ಸಿನಿಮಾ ಆಫರ್ ನಿರಾಕರಿಸಿದ ಶಾರುಖ್ ಪುತ್ರ ಆರ್ಯನ್ ಖಾನ್
ತೆರೆ ಮೇಲೆ ಬರುವುದಕ್ಕಿಂತ ಮರೆ ಮೇಲೆ ಇರುವುದೇ ಲೇಸು ಎಂದ ಆರ್ಯನ್

ಸಿನಿಮಾ ಆಫರ್ ನಿರಾಕರಿಸಿದ ಶಾರುಖ್ ಪುತ್ರ ಆರ್ಯನ್ ಖಾನ್ತೆರೆ ಮೇಲೆ ಬರುವುದಕ್ಕಿಂತ ಮರೆ ಮೇಲೆ ಇರುವುದೇ ಲೇಸು ಎಂದ ಆರ್ಯನ್

ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್‌ ತನಗೆ ಬಂದಿರುವ ಸಿನಿಮಾ ಆಫರ್​ ರಿಜೆಕ್ಟ್ ಮಾಡುವ ಮೂಲಕ ಎಲ್ಲರಲ್ಲೂಅಚ್ಚರಿ ಮೂಡಿಸಿದ್ದಾರೆ.

25ರ ಹರೆಯದ ಆರ್ಯನ್‌ ಯಾವಾಗ ಸಿನಿಮಾರಂಗಕ್ಕೆ ಬರುತ್ತಾರೆ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಅದರಲ್ಲೂ ಬಾಲಿವುಡ್ ಸ್ಟಾರ್ ಕಿಡ್‌ಗಳನ್ನು ಲಾಂಚ್ ಮಾಡುವುದರಲ್ಲಿ ಫೇಮಸ್ ಆಗಿರುವ ಕರಣ್ ಜೋಹರ್ ಕೂಡ ಆರ್ಯನ್‌ರನ್ನು ಲಾಂಚ್ ಮಾಡುವುದಕ್ಕೆ ಮುಂದಾಗಿದ್ದರು. ಆದರೆ ಈ ಆಫರ್‌ ಅನ್ನು ಆರ್ಯನ್ ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:  ಪ್ರಿಯತಮೆ ಜೊತೆ ಇರಲು 100 ಕೋಟಿ ಖರ್ಚು ಮಾಡಿದ ಹೃತಿಕ್ ರೋಷನ್!
ಅಷ್ಟೇ ಏಕೆ, ನಿರ್ದೇಶಕಿ ಜೋಯಾ ಅಖ್ತರ್‌ ಕೂಡ ಆರ್ಯನ್‌ಗಾಗಿ ಸ್ಕ್ರಿಪ್ಟ್ ಮಾಡಿಕೊಂಡಿದ್ದರು. ಸದ್ಯ ಅವರು ಮಾಡುತ್ತಿರುವ ‘ದಿ ಆರ್ಚಿಸ್‌’ ಸಿನಿಮಾದಲ್ಲಿ ಆರ್ಯನ್‌ಗೂ ಪಾತ್ರವಿತ್ತು. ಆದರೆ ಆರ್ಯನ್ ಅದಕ್ಕೂ ನೋ ಎಂದಿದ್ದರು. ‘ದಿ ಆರ್ಚಿಸ್‌’ನಲ್ಲಿ ಸುಹಾನಾ ಖಾನ್ ನಟಿಸುತ್ತಿರುವುದು ವಿಶೇಷ.

ಮೂಲಗಳ ಪ್ರಕಾರ, ಆರ್ಯನ್‌ಗೆ ತೆರೆಮೇಲೆ ಕಾಣಿಸುವುದಕ್ಕಿಂತ ತೆರೆಹಿಂದೆ ಕೆಲಸ ಮಾಡುವುದು ಇಷ್ಟವಂತೆ. ‘ಆರ್ಯನ್ ಖಾನ್‌ಗೆ ನಟನೆಯಲ್ಲಿ ಆಸಕ್ತಿ ಇಲ್ಲ. ನಿರ್ದೇಶನ ಮಾಡಬೇಕು ಎಂಬ ಬಯಕೆ ಇದೆ. ಚಿತ್ರಕಥೆ ಬರೆಯುವುದು ಹಾಗೂ ನಿರ್ದೇಶನದ ಬಗ್ಗೆ ನಾಲ್ಕು ವರ್ಷಗಳ ಕಾಲ ತರಬೇತಿ ಪಡೆದಿದ್ದಾನೆ’ ಎಂದು ಪುತ್ರನ ಬಗ್ಗೆ ಈ ಹಿಂದೆ ಶಾರುಖ್ ಖಾನ್ ಹೇಳಿದ್ದರು.

ಈಗಾಗಲೇ ಆರ್ಯನ್‌ ಒಂದು ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ. ತಮ್ಮ ಬರವಣಿಗೆ ಹೊಸ ಪ್ರಾಜೆಕ್ಟ್ ಅನ್ನು ಅವರು ಅತೀ ಶೀಘ್ರದಲ್ಲೇ ಘೋ‍ಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಸಿನಿಮಾ, ವೆಬ್ ಸಿರೀಸ್ ಮಾಡುವತ್ತಲೂ ಅವರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅದಕ್ಕೆ ಬೇಕಾದ ಸ್ಕ್ರಿಪ್ಟ್ ತಯಾರಿಗಳನ್ನು ಕೂಡ ಅವರು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್‌ ಕೆಲವು ತಿಂಗಳ ಹಿಂದೆ ಡ್ರಗ್ಸ್ ಕೇಸ್ ನಲ್ಲಿ ಸಿಲುಕಿದ್ದರು. ಎನ್ ಸಿಬಿಯಿಂದ ಬಂಧನಕ್ಕೂ ಒಳಗಾಗಿ, ಬಳಿಕ ಜಾಮೀನಿನ ಮೂಲಕ ಬಿಡುಗಡೆಯಾಗಿದ್ದರು.

suddiyaana