ಬಿಗ್‌ಬಾಸ್‌ ಮನೆಯಿಂದ ಹೊರನಡೆದ ಅರುಣ್ ಸಾಗರ್ – ಆಸ್ಪತ್ರೆಯಲ್ಲಿ ಮಗಳನ್ನು ನೋಡಿ ಭಾವುಕ

ಬಿಗ್‌ಬಾಸ್‌ ಮನೆಯಿಂದ ಹೊರನಡೆದ ಅರುಣ್ ಸಾಗರ್ – ಆಸ್ಪತ್ರೆಯಲ್ಲಿ ಮಗಳನ್ನು ನೋಡಿ ಭಾವುಕ

ಬಿಗ್ ಬಾ ಈ ಮಧ್ಯೆ ಬಿಗ್‌ಬಾಸ್ ಸ್ಪರ್ಧಿ ಅರುಣ್ ಸಾಗರ್ ದಿಢೀರ್ ಅಂತಾ ಮನೆಯಿಂದ ಹೊರಗೆ ಹೋಗಿದ್ದಾರೆ.   ನವೆಂಬರ್ 19ರ ಎಪಿಸೋಡ್‌ನಲ್ಲಿ  ಬಿಗ್ ಬಾಸ್ ಮನೆಯಿಂದ ಅರುಣ್ ಸಾಗರ್ ಹೊರ ನಡೆದಿದ್ದಾರೆ. ಅವರು ಮರಳಿ ಬಿಗ್ ಬಾಸ್ ಮನೆಗೆ ಬರುತ್ತಾರೋ ಅಥವಾ ಇಲ್ಲವೋ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿತ್ತು. ಅದಕ್ಕೆ ಅದೇ ಎಪಿಸೋಡ್ನಲ್ಲಿ ಉತ್ತರ ಸಿಕ್ಕಿದೆ.

ಇದನ್ನೂ ಓದಿ :  ‘ದ್ವೇಷವೇ ಎಲ್ಲದಕ್ಕೂ ಉತ್ತರವಲ್ಲ’ -ದರ್ಶನ್ ಮೇಲೆ ಚಪ್ಪಲಿ ಎಸೆತಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ತಲುಪಲು ಕೆಲವೇ ದಿನಗಳು ಬಾಕಿ ಇರುವಾಗ ಅರುಣ್ ಸಾಗರ್ ಮನೆಯಿಂದ ಹೊರ ನಡೆದಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಕೊನೆಗೂ ಅರುಣ್ ಸಾಗರ್ ಹೊರ ಹೋಗಿರೋ ವಿಚಾರ ಗೊತ್ತಾಗಿದೆ. ಅರುಣ್ ಸಾಗರ್ ಅವರನ್ನು ಕನ್ಫೆಷನ್ ರೂಂಗೆ ಬರುವಂತೆ ಬಿಗ್ ಬಾಸ್ ಸೂಚನೆ ನೀಡಿದರು. ಕನ್ಫೆಷನ್ ರೂಂಗೆ ಬರುತ್ತಿದ್ದಂತೆ ಅರುಣ್ ಸಾಗರ್ ಬಳಿ ‘ನಿಮ್ಮ ಮಗಳು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆದರುವ ಅವಶ್ಯಕತೆ ಇಲ್ಲ. ನೀವು ಮಗಳನ್ನು ನೋಡಲು ಹೋಗುತ್ತೀರಿ ಎಂದರೆ ಬಿಗ್ ಬಾಸ್ ವ್ಯವಸ್ಥೆ ಮಾಡುತ್ತಾರೆ’ ಎಂದು ಬಿಗ್ ಬಾಸ್ ತಿಳಿಸಿದರು. ಇದನ್ನು ಕೇಳಿ ಅರುಣ್ ಸಾಗರ್ ಭಾವುಕರಾದರು. ಆಸ್ಪತ್ರೆಗೆ ಹೋಗುವ ನಿರ್ಧಾರಕ್ಕೆ ಬಂದರು. ಆಸ್ಪತ್ರೆಗೆ ತೆರಳಿ ರಾತ್ರಿ ವೇಳೆಗೆ ದೊಡ್ಮನೆಗೆ ಮರಳಿದ್ದಾರೆ. ‘ಮಗಳಿಗೆ ಆಪರೇಷನ್ ಮಾಡಲಾಗಿದೆ. ತಲೆಸುತ್ತು ಬಂದು ಬಿದ್ದಳು. ಈಗ ಚೇತರಿಕೆ ಕಾಣುತ್ತಿದ್ದಾಳೆ’ ಎಂದು ಮನೆ ಮಂದಿಗೆ ಅರುಣ್ ಸಾಗರ್ ಅಪ್ಡೇಟ್ ನೀಡಿದರು.

suddiyaana