ಬಿಗ್‌ಬಾಸ್‌ನಲ್ಲಿ ಆರ್ಯವರ್ಧನ್ ಗುರೂಜಿ ಆಟ ಮುಗೀತಾ ? – ಗುರೂಜಿಗೆ ಕೈ ಕೊಡ್ತಾ ನಂಬರ್?

ಬಿಗ್‌ಬಾಸ್‌ನಲ್ಲಿ ಆರ್ಯವರ್ಧನ್ ಗುರೂಜಿ ಆಟ ಮುಗೀತಾ ? –  ಗುರೂಜಿಗೆ ಕೈ ಕೊಡ್ತಾ ನಂಬರ್?

ಬಿಗ್ ಬಾಸ್ ರಿಯಾಲಿಟಿ ಶೋ ಈಗ ಫಿನಾಲೆ ಹಂತಕ್ಕೆ ಬಂದು ತಲುಪಿದೆ. ಇದೇ ವಾರಾಂತ್ಯಕ್ಕೆ ಬಿಗ್ ಬಾಸ್ ಶೋ ಮುಕ್ತಾಯಗೊಳ್ಳಲಿದೆ. ಕಳೆದ ವಾರಂತ್ಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಎಂಟಿತ್ತು. ಬಿಗ್ ಬಾಸ್ ಫಿನಾಲೆಗೆ ಇರಬೇಕಾದ ಸ್ಪರ್ಧಿಗಳ ಸಂಖ್ಯೆ ಐದು. ಹೀಗಾಗಿ, ಫೈನಲ್​ಗೂ ಮುನ್ನ ಮೂರು ಎಲಿಮಿನೇಷನ್ ನಡೆಯಲಿದೆ ಎಂದು ಸುದೀಪ್ ಘೋಷಣೆ ಮಾಡಿದ್ದರು. ಈಗಾಗಲೇ ಅರುಣ್ ಸಾಗರ್ ಮತ್ತು ಅಮೂಲ್ಯಗೌಡ ಶೋದಿಂದ ಔಟ್ ಆಗಿದ್ದಾರೆ.

ಇದನ್ನೂ ಓದಿ:  ಪ್ರಧಾನಿ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಇದೀಗ ಬಿಗ್ ಬಾಸ್‌ನಲ್ಲಿ ವಾರದ ಮಧ್ಯೆ ಒಂದು ಎಲಿಮಿನೇಷನ್ ನಡೆದಿದೆ.  ಆರು ಇದ್ದ ಸ್ಪರ್ಧಿಗಳ ಸಂಖ್ಯೆ ಐದಾಗಿದೆ. ಒಬ್ಬರು ವಾರದ ಮಧ್ಯದಲ್ಲಿ ಔಟ್ ಆಗಿದ್ದಾರೆ.  ಈ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಒಂದು ಕ್ರೇನ್ ಮಾದರಿಯ ವಸ್ತುವನ್ನು ಇಡಲಾಗಿದೆ. ಅದರ ಮೇಲೆ ಸ್ಪರ್ಧಿಗಳು ನಿಲ್ಲಬೇಕು. ಅದು ಕೆಳಗೆ ಹೋಗಿ ಮೇಲೆ ಬರುತ್ತದೆ. ಯಾವ ಸ್ಪರ್ಧಿ ಕಾಣುವುದಿಲ್ಲವೋ ಅವರು ಎಲಿಮಿನೇಟ್ ಆಗಿದ್ದಾರೆ ಎಂದರ್ಥ.

ಸದ್ಯ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್ ಇದ್ದಾರೆ. ಈ ಪೈಕಿ ಆರ್ಯವರ್ಧನ್ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ.

suddiyaana