ ವಿಧಾನಸಭಾ 89 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ಇದೇ ವೇಳೆ ಈ ಜಂಬೂರ್‌ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಇಲ್ಲಿನ ಜನರಿಗಾಗಿಯೇ ಮೊದಲ ಬಾರಿಗೆ ವಿಶೇಷ ಮತಗಟ್ಟೆ ತೆರೆಯಲಾಗಿದೆ. ಆದಿವಾಸಿ ಸಮುದಾಯವರೆಲ್ಲರೂ ಒಂದೇ ಕಡೆ ಮತದಾನ ನಡೆಸುವ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಗುಜರಾತ್ ಎಲೆಕ್ಷನ್ – ಸಿಲಿಂಡರ್ ಸಮೇತ ಬಂದು ಶಾಸಕರ ಮತದಾನ!

“ಚುನಾವಣಾ ಆಯೋಗವು ನಮಗೆ ಮತದಾನ ಮಾಡಲು ವಿಶೇಷ ಮತಗಟ್ಟೆ ವ್ಯವಸ್ಥೆ ಕಲ್ಪಿಸಿರುವುದು ನಮಗೆ ತುಂಬಾ ಸಂತೋಷದ ತಂದಿದೆ. ನಾವು ಈ ಗ್ರಾಮದಲ್ಲಿ ನೂರಾರು ವರ್ಷಗಳಿಂದ ವಾಸಿಸುತ್ತಿದ್ದೇವೆ. ಆದರೆ ಈವರೆಗೂ ನಮಗೆ ಮತದಾನ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಇಂದು ಮೊದಲ ಬಾರಿಗೆ ಈ ಅವಕಾಶ ಸಿಕ್ಕಿರುವುದು ನಮಗೆ ಸಂತಸವಾಗಿದೆ” ಸ್ಥಳೀಯರು ಹೇಳಿದ್ದಾರೆ.

ಸಿದ್ದಿ ಸಮುದಾಯದಿಂದ ವಿಧಾನಸಭೆಗೆ ಪ್ರತಿನಿಧಿಯೊಬ್ಬರನ್ನು ಕಳುಹಿಸಬೇಕೆಂಬ ಅಭಿಲಾಷೆಯೂ ಇಲ್ಲಿನ ಜನರಿಗಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಈ ಸಮುದಾಯದಿಂದ ಅಭ್ಯರ್ಥಿಯೊಬ್ಬರು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ತಮಗೆ ಎಸ್ಟಿ ಮೀಸಲಾತಿ ಇದ್ದರೂ ಅದರ ಯಾವ ಫಲವನ್ನೂ ನಾವು ಅನುಭವಿಸುತ್ತಿಲ್ಲ. ಸರ್ಕಾರದ ಯಾವ ಯೋಜನೆಗಳು ನಮಗೆ ತಲುಪುತ್ತಿಲ್ಲ ಎಂದು ಇಲ್ಲಿನ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಸ್ಥಳೀಯರು ಇಂದಿಗೂ ಆಫ್ರಿಕಾ ಮೂಲದ ಜಾನಪದ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಆದಿವಾಸಿಗಳ ವೇಷ- ಭೂಷಣಗಳು, ಹಾಡು-ಕುಣಿತಗಳು, ಸಾಹಸಗಳನ್ನು ಇಂದಿಗೂ ಪ್ರದರ್ಶಿಸುತ್ತಿದ್ದಾರೆ. ಅಲ್ಲದೇ ಇಲ್ಲಿನ ಜನರು ಹಿಂದಿ, ಗುಜರಾತಿ ಭಾಷೆಗಳಲ್ಲಿ ಜನರು ಮಾತನಾಡುತ್ತಾರೆ.

suddiyaana